ತೆವಳುತ್ತಿರುವ ವೃದ್ಧನ ವಿಡಿಯೋ ವೈರಲ್, ಮನೆ ಬಾಗಿಲಿಗೆ ಬಂತು ಪಿಂಚಣಿ

By Kannadaprabha News  |  First Published Apr 28, 2020, 12:06 PM IST

ಪರಶುರಾಂಪುರದ ಪಿ.ಮಹದೇವಪುರದ ವಯೋವೃದ್ಧ ಪೆನ್ನಪ್ಪ ಎಂಬವರಿಗೆ ಅಂತೂ ಕೊನೆಗೂ ಅಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ಅವರ ಪಿಂಚಣಿ ನೀಡಿದ್ದಾರೆ.


ಚಿತ್ರುರ್ಗ(ಏ.28): ಪರಶುರಾಂಪುರದ ಪಿ.ಮಹದೇವಪುರದ ವಯೋವೃದ್ಧ ಪೆನ್ನಪ್ಪ ಎಂಬವರಿಗೆ ಅಂತೂ ಕೊನೆಗೂ ಅಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ಅವರ ಪಿಂಚಣಿ ನೀಡಿದ್ದಾರೆ.

ಪಿಂಚಣಿ ಪಡೆಯಲು ಅಂಚೆ ಕಚೇರಿ ಮುಂಭಾಗ ಪೆನ್ನಪ್ಪ ನೆಲದಲ್ಲಿಯೇ ತೆವಳುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ನೋಡಿ ಎಚ್ಚೆತ್ತುಕೊಂಡ ಅಧಿಕಾರಿಗಳು ಆತನ ಊರು ಹುಡುಕಿಕೊಂಡು ಬಂದು ಪಿಂಚಣಿ ನೀಡಿ ವಾಪಸ್ಸಾಗಿದ್ದಾರೆ.

Tap to resize

Latest Videos

ಮಾಸ್ಕ್ ಧರಿಸದಿದ್ರೆ 100 ರೂ. ದಂಡ, ಏ.30ರಿಂದಲೇ ಜಾರಿ..!

ಪೆನ್ನಪ್ಪನಿಗೆ ಪಿಂಚಣಿ ಬಾರದೇ ಇರುವುದನ್ನು ಮನಗಂಡ ತಾಪಂ ಇಒ ಶ್ರೀಧರ ಬಾರಿಕೇರ ಅಂಚೆ ಕಚೇರಿಗೆ ಹೋಗಿ ಪರಿಶೀಲಿಸಿ ಪೊಸ್ಟ್‌ ಮ್ಯಾನ್‌ಗೆ ಎಚ್ಚರಿಕೆ ನೀಡಿ ಬಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಮೂರು ತಿಂಗಳ ಸಾಮಾಜಿಕ ಭದ್ರತೆಯ ಪಿಂಚಣಿ ನೀಡಲಾಗಿದೆ.

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!

ಗ್ರಾಪಂ ಅಧ್ಯಕ್ಷೆ ಸರೋಜಮ್ಮ ಹನುಮಂತರಾಯಪ್ಪ, ತಾಪಂ ಇಒ ಶ್ರೀಧರ ಬಾರೇಕೆರ್‌, ಉಪ ತಹಶೀಲ್ದಾರ್‌ ವಸಂತಕುಮಾರ್‌, ಪಿಡಿಒ ಮಲ್ಲೇಶಪ್ಪ, ಕಾರ್ಯದರ್ಶಿ ಸೋಮಶೇಖರ್‌, ಗ್ರಾಪಂ ಸದಸ್ಯ ರಾಜಶೇಖರ, ನಾಡ ಕಚೇರಿ ಹನುಮಂತರಾಯ, ಗೋವರ್ಧನ, ರಾಮಾಂಜಿನಪ್ಪ, ಮಧುಕುಮಾರ್‌, ರಾಜ್‌ ಕುಮಾರ್‌ ಉಪಸ್ಥಿತರಿದ್ದರು.

click me!