'ಒಳ್ಳೆ ಕೆಲಸ ಮಾಡ್ತಿದ್ಯ, ಮಾಡವ್ವ ನಿಂಗೆ ಒಳ್ಳೇದಾಗ್ಲಿ' : ಅನಿತಾಗೆ ಸಿಕ್ಕ ವಿಶೇಷ ಆಶೀರ್ವಾದ

By Suvarna News  |  First Published Jul 14, 2021, 3:52 PM IST
  • ಶಾಸಕಿ ಅನಿತಾ ಕುಮಾರಸ್ವಾಮಿ ಇಂದು ರಾಮನಗರಕ್ಕೆ ಭೇಟಿ  ನೀಡಿದ ಸಂದರ್ಭದಲ್ಲಿ ಸಿಕ್ಕ ವಿಶೇಷ ಆಶೀರ್ವಾದ
  •  ಶ್ರೀರಾಮ ಮಂದಿರದಲ್ಲಿ ಪೂಜೆ ಮಾಡುವ ವೆಂಕಟಲಕ್ಷ್ಮಮ್ಮ ಎಂಬ ವೃದ್ಧೆಯಿಂದ ಆಶೀರ್ವಾದ

ರಾಮನಗರ (ಜು.14):    ಶಾಸಕಿ ಅನಿತಾ ಕುಮಾರಸ್ವಾಮಿ ಇಂದು ರಾಮನಗರಕ್ಕೆ ಭೇಟಿ  ನೀಡಿದ ಸಂದರ್ಭದಲ್ಲಿ ವೃದ್ಧೆಯೋರ್ವರು ಅಪ್ಪಿ ಆಶೀರ್ವಾದ ಮಾಡಿದ್ದಾರೆ. 

ರಾಮನಗರದ ಕ್ಷೇತ್ರದ ಕೈಲಾಂಚ ಮತ್ತು ಹುಲಿಕೆರೆ ಗುನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದ ಸಂದರ್ಭದಲ್ಲಿ ಬಂದ ವೃದ್ಧೆಯೊಬ್ಬರು ಆತ್ಮೀಯತೆಯಿಂದ ಶಾಸಕರನ್ನ ಅಪ್ಪಿಕೊಂಡು ತಲೆ ಮುಟ್ಟಿ ಆಶೀರ್ವದಿಸಿದ ಘಟನೆ ನಡೆದಿದೆ. 

Tap to resize

Latest Videos

ಕೊರೋನ ವಾರಿಯರ್ಸ್ ನೆರವಿಗೆ ನಿಂತ ನಿಖಿಲ್ : JDS ಅಧಿಕಾರಕ್ಕೇರುವ ಭರವಸೆ ಕೊಟ್ಟ ಅನಿತಾ

 ರಾಮನಗರ ತಾಲೂಕು ಕೈಲಾಂಚ ಗ್ರಾಮ ಪಂಚಾಯ್ತಿಯ ಅಂಕನಹಳ್ಳಿ  ಶ್ರೀರಾಮ ಮಂದಿರದಲ್ಲಿ ಪೂಜೆ ಮಾಡುವ ವೆಂಕಟಲಕ್ಷ್ಮಮ್ಮ ಎಂಬ ವೃದ್ಧೆಯೇ ಆಶೀರ್ವಾದ ಮಾಡಿದವರು.

ನಮ್ಮ ರಾಮನಗರದಲ್ಲಿ ಒಳ್ಳೇ ಕೆಲ್ಸ ಮಾಡ್ತಿದ್ಯ ಕಣವ್ವ, ಹಿಂಗೆ ನಮ್ಮೂರ್ಗೆಲ್ಲ ಒಳ್ಳೇದ್ ಮಾಡವ್ವ. ನಮ್ಮೂರ್ ಹೆಣ್ಮಕ್ಳು ಹೇಳ್ತಿರ್ತವೆ ಕಣವ್ವ ನಿನ್ನ ಬಗ್ಗೆ ಅನಿತಮ್ಮ ಚೆನ್ನಾಗಿ ಕೆಲ್ಸ ಮಾಡ್ತಾರೆ, ಶ್ಯಾನೆ ಧೈರ್ಯ ಅನಿತಮ್ಮಂಗೆ ಅಂತ.  ನಿನಗೆ ಆ ದ್ಯಾವ್ರು ಇನ್ನೂ ಜಾಸ್ತಿ ಶಕ್ತಿ ಕೊಡ್ಲಿ ಕಣವ್ವ. ನಿಂಗೆ ಆ ಭಗವಂತ ಒಳ್ಳೇದ್ ಮಾಡ್ಲಿ ಕಣವ್ವ. ನಮ್ಮಂತ ಬಡವ್ರುಗೆ ಒಳ್ಳೇದ್ ಮಾಡ್ತಿರೋ ನಿಂಗೆ ನೂರ್ ವರ್ಸ ಆಯಸ್ ಕೊಡ್ಲಿ ಕಣವ್ವ ಎಂದು ಬಾಯ್ತುಂಬ ಹೊಗಳಿದರು.  

 ಮತ್ತೆ ಸಿಎಂ ಆಗುವ ವಿಚಾರ ಪ್ರಸ್ತಾಪ : ಚನ್ನಪಟ್ಟಣದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ   
ನಾನು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ಸಾಲಮನ್ನಾ ಮಾಡಲು 14 ತಿಂಗಳಲ್ಲಿ ಪ್ರಯತ್ನ ಮಾಡಿದ್ದೆ.  ಆದರೆ ಮುಂದೆ ಅವಕಾಶ ಸಿಕ್ಕರೆ 25 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಯೋಜನೆ ಮಾಡುತ್ತೇನೆ ಎಂದು ಭರವಸೆ  ನೀಡಿದರು.

ಮನೆಗೆ ಗಂಡು ಮಗುವಿನ ಆಗಮನ : ಜೆಡಿಎಸ್‌ಗೆ ಅಧಿಕಾರ ಖಚಿತ
 
ರೈತರಿಗಾಗಿ ಹೊಸ ಚಿಂತನೆ ಮಾಡಿದ್ದೇನೆ.  ಅದಕ್ಕಾಗಿಯೇ ಈಗ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ವ್ಯವಸಾಯ ಮಾಡುತ್ತಿದ್ದೇನೆ.  ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿ ರಾಜಕೀಯಕ್ಕೆ ಬರುವ ಮುನ್ನವೇ ತೋಟ ಖರೀದಿ ಮಾಡಿದ್ದೆ. ಆದರೆ ರಾಜಕೀಯ ಕಾರಣದಿಂದ ಅದರಿಂದ ದೂರ ಉಳಿದಿದ್ದೆ. ಆದರೆ ಈಗ ತೋಟದಲ್ಲಿಯೇ ಕೃಷಿ ಪ್ರಾರಂಭ ಮಾಡಿದ್ದೇನೆ.  ರೈತರಿಗೆ ಈ ಮೂಲಕ ಅರಿವು ಮೂಡಿಸಲು ಪ್ರಾರಂಭಿಸಿದ್ದೇನೆ.  ಕಳೆದ 6 ತಿಂಗಳಿಂದ ತೋಟದಲ್ಲಿ ಕ್ಱಷಿ ಕೆಲಸ ನಡೆಯುತ್ತಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. 

click me!