ಕೊರೋನಾ ಸೋಂಕು ಪರಿಣಾಮದಿಂದಾಗಿ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ವೃದ್ಧಾಶ್ರಮಕ್ಕೂ ಬಿಸಿ ತಟ್ಟಿದೆ. ಸೋಮವಾರಪೇಟೆ ಸುಂಟಿಕೊಪ್ಪ ಸಮೀಪ ಎನ್‌ಜಿಒ ಸಂಸ್ಥೆಯೊಂದು ನಡೆಸುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್‌ಗೂ ಕೊರೋನಾ ಸಂಕಷ್ಟತಂದೊಡ್ಡಿದೆ.
ಮಡಿಕೇರಿ(ಏ.11): ಕೊರೋನಾ ಸೋಂಕು ಪರಿಣಾಮದಿಂದಾಗಿ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ವೃದ್ಧಾಶ್ರಮಕ್ಕೂ ಬಿಸಿ ತಟ್ಟಿದೆ. ಸೋಮವಾರಪೇಟೆ ಸುಂಟಿಕೊಪ್ಪ ಸಮೀಪ ಎನ್‌ಜಿಒ ಸಂಸ್ಥೆಯೊಂದು ನಡೆಸುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್‌ಗೂ ಕೊರೋನಾ ಸಂಕಷ್ಟತಂದೊಡ್ಡಿದೆ.
ಸಂಸ್ಥೆ ಪ್ರಾರಂಭವಾಗಿ 5 ವರ್ಷಗಳಿಂದಲೂ ದಾನಿಗಳು ಕೊಡುತ್ತಿದ್ದ ಆರ್ಥಿಕ ನೆರವಿನೊಂದಿಗೆ ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ ಆಗ ಸಂಸ್ಥೆಗೆ ಸೂಕ್ತ ಪ್ರಮಾಣದ ಅಗತ್ಯ ವಸ್ತುಗಳಿಲ್ಲದೆ ತೀರ ಸಂಕಷ್ಟವನ್ನು ಎದುರಿಸುತ್ತಿದೆ.
COVID19 ಪಾಸಿಟಿವ್ ಮುಕ್ತವಾಗುತ್ತಿದೆ ಉಡುಪಿ, ಮೂವರು ಗುಣಮುಖ, ಹೊಸ ಪ್ರಕರಣವಿಲ್ಲ
ಆಶ್ರಮದಲ್ಲಿ 22 ವೃದ್ಧರು ಇದ್ದಾರೆ. ಲಾಕ್‌ಡೌನ್ ನಂತರದಿಂದ ದಿನಸಿ ಪದಾರ್ಥಗಳು, ಅಕ್ಕಿ, ತರಕಾರಿಗಳು, ಗ್ಯಾಸ್ ಸಮರ್ಪಕ ರೀತಿಯಲ್ಲಿ ಬರುತ್ತಿಲ್ಲ. ಇದರಿಂದ ಸರಿಯಾದ ಪ್ರಮಾಣದಲ್ಲಿ ಆಶ್ರಮವಾಗಿ ವಾಸಿಗಳಿಗೆ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ.
ದಾನಿಗಳು ಹಾಗೂ ಜಿಲ್ಲಾಡಳಿತ ಅಗತ್ಯ ವಸ್ತುಗಳನ್ನು ಪೂರೈಸಿದರೆ ಇವರ ಪೋಷಣೆಗೆ ನೆರವಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮನವಿ ಮನವಿ ಮಾಡಿಕೊಂಡಿದ್ದಾರೆ.