ಮಂಗಳವಾರ ಸಂಜೆ ಪುರಸಭೆಯಲ್ಲಿ ಸದಸ್ಯರು, ಮುಖಂಡರ ಜತೆ ಅಧಿಕಾರಿಗಳ ಜತೆ ನೀರಿನ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಶಾಸಕ ಸಿದ್ದು ಸವದಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ತೇರದಾಳ (ಜೂ.27) ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ನೀವೆಲ್ಲರೂ ಇದ್ದೀರೆಂಬುವುದನ್ನು ಮರೆಯಬೇಡಿ. ಕೃಷ್ಣಾ ನದಿಯಲ್ಲಿ ನೀರು ಇದ್ದರೂ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲವೆಂದರೆ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಮನೆಯಲ್ಲಿ ನೀರು ಇರದಿದ್ದರೆ ಸುಮ್ಮನೆ ಕುಳಿತುಕೊಳ್ಳುತ್ತಿರಾ?, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾದರೆ ಮಾತ್ರ ಇಲ್ಲಿ ಕೆಲಸ ಮಾಡಿ. ಇಲ್ಲವಾದರೆ ಜಾಗ ಖಾಲಿ ಮಾಡಿ ಎಂದು ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗೆ ಶಾಸಕ ಸಿದ್ದು ಸವದಿ ಖಡಕ್ ಚಾಟಿ ಬೀಸಿದರು.
ಮಂಗಳವಾರ ಸಂಜೆ ಪುರಸಭೆಯಲ್ಲಿ ಸದಸ್ಯರು, ಮುಖಂಡರ ಜತೆ ಅಧಿಕಾರಿಗಳ ಜತೆ ನೀರಿನ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
undefined
ಕಾಂಗ್ರೆಸ್ ಟಿಕೆಟ್ ಫೈಟ್‌ಗೆ ಸ್ವಾಮೀಜಿಗಳ ಎಂಟ್ರಿ: ಉಮಾಶ್ರೀಗೆ ಟಿಕೆಟ್ ನೀಡದಂತೆ ಮಠಾಧೀಶರ ಒತ್ತಡ
ನದಿಯಲ್ಲಿ ನೀರು ತೀವ್ರ ಇಳಿಮುಖಗೊಂಡ ಪರಿಣಾಮ ನೀರು ಲಿಪ್‌್ಟಮಾಡಲುವಾಧ್ಯವಾಗಿಲ್ಲ. ಪೈಪ್‌ಗಳಲ್ಲಿನ ಮರಳು ತೆಗೆಯಲು ಹಾಗೂ ಸ್ವಚ್ಛತೆಗೊಳಿಸಲು ಯಾರು ಸಿಗದ ಕಾರಣ ವಿಳಂಬವಾಗಿದೆ. ಇಂದು ಕೆಲಸ ಪ್ರಾರಂಭಗೊಂಡಿದೆ. ಮೂರು ದಿನಗಳಲ್ಲಿ ಪಟ್ಟಣದಲ್ಲಿ ನೀರು ಸರಬರಾಜು ಆಗಲಿದೆ ಎಂದು ಮುಖ್ಯಾಧಿಕಾರಿ ಮುಲ್ಲಾ ಹೇಳುತ್ತಿದ್ದಂತೆ ಮತ್ತಷ್ಟುಕೆಂಡಾಮಂಡಲಗೊಂಡ ಶಾಸಕ ಸವದಿ, ಈ ವಿಷಯ ನನ್ನ ಗಮನಕ್ಕೆ ಏಕೆ ತಂದಿಲ್ಲ. ಹೋಗಲಿ ಸದಸ್ಯರ ಗಮನಕ್ಕಾದರೂ ತಂದಿದ್ದೀರಾ? ಇದೇನು ಹಿಟ್ಲರ್ ಆಡಳಿತ ಅಂದುಕೊಂಡಿದ್ದೀರಾ ಎಂದು ಕಿಡಿಕಾರಿದರು.
ನೀವು ಕೆಲಸ ಮಾಡಲು ಯೋಗ್ಯರಲ್ಲ:
ನೀರು ಸರಬರಾಜು ವಿಭಾಗದ ಅಧಿಕಾರಿ ಸದಾಶಿವ ತೆಳಗಿನಮನಿ ಅವರನ್ನು ಬದಲಾಯಿಸಿ. ಅವರಿಂದ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಸದಸ್ಯರು ಹೇಳಿದರು. ಮೋಟಾರ್ ಪಂಪ್‌ಸೆಟ್ ದುರಸ್ತಿಗೆ ಬಂದರೆ ದುರಸ್ತಿ ಕೆಲಸಕ್ಕೆ ಸದಸ್ಯರುಗಳು ಹಣ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯರುಗಳು ಗಮನ ಸೆಳೆದರು. ಸದಸ್ಯರುಗಳು ಏಕೆ ಹಣ ನೀಡಬೇಕು. ಅಧಿಕಾರಿಗಳು ನೀವು ಹಣ ಹಾಕಿ ಬಳಿಕ ಬಿಲ್ ತೆಗೆದುಕೊಳ್ಳಿ ಎಂದು ಶಾಸಕ ಸವದಿ ಹೇಳಿದರು. ಸರಿಯಾಗಿ ಉತಾರ ನೀಡದಿರುವುದಕ್ಕೆ, ಕಸದ ವಾಹನಗಳ ಚಾಲಕರ ವೇತನ ನೀಡದಿರುವುದು ಹಾಗೂ ಪುರಸಭೆ ಅನುಮತಿ ಪಡೆಯದೇ ಸಾಕಷ್ಟುಕಟ್ಟಡಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರುಗಳು ಹೇಳುತ್ತಿದ್ದಂತೆ ಕೋಪಗೊಂಡ ಶಾಸಕ ಸಿದ್ದು ಸವದಿ, ಇಂದಿನ ಸಭೆ ಕುರಿತು ಠರಾವು ಮಾಡಿ ಮುಖ್ಯಾಧಿಕಾರಿ ಸೇರಿದಂತೆ ಕೆಲಸ ಮಾಡದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಗೆ ಪತ್ರ ಬರೆಯಲು ಸೂಚಿಸಿದರು. ಸರಕಾರದ ಅನ್ನ ತಿನ್ನುವ ನಿಮಗೆ ಸಾರ್ವಜನಿಕರ ಸಮಸ್ಯೆಗಳು ಅರ್ಥವಾಗದಿದ್ದರೆ ನೀವು ಕೆಲಸ ಮಾಡಲು ಯೋಗ್ಯರಲ್ಲ ಎಂದು ಕಟು ಶಬ್ಧಗಳಿಂದ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ: ರಹಸ್ಯ ಕಾಯ್ದುಕೊಂಡ ‘ತೇರದಾಳ’ ಕಾಂಗ್ರೆಸ್ ಟಿಕೆಟ್..!
ವಿಶೇಷ ತಹಸೀಲ್ದಾರ್ ಕಿರಣ ಬೆಳವಿ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಅಭಿಯಂತರ ಎಸ್.ಬಿ. ಮಾತಾಳಿ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಕಂದಾಯ ಅಧಿಕಾರಿ ಎಫ್.ಬಿ. ಗಿಡ್ಡಿ, ಸಚಿನ ಕೊಡತೆ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಅಲ್ಲಪ್ಪ ಬಾಬಗೊಂಡ, ಸದಾಶಿವ ಹೊಸಮನಿ, ಹಾಫಿಜ್ ಮೌಲಾಅಲಿ ಚಿತ್ರಬಾನುಕೋಟೆ, ಕಾಶಿನಾಥ ರಾಠೋಡ, ಕೇದಾರಿ ಪಾಟೀಲ, ಸಂಗಮೇಶ ಕಾಲತಿಪ್ಪಿ, ಸಂತೋಷ ಅಕ್ಕೆನ್ನವರ, ಕಂದಾಯ ನಿರೀಕ್ಷಕ ಪಿ.ಎಸ್. ಮಠಪತಿ ಮತ್ತಿತರಿದ್ದರು.