ಮಗು ಮೃತಪಟ್ಟ ಮರುದಿನವೇ ಕರ್ತವ್ಯಕ್ಕೆ ಹಾಜರ್‌!

Published : Apr 19, 2020, 07:14 AM IST
ಮಗು ಮೃತಪಟ್ಟ ಮರುದಿನವೇ ಕರ್ತವ್ಯಕ್ಕೆ ಹಾಜರ್‌!

ಸಾರಾಂಶ

ಮಗು ಮೃತಪಟ್ಟಮರುದಿನವೇ ಕರ್ತವ್ಯಕ್ಕೆ ಹಾಜರ್‌!| ಸಲಾಂ- ಹುಟ್ಟಿದ ತಿಂಗಳಲ್ಲೇ ಗಂಡು ಮಗು ಸಾವು

ಶಹಾಪುರ(ಏ.19): ತಿಂಗಳ ಹಿಂದಷ್ಟೇ ಹೊರಜಗತ್ತಿಗೆ ಕಾಲಿಟ್ಟಮಗುವಿನ ಸಾವು ಬರಸಿಡಿಲಿನಂತೆ ಬಂದೆರಗಿದರೂ, ಕೊರೋನಾ ವಿರುದ್ಧ ಹೋರಾಟವೇ ಮುಖ್ಯವೆಂದು ಮಗು ಮೃತಪಟ್ಟಮಾರನೇ ದಿನವೇ ಕರ್ತವ್ಯಕ್ಕೆ ಹಾಜರಾಗಿ ಪುತ್ರಶೋಕದ ಮಧ್ಯೆಯೂ ಕರ್ತವ್ಯ ನಿಭಾಯಿಸುತ್ತಿದ್ದಾರೆ ಇಲ್ಲೊಬ್ಬ ಅಧಿಕಾರಿ.

ಅವರೇ ಶಹಾಪುರ ನಗರಸಭೆಯಲ್ಲಿ 3 ವರ್ಷಗಳಿಂದ ಪರಿಸರ ಅಭಿಯಂತರರಾಗಿರುವ ಹರೀಶ್‌ ಸಜ್ಜನಶೆಟ್ಟಿ. ಮೂಲತಃ ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಕೋನ ಮೇಳಕುಂದಾ ಗ್ರಾಮದ ಹರೀಶ ಸಜ್ಜನಶೆಟ್ಟಿ2 ವರ್ಷಗಳಿಂದೆ ಮದುವೆಯಾಗಿದ್ದರು. ಆದರೆ, ಈ ದಂಪತಿಗೆ ಹುಟ್ಟಿದ ತಿಂಗಳೊಪ್ಪತ್ತಿನಲ್ಲೇ ಮಗು ಕಳೆದುಕೊಂಡಿದ್ದು ಭಾರಿ ಆಘಾತಯುಂಟು ಮಾಡಿತ್ತು.

ನಿನ್ನೆ ರಾಜ್ಯದಲ್ಲಿ 25 ಕೇಸು: ಕೊಂಚ ನಿರಾಳ

ಎಲ್ಲೆಡೆ ಕೊರೋನಾ ಹೆಚ್ಚಳದಿಂದ ಮಾ.22ರಂದು ಜನತಾ ಕಫ್ರ್ಯೂ ಜಾರಿಯಲ್ಲಿತ್ತು. ಆದರೆ ಮಗು ಹುಟ್ಟಿದ ಸಂಭ್ರಮದಲ್ಲಿದ್ದ ಹರೀಶ್‌ ಮನೆಯಲ್ಲಿ ಮಾತ್ರ ಅವತ್ತು ಸೂತಕದ ಛಾಯೆ ಆವರಿಸಿತ್ತು. ಕಾಮಾಲೆ, ಬೆಳವಣಿಗೆ ಕುಂಠಿತಗೊಂಡು ನವಜಾತ ಶಿಶು ಮೃತಪಟ್ಟು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿತ್ತು. ಈ ನಡುವೆ ಕೊರೋನಾ ಹೆಚ್ಚುತ್ತಿರುವ ವೇಳೆ ಜನರ ಆರೋಗ್ಯವೇ ಮುಖ್ಯ ಎಂದು ಹರೀಶ್‌ ರಾತೋರಾತ್ರಿಯೇ ಶಹಾಪುರಕ್ಕೆ ವಾಪಸ್ಸಾಗಿ ಕರ್ತವ್ಯಕ್ಕೆ ನಿಷ್ಠೆ ತೋರಿದ್ದು, ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯಕ್ಕೆ ಪಾತ್ರವಾಗಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC