ಕೂಲಿ ಕಾರ್ಮಿಕಗೆ ದಂಡ ವಿಧಿಸಿ ತಾವೇ ಕಟ್ಟಿದ ಅಧಿಕಾರಿ

By Kannadaprabha NewsFirst Published Apr 29, 2021, 11:51 AM IST
Highlights

ಕೂಲಿ ಕಾರ್ಮಿಕನಿಗೆ ಮಾಸ್ಕ್ ಹಾಕಿಲ್ಲವೆಂದು ದಂಡ ವಿಧಿಸಿ ಕೊನೆಗೆ ಅಧಿಕಾರಿ ತಾನೇ ದಂಡ ಕಟ್ಟಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯ ಬಸ್ ನಿಲ್ದಾಣದ ಬಳಿ ನಡೆದಿದೆ. 

ಮಂಗಳೂರು (ಏ.29): ಕೊರೋನಾ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಜನರು ಬದುಕಲು ಸಂಕಷ್ಟ ಪಡುವ ಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಕೂಲಿ ಕಾರ್ಮಿಕನಿಗೆ ಮಾಸ್ಕ್ ಹಾಕಿಲ್ಲವೆಂದು ದಂಡ ವಿಧಿಸಿ ಕೊನೆಗೆ ಅಧಿಕಾರಿ ತಾನೇ ದಂಡ ಕಟ್ಟಿದ ಘಟನೆ ನಡೆದಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯ ಬಸ್ ನಿಲ್ದಾಣದ ಬಳಿ ಇಂದು ಮಾಸ್ಕ್ ಧರಿಸಿಲ್ಲವೆಂದು ಕೂಲಿ ಕಾರ್ಮಿಕನೋರ್ವನಿಗೆ  ಪಟ್ಟಣ ಪಂಚಾಯತ್ ಅಧಿಕಾರಿ 100 ರು. ದಂಡ ವಿಧಿಸಿ ಜಿಲ್ಲಾಡಳಿತದ ರಶೀದಿ ಕೊಟ್ಟಿದ್ದಾರೆ.  ಮೊದಲ ಡೋಸ್‌ನಿಂದ ಸೋಂಕು ಪ್ರಸರಣ ಶೇ.50ರಷ್ಟು ಇಳಿಕೆ!

ಕೂಲಿ ಕಾರ್ಮಿಕ ತನ್ನ ಬಳಿ ಹಣವಿಲ್ಲದೇ 10 ರು. ಅಧಿಕಾರಿ ಕೈಗಿಟ್ಟಿದ್ದಾರೆ. ಅಧಿಕಾರಿ ದಂಡ ಕಟ್ಟಲು ಒತ್ತಾಯಿಸಿದರೂ ಹಣ ಇಲ್ಲವೆಂದು  ಪರಿಪರಿಯಾಗಿ ವಿನಂತಿ ಮಾಡಿಕೊಂಡಿದ್ದಾರೆ. 

ಕೊನೆಗೆ ರಶೀದಿ ಬರೆದ ಕಾರಣಕ್ಕೆ ‌ತಾನೇ ಉಳಿದ 90 ರು. ಸೇರಿಸಿ ದಂಡ ಕಟ್ಟಿದ್ದಾರೆ.  ಕೂಲಿ ಕಾರ್ಮಿಕನ ಮಾಸ್ಕ್ ದಂಡವನ್ನು ರಶೀದಿ ಕೊಟ್ಟ ಪಟ್ಟಣ ಪಂಚಾಯತ್ ಅಧಿಕಾರಿಯೇ ಕಟ್ಟಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!