ವಿಜಯಪುರ: ನವರಾತ್ರಿ ಆಚರಣೆ ವೇಳೆ ಯುವತಿಯರಿಂದ ಅಶ್ಲೀಲ ನೃತ್ಯ, ಮುಜುಗರಕ್ಕೊಳಗಾದ ಜನ!

By Girish Goudar  |  First Published Oct 11, 2024, 10:33 AM IST

ಮಹಾರಾಷ್ಟ್ರದ ಕಲಾ ತಂಡದ ಯುವತಿಯರು ಅಶ್ಲೀಲ ಸನ್ನೆಗಳನ್ನ ಮಾಡಿದ್ದಾರೆ. ಇದರಿಂದ ನೆರೆದ ಜನ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ. ಹೀಗಾಗಿ ಮಹಿಳೆಯರು ಹಾಗೂ ಜನರು ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋಗಿದ್ದಾರೆ. 

ವಿಜಯಪುರ(ಅ.11):  ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮರಾಠಿ ಲಾವಣಿ ಕಾರ್ಯಕ್ರಮದಲ್ಲಿ ಕಲಾ ತಂಡದ ಯುವತಿಯರು ಅಶ್ಲೀಲ ಸನ್ನೆ ಮಾಡಿದ್ದರಿಂದ ಜನರು ಮುಜುಗರಕ್ಕೀಡಾದ ಘಟನೆ ನಗರದಲ್ಲಿ ನಿನ್ನೆ(ಗುರುವಾರ) ನಡೆದಿದೆ. 

ವಿಜಯಪುರದ ಶಾಹು ನಗರದಲ್ಲಿ ನವರಾತ್ರಿ ಅಂಗವಾಗಿ ತಡರಾತ್ರಿ ಮರಾಠಿ ಲಾವಣಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿಜಯಪುರದ ಸ್ವಾಗತ ಆದಿಶಕ್ತಿ ತರುಣ ಮಂಡಳಿ ವತಿಯಿಂದ ಲಾವಣಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 

Tap to resize

Latest Videos

undefined

'ಮೊದಲು ಹಿಂದೂಗಳ ಜಾಗದಲ್ಲಿ ಗೋರಿ ಕಟ್ತಾರೆ, ಬಳಿಕ ನಮ್ದು ಅಂತಾರೆ': ಚಕ್ರವರ್ತಿ ಸೂಲಿಬೆಲೆ

ಮಹಾರಾಷ್ಟ್ರದ ಕಲಾ ತಂಡದ ಯುವತಿಯರು ಅಶ್ಲೀಲ ಸನ್ನೆಗಳನ್ನ ಮಾಡಿದ್ದಾರೆ. ಇದರಿಂದ ನೆರೆದ ಜನ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ. ಹೀಗಾಗಿ ಮಹಿಳೆಯರು ಹಾಗೂ ಜನರು ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋಗಿದ್ದಾರೆ. 
ದೇವಿಯನ್ನು ಆರಾಧಿಸುವ ಕಾರ್ಯಕ್ರಮದಲ್ಲೇ ಅಶ್ಲೀಲತೆ ಪ್ರದರ್ಶನ ಮಾಡಲಾಗಿದೆ. ಯುವತಿಯರು ಅಶ್ಲೀಲವಾಗಿ ಸನ್ನೆಗಳನ್ನ ಮಾಡುತ್ತಾ ನೃತ್ಯ ಮಾಡಿದ್ದಾರೆ. 

click me!