ಹುಬ್ಬಳ್ಳಿ: ನೇಣು ಬಿಗಿದುಕೊಂಡು ಬಸ್‌ ಕಂಡಕ್ಟರ್‌ ಆತ್ಮಹತ್ಯೆ

Published : Apr 18, 2021, 10:54 AM IST
ಹುಬ್ಬಳ್ಳಿ: ನೇಣು ಬಿಗಿದುಕೊಂಡು ಬಸ್‌ ಕಂಡಕ್ಟರ್‌ ಆತ್ಮಹತ್ಯೆ

ಸಾರಾಂಶ

ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣು| ಹಾವೇರಿ ಜಿಲ್ಲೆಯ ಹಾನಗಲ್‌ ಬಸ್‌ ಡಿಪೋದಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ  ಮೌಲಾಸಾಬ್‌ ದಾವಲ್‌ ಸಾಬ್‌ ಮಿಶ್ರಿಕೋಟೆ| ಮುಸ್ತಫಾ ಸೇರಿ ನಾಲ್ವರಿಂದ ಮಾನಸಿಕ ಕಿರುಕುಳ|  ಈ ಸಂಬಂಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು|   

ಹುಬ್ಬಳ್ಳಿ(ಏ.18): ಬೈಕ್‌ ಕಳ್ಳತನಕ್ಕೆ ವಿಷಯವಾಗಿ ಮಾನಸಿಕವಾಗಿ ನೊಂದುಕೊಂಡಿದ್ದ ಹಾನಗಲ್‌ ಡಿಪೋ ಬಸ್‌ ನಿರ್ವಾಹಕ ಮೌಲಾಸಾಬ್‌ ದಾವಲ್‌ ಸಾಬ್‌ ಮಿಶ್ರಿಕೋಟೆ (44) ಬಂಡಿವಾಡ ಗ್ರಾಮದ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಂದ​ಗೋಳ ತಾಲೂಕಿನ ಕೂಬಿ​ಹಾಳ ಮೂಲದ ಈತ ಬಂಡಿವಾಡದಲ್ಲಿ ವಾಸವಾಗಿದ್ದ. 8 ತಿಂಗಳ ಹಿಂದೆ ಮುಸ್ತಫಾ ಎಂಬುವವನಿಗೆ ಬೈಕ್‌ ಮಾರಿದ್ದ. ಈಚೆಗೆ ಆ ಬೈಕನ್ನು ಕದ್ದು ಮಾರಲು ಮುಂದಾದಾಗ ಮುಸ್ತಫಾ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಮುಸ್ತಫಾ ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದ್ದ ಎನ್ನಲಾಗಿದೆ. 

ಕೊರೋನಾ, ಸಾರಿಗೆ ಮುಷ್ಕರ: ವಿವಿಧ ಪರೀಕ್ಷೆಗಳು ಮುಂದೂಡಿಕೆ

ಮೌಲಾಸಾಬ್‌ ಆತ್ಮಹತ್ಯೆಗೆ ಮುನ್ನ ಬರೆದ ಡೆತ್‌ ನೋಟ್‌ನಲ್ಲಿ ‘ಮುಸ್ತಫಾ ಸೇರಿ ನಾಲ್ವರು ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾನೆ. ಈ ಬಗ್ಗೆ ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಅಲ್ಲೂರು ಕೆ ಗ್ರಾಮದಲ್ಲಿ 200 ವರ್ಷಗಳ ಇತಿಹಾಸ ಹೊಂದಿರುವ 101 ಎತ್ತುಗಳ ಜಾತ್ರೆ, ಪೂಜೆ
ಬೆಂಗಳೂರಿನಲ್ಲಿ ಡಿಆರ್‌ಡಿಒ ಯೋಜನೆಗೆ 1.27 ಎಕರೆ ಭೂಸ್ವಾಧೀನ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್!