ಕವಿ ಸುಬ್ರಾಯ ಚೊಕ್ಕಾಡಿ ಅನುಭವ ಕಥನ ಬಿಡುಗಡೆಗೆ ಎಲ್ಲರೂ ಬನ್ನಿ

Published : Mar 25, 2021, 10:42 PM ISTUpdated : Mar 25, 2021, 10:45 PM IST
ಕವಿ ಸುಬ್ರಾಯ ಚೊಕ್ಕಾಡಿ ಅನುಭವ ಕಥನ ಬಿಡುಗಡೆಗೆ ಎಲ್ಲರೂ ಬನ್ನಿ

ಸಾರಾಂಶ

ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ/ 'ಕಾಲದೊಂದೊಂದೇ ಹನಿ' ಪುಸ್ತಕ ಮಾರ್ಚ್  28 ರಂದು ಲೋಕಾರ್ಪಣೆ/ ಕೊರೋನಾ ನಡುವೆಯೂ ತೆರೆದುಕೊಂಡಿದೆ ಸಾಹಿತ್ಯ ಲೋಕ

ಬೆಂಗಳೂರು( ಮಾ. 25)   ವಿಕಾಸ ಪ್ರಕಾಶನ ಬೆಂಗಳೂರು ಆಶ್ರಯದಲ್ಲಿ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ 'ಕಾಲದೊಂದೊಂದೇ ಹನಿ' ಪುಸ್ತಕ ಮಾರ್ಚ್  28 ರಂದು ಲೋಕಾರ್ಪಣೆಯಾಗಲಿದೆ. 

ಮಾ. 28  ಭಾನುವಾರ  ಬೆಂಗಳೂರು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮ ನಿಗದಿಯಾಗಿದೆ.

ಬಿ.ಎನ್.ಮಲ್ಲೇಶ್  `ತೆಪರೇಸಿ ರಿಟರ್ನ್ಸ್'  ಪುಸ್ತಕ ದಾವಣಗೆರೆಯಲ್ಲಿ ಲೋಕಾರ್ಪಣೆ

ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೇಖಕ ಡಾ. ದಾಮೋದರ ಶೆಟ್ಟಿ,  ವಿಮರ್ಶಕ ಎಸ್‌.ಆರ್‌.ವಿಜಯಶಂಕರ  ಪಾಲ್ಗೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ, ಕತೆಗಾರ , ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.  ಕಾರ್ಯಕ್ರಮದಲ್ಲಿ  ಕೃತಿಕಾರ ಸುಬ್ರಾಯ ಚುಕ್ಕಾಡಿ, ಕೃತಿ ನಿರೂಪಕಿ ಅಂಜನಾ ಹೆಗಡೆ ಉಪಸ್ಥಿತರಿರಲಿದ್ದಾರೆ .

ಕೊರೋನಾ ಕಾರಣಕ್ಕೆ ಸಾಹಿತ್ಯದ ಕೆಲಸ ನಿರಂತರವಾಗಿದ್ದರೂ ಪುಸ್ತಕ ಬಿಡಗುಡೆ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿತ್ತು.  ಇದೀಗ ನಿಧಾನಕ್ಕೆ ತೆರೆದುಕೊಂಡಿದ್ದು ಕೊರೋನಾ ಎರಡನೇ ಅಲೆ ಆತಂಕ ಇರುವುದರಿಂದ ಸಾಮಾಜಿಕ ಅಂತರವನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು