* ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾರಿಂದ ನೊಟೀಸ್
* ಮೂರು ದಿನದ ಒಳಗೆ ಖಾಲಿ ಮಾಡತಕ್ಕದ್ದು ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ
* ಅಂಗಡಿ ವ್ಯಾಪಾರ ನಂಬಿ ಜೀವನ ನಡೆಸುತ್ತಿದ್ದೇವೆ: ಮುಸ್ಲಿಂ ವ್ಯಾಪಾರಿ
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಸನ
ಹಾಸನ(ಏ.02): ಬೇಲೂರು ಚನ್ನಕೇಶವ ದೇಗುಲದ(Belur Chennakeshava Temple) ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗೆ(Muslim Trader) ನೋಟೀಸ್ ನೀಡಲಾಗಿದೆ. ವಾಣಿಜ್ಯ ಮಳಿಗೆಯನ್ನು ಶೀಘ್ರ ಖಾಲಿ ಮಾಡುಂತೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೊಟೀಸ್ ನೀಡಿದ್ದಾರೆ.
ಬೇಲೂರು ಶ್ರೀಚನ್ನಕೇಶವ ದೇವಾಲಯದ ಆವರಣದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ(Business) ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್(Viswa Hindu Parishad) ಕಾರ್ಯಕರ್ತರಿಂದ ಮನವಿ ಹಿನ್ನೆಲೆ ಮುಸ್ಲಿಂ ವ್ಯಾಪಾರಿ ರೆಹಮಾನ್ ಷರೀಫ್ ಗೆ ನೊಟೀಸ್ ನೀಡಿದ್ದಾರೆ.
Hassan: ಸರ್ಕಾರದ ಖಜಾನೆಯಿಂದ ದೇಗುಲಕ್ಕೆ ಬೇಲೂರು ಚನ್ನಕೇಶವ ಸ್ವಾಮಿ ಆಭರಣ
ನೀವು ದೇವಾಲಯಕ್ಕೆ ಸೇರಿದ ವಾಣಿಜ್ಯ ಮಳಿಗೆಯನ್ನು 1-9-2018 ರಿಂದ 30-8-2023 ರವರೆಗೆ ಐದು ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವುದು ಸರಿ ಅಷ್ಟೇ ಆದರೆ ಧಾರ್ಮಿಕ ದತ್ತಿ ಕಾಯ್ದೆ 2002 ರ ನಿಯಮ 31 (12) ರಿ ಸಂಸ್ಥೆ ಅನ್ವಯದ ಜಮೀನು, ಕಟ್ಟಡಗಳು, ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದುಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ ನಿಯಮವಿರುವುದರಿಂದ ಸದರಿ ನಿಯಮದನ್ವಯ ನೀವು ಗುತ್ತಿಗೆ ಪಡೆದಿರುವ ಮಳಿಗೆಯನ್ನು ನೋಟೀಸ್ ತಲುಪಿದ ಮೂರು ದಿನದ ಒಳಗೆ ಖಾಲಿ ಮಾಡತಕ್ಕದ್ದು ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುಲಾಗುತ್ತದೆ ಎಂದು ಶ್ರೀಚನ್ನಕೇಶವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೊಟೀಸ್‌ನಲ್ಲಿ ತಿಳಿಸಿದ್ದಾರೆ
ದೇಗುಲದ ಮುಂಭಾಗ ಸುಮಾರು 50 ವರ್ಷಗಳಿಂದ ರೆಹಮಾನ್ ಷರೀಫ್ ಗೊಂಬೆ, ಟಾಯ್ಸ್ ಅಂಗಡಿಯನ್ನು ನಡೆಸುತ್ತಿರುತ್ತಾರೆ. 1-9-2018 ರಿಂದ 30-8-2023 ರವರೆಗೆ ಮಳಿಗೆಯ ರಿನ್ಯುವಲ್ ಮಾಡಿಸಿಕೊಂಡಿರುತ್ತಾರೆ. ಆದ್ರೆ ಧಾರ್ಮಿಕ ದತ್ತಿ ಕಾಯ್ದೆ 2002 ರ ನಿಯಮ 31(12) ರಿ ಸಂಸ್ಥೆ ಅನ್ವಯ ಅನ್ಯಧರ್ಮಿಯರಿಗೆ ಹಿಂದೂ ದೇಗುಲದ ಬಳಿ ಜಾಗ,ಮಳಿಗೆ ,ಕಟ್ಟಡ ಗುತ್ತಿಗೆ ನೀಡತಕ್ಕುದಲ್ಲ ಎಂಬ ನಿಯಮವಿದೆ.
Hassan: ಹುಟ್ಟೂರು ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿನಲ್ಲಿ ಮ್ಯೂಸಿಯಂ
ಈ ನಿಯಮದಡಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದ್ದು, ಆ ಮನವಿ ಹಿನ್ನೆಲೆ ಮುಸ್ಲಿಂ ವ್ಯಾಪಾರಿ ರೆಹಮಾನ್ ಷರೀಫ್ ನೊಟೀಸ್(Notice) ನೀಡಲಾಗಿದೆ. ಅಂಗಡಿ ತೆರವುಗೊಳಿಸುವುದಾ ಅಥವಾ ಮುಂದುವರೆಸುವುದಾ ಎಂಬ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರಿಗೆ ಪತ್ರ ಬರೆಯಲಾಗಿದೆ. ಅವರ ನಿರ್ದೇಶನ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚನ್ನಕೇಶವ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ತಿಳಿಸಿದ್ದಾರೆ.
ಚನ್ನಕೇಶವ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೀಡಿರುವ ನೊಟೀಸ್‌ಗೆ ವ್ಯಾಪಾರಿ ರೆಹಮಾನ್ ಷರೀಫ್ ಉತ್ತರ ನೀಡಿದ್ದು, ನಾನು 1970 ಇಸವಿಯಿಂದ ಇಲ್ಲಿಯವರೆಗೂ ಬಾಡಿಗೆದಾರರಾಗಿ ಅಂಗಡಿಯನ್ನು ಯಾವ ತಂಟೆ ತಕರಾರು ಇಲ್ಲದೆ ನಡೆಸಿಕೊಂಡು ಬಂದಿದ್ದೇವೆ. ಈಗ ನನಗೆ 2002 ರ ಕಾಯ್ದೆ ಪ್ರಕಾರ ನೊಟೀಸ್ ನೀಡಲಾಗಿದೆ ಎಂದು ತಿಳಿಸಿರುತ್ತೀರಿ, ಅಂಗಡಿ ವ್ಯಾಪಾರ ನಂಬಿ ಜೀವನ ನಡೆಸುತ್ತಿದ್ದೇವೆ. ಖಾಲಿ ಮಾಡಿಸಿದರೆ ಬಡವರಾದ ನಮಗೆ ತೊಂದರೆಯಾಗುತ್ತದೆ. ರಥೋತ್ಸವ ಇರುವುದರಿಂದ ನನಗೆ ಕೊಟ್ಟಿರುವ ಅವಧಿಯವರೆಗೂ ಸದರಿ ಅಂಗಡಿಯನ್ನು ವ್ಯಾಪಾರಕ್ಕೆ ಅನುಕೂಲವಾಗುವಂತೆ ಅನುಮತಿ ಕೊಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ರೆಹಮಾನ್ ಷರೀಫ್ ಮನವಿ ಮಾಡಿದ್ದಾರೆ.