ಕಡಲ ಮಕ್ಕಳ ಕಂಗೆಡಿಸಿವೆ ಬಲೆಗೆ ಬಿದ್ದ ಕಾರ್ಗಿಲ್‌ ಮೀನು

By Kannadaprabha News  |  First Published Oct 1, 2019, 11:15 AM IST

ಭರಪೂರ ಮೀನಿನ ನಿರೀಕ್ಷೆಯಲ್ಲಿ ಬಲೆ ಬೀಸಿದ್ದ ಮೀನುಗಾರರಿಗೆ ಆತಂಕ ಉಂಟಾಗಿದೆ.ಬಲೆಯ ತುಂಬಾ ಉಪ ಯೋಗಕ್ಕೆ ಬಾರದ ಕಾರ್ಗಿಲ್ ಮೀನುಗಳು ಬಿದ್ದಿವೆ. 


ಕಾರವಾರ [ಅ.01]:  ಇಲ್ಲಿನ ಸಮುದ್ರದಲ್ಲಿ ಬಲೆ ಬೀಸಿದ ಮೀನುಗಾರರಿಗೆ ತಿನ್ನಲು ಯೋಗ್ಯವಲ್ಲದ ಕಾರ್ಗಿಲ್‌ (ಕ್ಲಾತಿ) ಮೀನು ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮೀನು ತಿನ್ನಲು ಯೋಗ್ಯವಲ್ಲ. ಫಿಶ್‌ ಮಿಲ್‌ಗೆ ಸಾಗಿಸಿದರೆ ಬೆಲೆಯೂ ಇಲ್ಲ. ಆದರೆ ಬಲೆಗೆ ಬಿದ್ದ ಭರಪೂರ ಮೀನನ್ನು ಬೋಟಿನಲ್ಲಿ ತೀರಕ್ಕೆ ತಂದಿದ್ದಾರೆ. ಬಂಗುಡೆ, ಇಸೋಣ, ಪಾಪ್ಲೇಟ್‌ ಹೀಗೆ ಉತ್ತಮ ತಳಿಯ ಮೀನಿನ ನಿರೀಕ್ಷೆಯಲ್ಲಿ ಬಲೆ ಬೀಸಿದ ಮೀನುಗಾರರಿಗೆ ಸೋಮವಾರ ತೀವ್ರ ನಿರಾಶೆ ಕಾದಿತ್ತು. ಬಲೆಯ ತುಂಬ ಕಾರ್ಗಿಲ್‌ ಮೀನು ಬಿದ್ದಿದೆ.

Latest Videos

undefined

ಚಿಕ್ಕದಾಗಿ ಕಪ್ಪು ಬಣ್ಣ ಹೊಂದಿರುವ ಈ ಮೀನು ತೀವ್ರ ವಾಸನೆಯಿಂದ ಕೂಡಿರುತ್ತದೆ. ಇದು ಪ್ರತಿ ಕಿ.ಗ್ರಾಂ.ಗೆ ಕೇವಲ  13ರಿಂದ  14ರು. ಗೆ ಮಾರಾಟವಾಗುತ್ತದೆ. ಅದೂ ಗೊಬ್ಬರ ಮಾಡಲು ಬಳಕೆಯಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದಕ್ಷಿಣ ಕನ್ನಡ ಹಾಗೂ ಉಡುಪಿ ಕರಾವಳಿಯಲ್ಲಿ ಕೆಲವು ದಿನಗಳ ಹಿಂದೆ ವ್ಯಾಪಕ ಪ್ರಮಾಣದಲ್ಲಿ ಕಾರ್ಗಿಲ್‌ ಮೀನು ಸಿಕ್ಕಿತ್ತು. ಓಖಿ ಚಂಡಮಾರುತದ ಪರಿಣಾಮವಾಗಿ ಪೂರ್ವ ಕರಾವಳಿಯ ಈ ಮೀನುಗಳು ಪಶ್ಚಿಮ ಕರಾವಳಿಗೆ ಬಂದಿವೆ ಎನ್ನುವುದು ಅಲ್ಲಿನ ಮೀನುಗಾರರ ಅಭಿಪ್ರಾಯವಾಗಿತ್ತು. ಈಗ ಕಾರ್ಗಿಲ್‌ ಮೀನು ಉತ್ತರ ಕನ್ನಡ ಕರಾವಳಿಗೂ ನುಗ್ಗಿದೆ.

ಈ ಮೀನು ಹೇರಳವಾಗಿ ಸಿಕ್ಕಿದರೆ ಉಳಿದ ಉತ್ತಮ ಜಾತಿಯ ಮೀನಿಗೆ ಬರ ಎದುರಾಗುತ್ತದೆ ಎನ್ನುವುದು ಮೀನುಗಾರರ ಅಭಿಪ್ರಾಯ. ಬಲೆಗೆ ಸಿಕ್ಕಿದ ಮೀನನ್ನು ತಂದು ಫಿಶ್‌ ಮಿಲ್‌ಗೆ ಮಾರಾಟ ಮಾಡಿದರೆ ಕನಿಷ್ಠ ಬೋಟಿಗೆ ಬಳಸಿದ ಇಂಧನದ ವೆಚ್ಚವಾದರೂ ಸಿಕ್ಕೀತು ಎಂದು ಹೊತ್ತು ತಂದಿದ್ದಾರೆ.

click me!