ಪ್ರವಾಸಿ ತಾಣಗಳಲ್ಲಿ ವಿಶಿಷ್ಟ ಚೇತನ ಗೈಡ್‌ಗಳ ನೇಮಕ: ಸಿ. ಟಿ. ರವಿ

By Kannadaprabha NewsFirst Published Oct 1, 2019, 11:06 AM IST
Highlights

ಪ್ರವಾಸಿತಾಣಗಳಲ್ಲಿ ವಿಶೇಷಚೇತನರನ್ನು ಗೈಡ್‌ಗಳಾಗಿ ನಿಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಿಗೆ ವಿಶಿಷ್ಟಚೇತನರನ್ನು ಗೈಡ್‌ಗಳನ್ನಾಗಿ ನೇಮಕ ಮಾಡಿಕೊಳ್ಳುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಮಂಗಳೂರು(ಅ.30): ರಾಜ್ಯದ ಪ್ರವಾಸಿ ತಾಣಗಳಿಗೆ ವಿಶಿಷ್ಟಚೇತನರನ್ನು ಗೈಡ್‌ಗಳನ್ನಾಗಿ ನೇಮಕ ಮಾಡಿಕೊಳ್ಳುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಭರವಸೆ ನೀಡಿದ್ದಾರೆ.

ನಗರದ ಸಂಘನಿಕೇತನದಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ವಿಶಿಷ್ಟಮಕ್ಕಳ ಅಂತಾರಾಷ್ಟ್ರೀಯ ಮಟ್ಟದ 3 ದಿನಗಳ ವಿಶಿಷ್ಟಮಕ್ಕಳ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಮಂಗಳೂರು: ಬ್ಯಾಂಕ್‌ಗಳ ಗ್ರಾಹಕ ವ್ಯವಹಾರ ಸಮಯ ವಿಸ್ತರಣೆ

ಪ್ರವಾಸಿ ತಾಣಗಳಲ್ಲಿ ಕಿವುಡರು ಮತ್ತು ಮೂಗರು ಭೇಟಿ ನೀಡುವಾಗ ಅವರಿಗೆ ಪ್ರವಾಸಿ ಸ್ಥಳಗಳ ಪರಿಚಯ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಅವರ ಅನುಕೂಲತೆಗೆ ವಿಶಿಷ್ಟಚೇತನರನ್ನು ನೇಮಿಸಿಕೊಳ್ಳಬೇಕೆಂದು ವಿಶಿಷ್ಟಚೇತನರ ಸಂಘದ ಪ್ರಮುಖರು ಸಚಿವರಿಗೆ ಮನವಿ ಮಾಡಿದ್ದರು. ಈ ಬೇಡಿಕೆಯನ್ನು ಪರಿಶೀಲಿಸುವುದಾಗಿ ಸಚಿವರು ಹೇಳಿದ್ದಾರೆ.

ಶಾಸಕ ವೇದವ್ಯಾಸ ಕಾಮತ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಪೂರ್ಣ ಪರಿಚಯ ಮತ್ತು ರೂಪರೇಷೆಗಳನ್ನು ತಿಳಿಸಿದರು. ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು, ಶಿಬಿರಾತ್ರಿಗಳಿಗೆ ವಿವಿಧ ರೀತಿಯ ಕಾರ್ಯಗಾರಗಳು ನಡೆಯಲಿವೆ. ಸುಮಾರು 540 ಮಂದಿ ಭಾಗವಹಿಸಿದ್ದು, ಉತ್ತರ ಪ್ರದೇಶ, ಸೂರತ್‌, ಕಾನ್‌ಪುರ, ಬಾವನಗರ ಮತ್ತು ಶ್ರೀಲಂಕಾದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಕಂಬಳ, ಯಕ್ಷಗಾನ ಪ್ರವಾಸೋದ್ಯಮ: ಸಿ.ಟಿ.ರವಿ ಸೂಚನೆ.

ಪ್ರಪಥಮ ಬಾರಿಗೆ ಮಂಗಳೂರಿಗೆ ಆಗಮಿಸಲಿರುವ ಈ ವಿಶಿಷ್ಟಶಿಬಿರಾರ್ಥಿಗಳು ತಮ್ಮ ಕೌಶಲ್ಯ ಮತ್ತು ಅನುಭವವನ್ನು ಮಂಗಳೂರಿನ ಜನತೆಗೆ ಪ್ರಚುರ ಪಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖರಾದ ನವೀನ್‌ ಕಾರ್ಡೋಜ, ವಾಸುದೇವ ಕಾಮತ್‌, ರೊನಾಲ್ಡ್‌ ಗೋಮ್ಸ್‌, ಪ್ರಶಾಂತ್‌ ಪೈ, ಮುಕುಂದ್‌ ಕಾಮತ್‌, ಐಡಿಯಲ್‌, ರವಿಶಂಕರ್‌ ಮಿಜಾರ್‌, ಹರೀಶ್‌ ಆಚಾರ್ಯ, ಶರತ್‌ ಆರ್‌. ಪೈ, ಮೋಹನ್‌ ಬೆಂಗ್ರೆ, ಕಿಶೋರ್‌ ರೈ, ಜಗದೀಶ್‌ ಶೇಣವ, ಸುಧೀರ್‌, ಯೋಗೀಶ್‌ ದೇಸಾಯಿ, ಅನಮ್‌ ಪ್ರೇಮ್‌, ಪ್ರಶಾಂತ್‌ ಭಟ್‌, ಶ್ರೀನಿವಾಸ್‌ ಶೇಟ್‌ ಇದ್ದರು.

ಬೊಕೆ ಕೊಟ್ರೆ ನೋ ಪ್ಲಾಸ್ಟಿಕ್ ಎಂದ್ರು ಕೇಂದ್ರ ಸಚಿವ..!

differently abled people to be appointed as guide in tourist places says ct ravi

click me!