ನಮ್ಮ ಬೆಂಗಳೂರು ಪ್ರಶಸ್ತಿಗೆ ನಾಮ ನಿರ್ದೇಶನ, ರಮೇಶ್‌ ಅರವಿಂದ್‌ ಬ್ರಾಂಡ್‌ ಅಂಬಾಸಿಡರ್

By Kannadaprabha NewsFirst Published Jan 8, 2020, 10:43 AM IST
Highlights

ನಮ್ಮ ಬೆಂಗಳೂರು ಅವಾರ್ಡ್ಸ್(ಎನ್‌ಬಿಎ) ಟ್ರಸ್ಟ್‌ ಮಂಗಳವಾರ ಆಯೋಜಿಸಿದ್ದ 11ನೇ ಆವೃತ್ತಿಯ ‘ನಮ್ಮ ಬೆಂಗಳೂರು ಪ್ರಶಸ್ತಿ’ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಚಿತ್ರನಟ ರಮೇಶ್‌ ಅರವಿಂದ್‌ ಅವರು ಬ್ರಾಂಡ್‌ ರಾಯಭಾರಿಯಾಗಿ ಎನ್‌ಬಿಎ ಜತೆಗೆ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು(ಜ.08): ನಮ್ಮ ಬೆಂಗಳೂರು ಅವಾರ್ಡ್ಸ್(ಎನ್‌ಬಿಎ) ಟ್ರಸ್ಟ್‌ ಮಂಗಳವಾರ ಆಯೋಜಿಸಿದ್ದ 11ನೇ ಆವೃತ್ತಿಯ ‘ನಮ್ಮ ಬೆಂಗಳೂರು ಪ್ರಶಸ್ತಿ’ ನಾಮನಿರ್ದೇಶನ ಪ್ರಕ್ರಿಯೆಗೆ ಸೇಂಟ್‌ ಜೋಸೆಫ್‌ ಕಾಲೇಜು ವಿದ್ಯಾರ್ಥಿಗಳು ನಾಮ ನಿರ್ದೇಶನ ಮಾಡುವ ಮೂಲಕ ಚಾಲನೆ ನೀಡಿದ್ದಾನೆ.

ಎಲೆಮರೆಯ ಕಾಯಿಗಳಂತೆ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುವ ಮಹತ್ವದ ಕಾರ್ಯವನ್ನು ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್‌ ಮಾಡುತ್ತಿದೆ. ಬೆಂಗಳೂರನ್ನು ಎಲ್ಲ ಅಡೆತಡೆಗಳನ್ನು ಮೀರಿ ಒಂದು ಸುಂದರ ನಗರವನ್ನಾಗಿ ರೂಪಿಸಲು ಶ್ರಮಿಸಿದ ಬೆಳಕಿಗೆ ಬಾರದ ನಿಜವಾದ ಹೀರೋಗಳನ್ನು ಗುರುತಿಸುವುದು ಈ ಪ್ರಶಸ್ತಿಗಳ ಉದ್ದೇಶ.

JNU ದಾಳಿಯ ಹಿಂದೆ ಮೋದಿ, ಶಾ ಕೈವಾಡ: ಖಂಡ್ರೆ

ಈ ಮೂಲಕ ನಿಜವಾದ ಹೀರೋಗಳಿಗೆ ಧನ್ಯವಾದ ಹೇಳುವುದು ಪ್ರಶಸ್ತಿಯ ಗುರಿ ಎಂದು ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್‌ ಅಧ್ಯಕ್ಷ ಪ್ರದೀಪ್‌ ಖರೆ ಮತ್ತು ಪ್ರಶಸ್ತಿಯ ತೀರ್ಪುಗಾರರ ಸಮಿತಿ ಸದಸ್ಯೆ ವಾಸಂತಿ ಹರಿಪ್ರಕಾಶ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

11ನೇ ಆವೃತ್ತಿಯ ಪ್ರಶಸ್ತಿಗೆ ಆಯ್ಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಅಸಾಮಾನ್ಯ ಬೆಂಗಳೂರಿಗರನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2020ರ ಜನವರಿ 31ರೊಳಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬೇಕು. ಈ ಬಾರಿ ಐದು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿದೆ. ವರ್ಷದ ನಾಗರಿಕ, ವರ್ಷದ ಉದಯೋನ್ಮುಖ ತಾರೆ, ವರ್ಷದ ಮಾಧ್ಯಮ ವ್ಯಕ್ತಿ, ವರ್ಷದ ಸಾಮಾಜಿಕ ಉದ್ಯಮಿ, ವರ್ಷದ ಸರ್ಕಾರಿ ಅಧಿಕಾರಿ ಈ ಐದು ವಿಭಾಗಗಳಲ್ಲಿ ಯಾರೇ ಆದರೂ ತಮಗೆ ಸೂಕ್ತವೆಂದು ಕಂಡ ಸಾಧಕರನ್ನು ನಾಮ ನಿರ್ದೇಶನ ಮಾಡಬಹುದು ಎಂದು ತಿಳಿಸಿದ್ದಾರೆ.

ಯಾದಗಿರಿ: ಬೋನಾಳ ಕೆರೆಯಲ್ಲಿ ಪಕ್ಷಿಗಳಿಗಾಗಿ 10 ಕೃತಕ ದ್ವೀಪ ನಿರ್ಮಾಣ.

ಆಯ್ಕೆ ಸಮಿತಿ ಅಧಿಕವಾಗಿ ನಾಮ ನಿರ್ದೇಶನಗೊಂಡ ಐವರ ಪೈಕಿ ಒಬ್ಬರನ್ನು ಆಯ್ಕೆ ಮಾಡಿ ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿಗೆ ಪರಿಗಣಿಸಲಿದೆ. ಆಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣ್ಯರಾದ 16 ಮಂದಿ ಬೆಂಗಳೂರಿಗರಿದ್ದಾರೆ. 2020ರ ಮಾಚ್‌ರ್‍ 28ರಂದು ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎನ್‌ಬಿಎ ಟ್ರಸ್ಟಿಗಳಾದ ವಿಶಾಲ್‌ರಾವ್‌, ಸಂಜಯ್‌ಪ್ರಭು, ತೀರ್ಪುಗಾರರಾದ ಆಂಕಾಲಜಿ ಸರ್ಜನ್‌ ಡಾ.ವಿಶಾಲ್‌ರಾವ್‌, ಸಂಜಯ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಟ ರಮೇಶ್‌ ಅರವಿಂದ್‌ ಬ್ರಾಂಡ್‌ ಅಂಬಾಸಿಡರ್‌

ಎನ್‌ಬಿಎ ಟ್ರಸ್ಟಿಡಾ.ಅಶ್ವಿನ್‌ ಮಹೇಶ್‌ ಮಾತನಾಡಿ, 2009ರಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈವರೆಗೆ 2.80 ಲಕ್ಷಕ್ಕೂ ಹೆಚ್ಚು ಜನರು ನಾಮನಿರ್ದೇಶನಗೊಂಡು 93 ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿ ಪುರಸ್ಕೃತರಿಗೆ ಸ್ಮರಣಿಕೆಗಳು ಮತ್ತು ತಮ್ಮ ನಿಸ್ವಾರ್ಥ ಸೇವೆಗಳನ್ನು ಮುಂದುವರೆಸಲು ಸಾಧ್ಯವಾಗುವಂತೆ ನಗದು ಬಹುಮಾನ ನೀಡಲಾಗಿತ್ತು. ಹಾಗೆಯೇ ಅದನ್ನು ಮುಂದುವರೆಸಲಾಗುವುದು. ತೀರ್ಪುಗಾರರ ಸಮಿತಿ ನಾಮ ನಿರ್ದೇಶನಗಳನ್ನೆಲ್ಲ ಪರಿಶೀಲಿಸಿ, ನಾಮನಿರ್ದೇಶಿತರ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಸಾಧಕರನ್ನು ಅಂತಿಮಗೊಳಿಸಲಾಗುತ್ತದೆ. ಚಿತ್ರನಟ ರಮೇಶ್‌ ಅರವಿಂದ್‌ ಅವರು ಬ್ರಾಂಡ್‌ ರಾಯಭಾರಿಯಾಗಿ ಎನ್‌ಬಿಎ ಜತೆಗೆ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸಂಪೂರ್ಣ ಆನ್‌ಲೈನ್‌

ಎನ್‌ಬಿಎ ಟ್ರಸ್ಟಿಅನಿತಾ ರೆಡ್ಡಿ ಮಾತನಾಡಿ, ನಮ್ಮ ಬೆಂಗಳೂರು ಪ್ರಶಸ್ತಿ ನಾಮ ನಿರ್ದೇಶನ ಸಂಪೂರ್ಣ ಆನ್‌ಲೈನ್‌ನಲ್ಲಿಯೇ ನಡೆಯಲಿದೆ. ಆಸಕ್ತರು ವೆಬ್‌ಸೈಟ್‌: http://nammabengaluruawards.org/ ಗೆ ಲಾಗ್‌ಇನ್‌ ಆಗಬೇಕು. ನಾಮಿನೇಟ್‌ ನೌ ಎಂಬಲ್ಲಿ ಕ್ಲಿಕ್‌ ಮಾಡಿದರೆ ನಾಮಿನೇಷನ್‌ ಫಾರಂ ತೆರೆದುಕೊಳ್ಳುತ್ತದೆ. ಅಲ್ಲಿ ನಾಮನಿರ್ದೇಶನ ಮಾಡಲಿಚ್ಚಿಸುವ ಸಾಧಕರ ಮಾಹಿತಿಯನ್ನು ದಾಖಲಿಸಿ ಅಪ್‌ಲೋಡ್‌ ಮಾಡಬೇಕು ಎಂದು ಹೇಳಿದ್ದಾರೆ.nomination for namma bengaluru award

click me!