'ಇನ್ಮುಂದೆ ಶೌಚಾಲಯ ಬಳಸದಿದ್ದರೆ ಪಡಿತರ, ವಿದ್ಯುತ್ ಕಟ್'

Suvarna News   | Asianet News
Published : Dec 21, 2019, 12:01 PM IST
'ಇನ್ಮುಂದೆ ಶೌಚಾಲಯ ಬಳಸದಿದ್ದರೆ ಪಡಿತರ, ವಿದ್ಯುತ್ ಕಟ್'

ಸಾರಾಂಶ

ಶೌಚಾಲಯ ಬಳಸದಿದ್ದರೆ ಪಡಿತರ ಹಾಗೂ ವಿದ್ಯುತ್ ಕಟ್ ಮಾಡುತ್ತೇವೆ ಎಂದ ಸಿಇಒ ಶಿಲ್ಪಾ ಶರ್ಮಾ| ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹಾಗೂ ಸಿಇಒ ಶಿಲ್ಪಾ ಶರ್ಮಾ| ಶೌಚಾಲಯ ಬಳಸದಿದ್ದರೆ ಸರ್ಕಾರದ ಹಣ ವಾಪಾಸ್ ನೀಡಬೇಕು ಎಂದು ತಾಕೀತು ಮಾಡಿದ ಶಿಲ್ಪಾ ಶರ್ಮಾ|

ಯಾದಗಿರಿ(ಡಿ.21): ಇನ್ಮುಂದೆ ಶೌಚಾಲಯ ಬಳಸದಿದ್ದರೆ ಪಡಿತರ ಹಾಗೂ ವಿದ್ಯುತ್ ಕಟ್ ಮಾಡುತ್ತೇವೆ ಎಂದು ಸಿಇಒ ಶಿಲ್ಪಾ ಶರ್ಮಾ ಅವರು ವಾರ್ನಿಂಗ್ ಮಾಡಿದ್ದಾರೆ.

ಶನಿವಾರ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಜೊತೆ ಗ್ರಾಮಕ್ಕೆ ಭೇಟಿದ ಅವರು ಶೌಚಾಲಯ ಬಳಸದಿದ್ದರೆ ಸರ್ಕಾರದ ಹಣ ವಾಪಾಸ್ ನೀಡಬೇಕು ಎಂದು ತಾಕೀತು ಮಾಡಿದ್ದಾರೆ. ಬಂದಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಶೌಚಾಲಯದಲ್ಲಿ ಕೋಳಿ ಸಾಕಿದ್ದನ್ನು ಕಂಡ ಗರಂ ಆದ ಸಿಇಒ ಶಿಲ್ಪಾ ಶರ್ಮಾ ಅವರು ಶೌಚಾಲಯ ಬಳಸದಿದ್ದರೆ ಪಡಿತರ ಹಾಗೂ ವಿದ್ಯುತ್ ಕಟ್ ಮಾಡುತ್ತೇವೆ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂದಳ್ಳಿ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಶಿಲ್ಪಾ ಶರ್ಮಾ ಅವರು, ಶೌಚಾಲಯ ಪರಿಸ್ಥಿತಿ ಅವಲೋಕಿಸಿದ್ದಾರೆ.  ಶೌಚಾಲಯದಲ್ಲಿ ಕೋಳಿ ಸಾಕೋದಲ್ಲ ಶೌಚಾಲಯ ಬಳಸುವಂತೆ ಸಲಹೆ ನೀಡಿದ್ದಾರೆ. 
 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ