'ಕಾಂಗ್ರೆಸ್‌ ಸರ್ಕಾರದ ರಾಜ್ಯಗಳಲ್ಲೇಕೆ ಗಲಭೆ ಇಲ್ಲ..'?

By Kannadaprabha News  |  First Published Dec 24, 2019, 8:53 AM IST

ಪಂಜಾಬ್‌,ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಅಲ್ಲಿ ಯಾಕೆ ಗಲಾಟೆ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಕಡೆ ಯಾಕೆ ಗಲಾಟೆ ನಡೆಸಲಾಗುತ್ತಿದೆ. ಇದರ ಅರ್ಥ ಏನು? ಎಂದು ಶಾಸಕ ಎಸ್‌.ಎ. ರಾಮದಾಸ್‌ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಮೈಸೂರು(ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಶಾಸಕ ಎಸ್‌.ಎ. ರಾಮದಾಸ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಓವೆಲ್‌ ಮೈದಾನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಪಂಜಾಬ್‌,ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಅಲ್ಲಿ ಯಾಕೆ ಗಲಾಟೆ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಕಡೆ ಯಾಕೆ ಗಲಾಟೆ ನಡೆಸಲಾಗುತ್ತಿದೆ. ಇದರ ಅರ್ಥ ಏನು? ಕಾಯ್ದೆಯ ಕುರಿತು ಸಂಸತ್ತಿನಲ್ಲಿ ಏಕೆ ಏನೂ ಪ್ರಶ್ನಿಸಲಿಲ್ಲ ಎಂದು ರಾಹುಲ್‌ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

Tap to resize

Latest Videos

undefined

ಮೈಸೂರು: JDS ಮುಖಂಡ BJPಗೆ ಸೇರ್ಪಡೆ

ಈ ಕಾಯಿದೆ ತಂದವರು ನೆಹರು. ಅಕ್ರಮವಾಗಿ ಬಂದಿರುವವರಿಗೆ ಎರಡು ರಿಂದ ಐದು ವರ್ಷ ಜೈಲಿಗೆ ಹಾಕಿ ಅಂತ ಕಾನೂನು ತಂದವರು ಕಾಂಗ್ರೆಸ್‌ ಅಲ್ವೆ ? ಆದರೆ ಇಂದು ವೋಟ್‌ ಬ್ಯಾಂಕ್‌ಗಾಗಿ ದೇಶದ ಜನರ ಧಿಕ್ಕು ತಪ್ಪಿಸುತ್ತಿದ್ದಾರೆ. ಪೌರತ್ವ ವಿಚಾರ ಇಟ್ಕೊಂಡು ಮುಸ್ಲಂ ಬಂಧುಗಳಲ್ಲಿ ಕೆಟ್ಟಭಾವನೆ ಮೂಡಿಸುತ್ತಿದ್ದಾರೆ. ಮುಸ್ಲಿಂ ಬಂಧುಗಳು ಇರುವ ಕಡೆ ಹೋಗಿ ಈ ಕಾಯ್ದೆ ಬಗ್ಗೆ ಅರಿವು ಮೂಡಿಸುತ್ತೇನೆ. ಇದು ಯಾರ ವಿರುದ್ಧವೂ ಅಲ್ಲ. ನಾವು ರಾರ‍ಯಲಿ ಮಾಡುತ್ತಿಲ್ಲ. ಬದಲಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಬಿಗ್‌ ಬಜಾರ್‌ ಬಂಪರ್: 10 ವರ್ಷ ಹಿಂದಿನ ಬೆಲೆಯಲ್ಲಿ ವಸ್ತುಗಳ ಮಾರಾಟ

ಸಂವಿಧಾನದ ಪ್ರಕಾರ ಮುಸಲ್ಮಾನರನ್ನು ಕೈಬಿಟ್ಟಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನ, ಆಷ್ಘಾನಿಸ್ತಾನದಿಂದ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದೇ ಈ ಕಾಯ್ದೆಯ ಉದ್ದೇಶ. ದೇಶದ ಒಳಗೂ ಯಾರು ಸಂವಿಧಾನಕ್ಕೆ ಅಗೌರವವಾಗಿ ನಡೆದುಕೊಳ್ಳುತ್ತಾರೋ, ಅಕ್ರಮವಾಗಿ ನಾಗರೀಕತ್ವ ಪಡೆದಿರುವರೋ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದರಲ್ಲಿ ಏನು ತಪ್ಪಿದೆ. ಭಾರತದಲ್ಲಿದ್ದು ಪೌರತ್ವಪಡೆದು ಪಾಕಿಸ್ತಾನ ಮುಂತಾದ ದೇಶಗಳಿಗೆ ಸಹಾಯ ಮಾಡಿದರೆ ಅಂತವರ ಪೌರತ್ವ ತೆಗೆದು ಹಾಕುವ ಶಕ್ತಿ ಈ ಕಾಯ್ದೆಗಿದೆ ಎಂದಿದ್ದಾರೆ.

click me!