
ಧಾರವಾಡ[ಅ.10]: ಹುಬ್ಬಳ್ಳಿ ನಗರ ವಿಭಾಗದ ವ್ಯಾಪ್ತಿಯಲ್ಲಿ ಬರುವ 11 ಕೆ.ವಿ. ಪೀಡರ್‌ಗಳ ವಿದ್ಯುತ್ ಮಾರ್ಗವನ್ನು ಭೂಗತ ಕೇಬಲ್‌ಗೆ ಪರಿವರ್ತಿಸುವ ಕೆಲಸಗಳನ್ನು ಕೈಗೊಳ್ಳುವುದರಿಂದ ಅ. 10ರಿಂದ 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅ. 10ರ ಬುಧವಾರ ಹುಬ್ಬಳ್ಳಿ ಕಾರಬನ್ ಗ್ಯಾಸ್ ಕಂಪನಿ, ಇನ್ಫೋಸಿಸ್, ಕಲ್ಕಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜಗದೀಶ ನಗರ, ದೇಶಪಾಂಡೆ ಫೌಂಡೇಶನ್, ಬಂಜಾರ ಕಾಲೋನಿ, ಸಿಟಿ ಆರ್ಮ್ಡ್ ರಿಸರ್ವ್ ಪೊಲೀಸ್ ಹೆಡ್ ಕ್ವಾರ್ಟಸ್, ಗೋಕುಲ ಗ್ರಾಮ, ಗೋಕುಲ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅ. 11 ಗುರುವಾರ ಶಿವಗಂಗಾ ಲೇಔಟ್, ಹೆಸ್ಕಾಂ ವಲಯ ಕಚೇರಿ, ಸ್ವರ್ಣಾ ಗಾರ್ಡನ್, ಶಬರಿನಗರ, ಕಂದ್ಕೂರ್ ಲೇಔಟ್, ಬನಶಂಕರಿ 2ನೇ ಹಂತ, ಪಾರಸ್ವಾಡಿ 1 ಮತ್ತು 2ನೇ ಹಂತ, ಅಂಬಿಕಾನಗರ, ವಿನಯ ಕಾಲೋನಿ, ಹಸ್ತಿನಾಪುರ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅ. 12 ಶುಕ್ರವಾರ ಆನಂದನಗರ, ಘೋಡಕೆ ಪ್ಲಾಟ್, ಸಿದ್ದರಾಮೇಶ್ವರ ನಗರ, ಮಹಾನಂದಿನಿ ಲೇಔಟ್, ಜೈ ಹನುಮಾನ ನಗರ, ಮಯೂರ ನಗರ, ಬಾಪೂಜಿ ಕಾಲನಿ, ರಾಮ ಲೋಹಿಯಾ ನಗರ, ಮುರಾರ್ಜಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅ. 13 ಶನಿವಾರ ಶಕ್ತಿ ನಗರ, ಅರುಣ್ ಕಾಲೋನಿ, ಕುರ್ಡೇಕರ್ ಪ್ಲಾಟ್, ಜೆ.ಪಿ.ನಗರ್, ಬಿಗ್ ಬಜಾರ್, ಶ್ರೇಯಾ ಎಸ್ಟೇಟ್, ವೆಂಕಟೇಶ್ವರ ಕಾಲೋನಿ, ಸುರಭಿ ನಗರ, ನೆಹರು ನಗರ, ಪದ್ಮರಾಜ್ ನಗರ, ಅಕ್ಷಯ ಪಾರ್ಕ್, ಸಿಲ್ವರ್ ಟೌನ್, ಅರ್ಜುನ್ ವಿಹಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅ. 14 ಭಾನುವಾರ ತಾರಿಹಾಳ ಇಂಡಸ್ಟ್ರೀಯಲ್ ಭಾಗ, ಗೋಕುಲ್ ಆಗ್ರೋ, ಹವಾ ವಾಲ್ಸ್, ಹೊಸೂರ್ ಇಂಡಸ್ಟ್ರೀ, ಬಾಬು ರಾವ್ ಬೇಕರ್ಸ್, ಮೆವಿನ್ ಇಂಡಸ್ಟ್ರೀ, ಅವಲಕ್ಕಿ ಮಿಲ್ಲ್, ಗಜಾನನ ಇಂಡಸ್ಟ್ರೀ, ಕೊರಮಂಡಲ, ಅರಶಿಣಪುಡಿ ಟಿಸಿ, ತಿರುಪತಿ ಆಯಿಲ್ ಮಿಲ್ಲ್, ಪಾಟೀಲ್ ಗ್ರಾನೈಟ್, ಸುವರ್ಣ ಎಂಜಿನಿಯರ್ಸ್, ನಾ.ಕಾ. ದೇವಜಿ ಕಂಪನಿ, ಪಸ್ಟ್ ಸ್ಟೀಲ್, ಬಸಂತ ಟೈಲ್ಸ್, ಸಾಯಿ ಅಗ್ರೊ, ಎ.ಐ.ಎಂ.ಎಸ್, ಗೌತಮ್ ಟೈಲ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಕಣವಿ ಹೊನ್ನಾಪುರ ರಸ್ತೆ, ಆಶ್ರಯ ಕಾಲನಿ, ತಾರಿಹಾಳ ಗ್ರಾಮ, ಸೇರಿ ವಿವಿಧೆಡೆ ವಿದ್ಯುತ್ ವಿತರಣೆ ಇರುವುದಿಲ್ಲ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.