ಮುಸ್ಲಿಂ ಮತಗಳಿಲ್ಲದೇ ನಾಲ್ಕು ಬಾರಿ ಗೆದ್ದಿದ್ದೇನೆ : ಬಿಜೆಪಿ ಸಂಸದ

By Web DeskFirst Published Jun 17, 2019, 3:02 PM IST
Highlights

ಮುಸ್ಲಿಮರ ಮತಗಳಿಲ್ಲದೇ ನಾನು ನಾಲ್ಕು ಬಾರಿ ಗೆದ್ದಿದ್ದೇನೆ ಎಂದು ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾರೆ. 

ಚನ್ನಗಿರಿ: 2004ರಿಂದ 2019ರ ವರೆಗೆ ಸತತವಾಗಿ ಸಂಸದನಾಗಿದ್ದರೂ ನಾಲ್ಕು ಬಾರಿಯೂ ಮುಸ್ಲಿಂಮರ ಮತಗಳಿಲ್ಲದೇ ಗೆಲುವು ಸಾಧಿಸಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋದ ನನ್ನ ಕ್ಷೇತ್ರದ ಜನರು 4ಸಾರಿ ಸಂಸದ ನನ್ನಾಗಿ ಮಾಡಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ಹೇಳಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ಶ್ರೀ ಮೌದ್ಗಲ್‌ ಅಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ದಾವಣಗೆರೆ ಲೋಕಸಬಾ ಕ್ಷೇತ್ರದಲ್ಲಿ ಸತತ  4 ಬಾರಿ ಸಂಸದರಾಗಿ ಆಯ್ಕೆಯಾದ ಜಿ.ಎಂ.ಸಿದ್ದೇಶ್ವರ್‌ ಅವರಿಗೆ ಪಕ್ಷದ ಗೆಲುಗೆ ಶ್ರಮಿಸಿದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮತ್ತು ಮತದಾರ ಬಂಧುಗಳಿಗೆ ಅಭಿನಂಧನಾ ಸಮಾರಂಭದಲ್ಲಿ ಅಭಿನಂಧನೆಯನ್ನು ಸ್ವೀಕರಿಸಿ ಮಾತನಾಡಿದರು.

ಚನ್ನಗಿರಿ ಕೆರೆಬಿಳಚಿ, ಹೊನ್ನೆಬಾಗಿ, ನಲ್ಲೂರು ಮತ್ತು ಮುಸ್ಲಿಂ ಮರೇ ಹೆಚ್ಚಾಗಿರುವ ಗ್ರಾಮ ಮತ್ತು ವಾರ್ಡಗಳಲ್ಲಿ ಬಿಜೆಪಿ ಪಕ್ಷಕ್ಕೆ ಮತಗಳನ್ನೆ ಹಾಕಿಲ್ಲ.  ಕೇಂದ್ರದಲ್ಲಿ ಆಗಲಿ, ರಾಜ್ಯದಲ್ಲಾಗಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೂ ಯಾವ ಮುಸ್ಲಿಂ ಮರಿಗೆ ತೊಂದರೆ ಕೊಟ್ಟಿದ್ದೀವಿ.  ನಮ್ಮ ಪಕ್ಷ ಅಧಿಕಾರ ದಲ್ಲಿದ್ದರೂ ಮುಸ್ಲಿಂಮರು ವಾಸಿಸುವಂತಹ ಪ್ರದೇಶಗಳ ಅಭಿವೃದ್ದಿಗೆ ಅನುದಾನವನ್ನು ನೀಡಿ ಅಭಿವೃದ್ದಿ ಪಡಿಸಿಲ್ಲವೆ ಎಂದರು. 

ಕಳೆದ 3 ಅವಧಿಯಲ್ಲಿಯೋ ಸಂಸದನಾಗಿ  ಕ್ಷೇತ್ರ ಅಭಿವೃದ್ದಿ ಮಾಡುತ್ತಾ ಮುನ್ನಡೆದಿದ್ದರ ಪರಿಣಾಮವಾಗಿ 4ನೇ ಬಾರಿಗೂ ಕ್ಷೇತ್ರದ ಜನರು ಅಧಿಕ ಮತಗಳನ್ನು ನೀಡಿದ್ದಾರೆ. ಅದಕ್ಕಾಗಿ ಮುಂದಿನ 5ವರ್ಷಗಳ ಅಧಿಕಾರದಲ್ಲಿ ಚನ್ನಗಿರಿ ತಾಲೂಕನ್ನು ಮತ್ತಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದು ತಮ್ಮ ಗುರಿ ಎಂದು ಸಿದ್ದೇಶ್ವರ್ ಹೇಳಿದರು. 

click me!