ಮಲೆ ಮಹದೇಶ್ವರ ಲಾಕ್‌ಡೌನ್ : ನಿಜವೇ..?

By Kannadaprabha NewsFirst Published Apr 19, 2021, 2:28 PM IST
Highlights

ಪ್ರಸಿದ್ಧ ಮಾದಪ್ಪನ ಸನ್ನಿಧಿ ಮಲೆಮಹದೇಶ್ವರದಲ್ಲಿ ಲಾಕ್‌ಡೌನ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಇಲ್ಲಿನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. 

 ಕೊಳ್ಳೇಗಾಲ (ಏ.19):  ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಎಂಬ ಶೀರ್ಷಿಕೆಯುಳ್ಳ ಲೋಗೋ ಪ್ರಕಟಿಸಿ, ಮಾದಪ್ಪನ ಸನ್ನಿಧಿ ಏ.20 ರಂದು ಲಾಕ್‌ ಡೌನ್‌ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಭಕ್ತಾಧಿಗಳು ಈ ಸುಳ್ಳು ಸುದ್ದಿ, ವದಂತಿಗೆ ಮನ್ನಣೆ ನೀಡಬಾರದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ರೀತಿ ಜಾಲತಾಣಗಳಲ್ಲಿ ಪ್ರಕಟಣೆಯಲ್ಲಿ ಲೋಗೋ ನಮ್ಮ ಪ್ರಾಧಿಕಾರದಲ್ಲಿಲ್ಲ. ಯಾರೋ ಪ್ರಾಧಿಕಾರಕ್ಕೆ ಸಂಬಂಧವಿಲ್ಲದವರು ಈ ರೀತಿ ಸುದ್ದಿ ಹರಿಬಿಟ್ಟಿದ್ದು, ಇದನ್ನು ಭಕ್ತಾಧಿಗಳು ನಂಬಬಾರದು, ದೇವಾಲಯವನ್ನು ಲಾಕ್‌ಡೌನ್‌ ಮಾಡಲು ಜಿಲ್ಲಾಡಳಿತದಿಂದಾಗಲೀ ಅಥವಾ ಸರ್ಕಾರದಿಂದಾಗಲೀ ಯಾವುದೇ ಆದೇಶ ಬಂದಿಲ್ಲ, ಜಾತ್ರೆ ಇತ್ಯಾದಿ ಇರುವುದಿಲ್ಲ. ರಾತ್ರಿ ತಂಗುವಿಕೆ ವಸತಿ ಮನೆ ಹೊರತುಪಡಿಸಿ ಉಳಿದೆಡೆ ಎಲ್ಲೆಂದರಲ್ಲಿ ತಂಗಲು ಅವಕಾಶವಿಲ್ಲ, ಸ್ಯಾನಿಟೈಸರ್‌ ಮತ್ತು ಫೀವರ್‌ ಚೆಕ್‌ ಕಡ್ಡಾಯ. ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿದ್ದು. ಯಾವುದೇ ಅಂಗಡಿ ಮಳಿಗೆಗಳನ್ನು ಮುಚ್ಚುತ್ತಿಲ್ಲ. ಲಾಡು ಪ್ರಸಾದ ಮಾರಾಟ ಇದೆ. ತೀರ್ಥ ನೀಡಲಾಗದು.

ಕೊಳ್ಳೇಗಾಲ: ಕೇವಲ 28 ದಿನದಲ್ಲಿ ಮಾದಪ್ಪನ ಹುಂಡೀಲಿ ಬರೋಬ್ಬರಿ 1.54 ಕೋಟಿ ಆದಾಯ ..

ದಾಸೋಹದಲ್ಲಿ ಬಫೆ ಪದ್ಧತಿಯಲ್ಲಿ ಉಚಿತ ತಿಂಡಿ ನೀಡಲಾಗುತ್ತಿದೆ. ಇದು ಸರ್ಕಾರದ ಆದೇಶದ ತನಕ ಮುಂದುವರೆಯಲಿದೆ ಎಂದಿದ್ದಾರೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಎಂಬ ಸಂಸ್ಥೆಗೆ ಪ್ರಾಧಿಕಾರದ ಪರವಾಗಿ ಅಥವಾ ದೇವಸ್ಥಾನದ ಪರವಾಗಿ ಈ ರೀತಿ ಯಾವುದೇ ಹೇಳಿಕೆಗಳನ್ನು ಕೊಡಲು ಅಧಿಕಾರ ನೀಡಿರುವುದಿಲ್ಲ ಎಂದಿದ್ದಾರೆ.

click me!