ಕೊಪ್ಪಳದಲ್ಲಿ ಸರ್ಕಾರಿ ಯೋಜನೆಗಳಿಗೆ ಜಾಗವೇ ಇಲ್ಲ!

By Kannadaprabha News  |  First Published Sep 15, 2022, 1:41 PM IST

ಜಿಲ್ಲಾಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜು ಬಳಿ ಒಂದು ಅಡಿ ಸರ್ಕಾರಿ ಭೂಮಿ ಇಲ್ಲ. ಹೀಗಾಗಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಇಂಥ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆದರೂ ಚುನಾಯಿತ ಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ.


ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.15): ದೂರದೃಷ್ಟಿ ಕೊರತೆ ಮತ್ತು ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವ ಪರಿಣಾಮ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಅನೇಕ ಸರ್ಕಾರಿ ಯೋಜನೆಗಳಿಗೆ ಭೂಮಿ ಇಲ್ಲದಂತಾಗಿದೆ. ಹೀಗಾಗಿ ಅವುಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಇತ್ತೀಚೆಗೆ ಕೊಪ್ಪಳಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಕನ್ನಡಪ್ರಭ’ ಪ್ರಾರಂಭಿಸಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಅಭಿಯಾನಕ್ಕೆ ಸ್ಪಂದಿಸಿ ಆಸ್ಪತ್ರೆ ಘೋಷಣೆ ಮಾಡಿದ್ದರು. ಆದರೆ, ಆಸ್ಪತ್ರೆ ಸ್ಥಾಪನೆಗೆ ಜಾಗದ ಅಭಾವ ಎದುರಾಗಿದೆ.

Latest Videos

undefined

ಜಿಲ್ಲಾಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜು ಬಳಿ ಒಂದು ಅಡಿ ಸರ್ಕಾರಿ ಭೂಮಿ ಇಲ್ಲ. ಹೀಗಾಗಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಇಂಥ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆದರೂ ಚುನಾಯಿತ ಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ.

KARNATAKA POLITICS: ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ ಬಿಜೆಪಿ ಮುಖಂಡ

ಕೊಪ್ಪಳಕ್ಕೆ ಸ್ನಾತಕೊತ್ತರ ಕೇಂದ್ರ ಪ್ರಾರಂಭವಾಗಿ ನಾಲ್ಕಾರು ವರ್ಷಗಳಾಗಿವೆ. ಅದಕ್ಕೊಂದು ಸ್ವಂತ ಕಟ್ಟಡ ಇಲ್ಲ. ಕೊನೆಗೆ ತಳಕಲ್ಲ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ. ಇನ್ನು ತಾಲೂಕು ಕೇಂದ್ರಗಳಲ್ಲಿ ಸ್ನಾತಕೋತ್ತರ ಕೇಂದ್ರಗಳಿವೆ. ಕಟ್ಟಡಗಳೂ ಇವೆ. ಆದರೆ, ಕೊಪ್ಪಳದಲ್ಲಿ ಮಾತ್ರ ಇದುವರೆಗೂ ಸ್ನಾತಕೊತ್ತರ ಕೇಂದ್ರದ ಕಟ್ಟಡ ಇಲ್ಲ.

ಅಷ್ಟೇ ಯಾಕೆ, ಸರ್ಕಾರಿ ಪದವಿ ಕಾಲೇಜು ಕಟ್ಟಡವೂ ವಿದ್ಯಾರ್ಥಿಗಳಿಗೆ ಸಾಲುತ್ತಿಲ್ಲ. ಮೂರುವರೆ ಸಾವಿರ ವಿದ್ಯಾರ್ಥಿಗಳು ಇದ್ದು, ಕಟ್ಟಡ ಸಮಸ್ಯೆ ಎದುರಾಗಿದ್ದು, ಈಗೀಗ ಸರ್ಕಾರ ಪದವಿ ಕಾಲೇಜು ಕಟ್ಟಡವನ್ನು ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಸರ್ಕಾರಿ ಪದವಿ ಕಾಲೇಜಿಗೆ ಯುಜಿಸಿ ಅನುದಾನದಿಂದ ಸಭಾಂಗಣ ನಿರ್ಮಾಣಕ್ಕೆ .75 ಲಕ್ಷ ಬಂದಿತ್ತು. ಜಾಗದ ಸಮಸ್ಯೆಯಿಂದ ವಾಪಸ್‌ ಹೋಯಿತು.

ಇತ್ತೀಚೆಗೆ ಕೊಪ್ಪಳಕ್ಕೆ ರಾಜ್ಯ ಸರ್ಕಾರ ವಿವಿ ಘೋಷಿಸಿದೆ. ಅದಕ್ಕೆ ಜಿಲ್ಲಾ ಕೇಂದ್ರದಲ್ಲಿ ಜಾಗವಿಲ್ಲ, ಬಾಡಿಗೆಗೊಂದು ಕಟ್ಟಡವೂ ಇಲ್ಲ. ಇದನ್ನು ಅನಿವಾರ್ಯವಾಗಿ ಬೇರೆಡೆ ಪ್ರಾರಂಭಿಸಬೇಕಾದ ಸ್ಥಿತಿ ಬರಲಿದೆ ಅಥವಾ ಜಾಗ ಮತ್ತು ಸೂಕ್ತ ಸ್ಥಳಾವಕಾಶದ ಸಮಸ್ಯೆಯಿಂದ ಬೇರೆ ತಾಲೂಕಿಗೆ ವರ್ಗಾವಣೆಯೂ ಆಗಬಹುದು. ಮಹಿಳಾ ಪದವಿ ಕಾಲೇಜಿಗೂ ಕಟ್ಟಡಕ್ಕೆ ಜಾಗದ್ದೇ ದೊಡ್ಡ ಸಮಸ್ಯೆಯಾಗಿತ್ತು. ಕೊನೆಗೆ ತಾಲೂಕು ಕ್ರೀಡಾಂಗಣದಲ್ಲಿಯೇ ಸ್ಥಳಾವಕಾಶ ಮಾಡಿಕೊಟ್ಟು, ಗೋದಾಮಿನಂತೆ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನಿಂದ ಆಚೆ ಬಂದು ನಿಲ್ಲುವುದಕ್ಕೂ ಜಾಗವಿಲ್ಲ.

ತೋಟಗಾರಿಕಾ ಇಲಾಖೆಯಿಂದ ರೈತರ ಸಂತೆ ಮಾಡಲು ಮತ್ತು ರೈತ ಮಾರುಕಟ್ಟೆನಿರ್ಮಾಣಕ್ಕೆ ಹಲವು ಯೋಜನೆಗಳಿದ್ದರೂ ಜಾಗದ ಅಭಾವ ಎದುರಾಗಿದೆ. ಆದರೂ ತೋಟಗಾರಿಕಾ ಇಲಾಖೆಯಲ್ಲಿ ಇರುವ ಜಾಗದಲ್ಲಿ ಒಂದರ ಮೇಲೊಂದು ನಿರ್ಮಾಣ ಮಾಡಲಾಗುತ್ತದೆ. ಇಷ್ಟಾದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಇದು ಅನೇಕ ಯೋಜನೆಗಳು ನನೆಗುದಿಗೆ ಬೀಳುವುದಕ್ಕೆ ಕಾರಣವಾಗಿದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳದಿದ್ದರೆ ದೊಡ್ಡ ಸಮಸ್ಯೆಯಾಗಲಿದೆ. ಅಭಿವೃದ್ಧಿ ಕುಂಠಿತವಾಗಲಿದೆ.

ಎರಡೂ ಕಿಡ್ನಿ ವೈಫಲ್ಯ; ಬೇಕಿದೆ ಸಹಾಯಹಸ್ತ, ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಬಡ ಕುಟುಂಬ

ಭೂ ಬ್ಯಾಂಕ್‌ ಬೇಕು:

ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಭೂ ಬ್ಯಾಂಕ್‌ ಬೇಕು. ಇದಕ್ಕಾಗಿ ಸರ್ಕಾರ ಮುಂದಾಗಬೇಕು. ಶಾಲಾ- ಕಾಲೇಜು, ವಿವಿ ಮತ್ತು ವಿವಿಧ ಕಾಲೇಜುಗಳಿಗಾಗಿ ಭೂ ಬ್ಯಾಂಕ್‌ ಅಗತ್ಯವಿದ್ದು, ಸುಮಾರು 500 ಎಕರೆ ಭೂಮಿ ಖರೀದಿಸುವ ಅಗತ್ಯವಿದೆ.
ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಅನೇಕ ಯೋಜನೆಗಳು ಇದ್ದರೂ ಅದಕ್ಕೆ ಜಾಗದ ಸಮಸ್ಯೆಯಾಗಿದೆ. ಇದರಿಂದ ಅನೇಕ ವರ್ಷಗಳಿಂದ ನನೆಗುದಿಗೆ ಬೀಳುವಂತಾಗಿದೆ. ಇದಕ್ಕಾಗಿ ಸುಮಾರು 500 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಅಗತ್ಯವಿದೆ ಅಂತ ಕೊಪ್ಪಳದ ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ ತಿಳಿಸಿದ್ದಾರೆ. 

ಸರ್ಕಾರದ ಅನೇಕ ಯೋಜನೆಗಳಿಗೆ ಜಾಗದ ಸಮಸ್ಯೆಯಾಗುತ್ತಿರುವುದು ಬೇಸರದ ಸಂಗತಿ. ಸರ್ಕಾರ ಇನ್ನಾದರೂ ಎಚ್ಚೆತ್ತು ಸೂಕ್ತ ಜಾಗವನ್ನು ಒದಗಿಸುವ ಅಗತ್ಯವಿದೆ ಅಂತ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡ್ರ ತಿಳಿಸಿದ್ದಾರೆ. 
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಸಿಎ ಸೈಟ್‌ಗಳ ಮೂಲಕವೇ ಅನೇಕ ಸರ್ಕಾರದ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಆದರೂ ದೊಡ್ಡ ದೊಡ್ಡ ಯೋಜನೆಗಳಿಗೆ ಭೂಮಿ ಬೇಕು ಅಂತ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮಹಾಂತೇಶ ಪಾಟೀಲ್‌ ಮೈನಳ್ಳಿ ಹೇಳಿದ್ದಾರೆ. 
 

click me!