ಕೈನಲ್ಲಿ ಗೆದ್ದು ಈಗ ಬಿಜೆಪಿಗೆ ಬೆಂಬಲ ಕೊಟ್ಟವರಿಗೆ ರಾಜಕೀಯ ಭವಿಷ್ಯವಿಲ್ಲ : ಶಾಸಕ ಗರಂ

By Kannadaprabha NewsFirst Published Oct 6, 2021, 12:20 PM IST
Highlights
  •  ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ  ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ
  •  ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಅಂತಹವರಿಗೆ ರಾಜಕೀಯವಾಗಿ ಮುಂದೆ ಯಾವದೇ ಭವಿಷ್ಯ ಇಲ್ಲ

ಬಂಗಾರಪೇಟೆ (ಅ.06) :  ಕಾಂಗ್ರೆಸ್‌ (Congress) ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಬೆಂಬಲ ನೀಡಿದ್ದ ಡಿಕೆಹಳ್ಳಿ ಗ್ರಾಪಂ ಉಪಾಧ್ಯಕ್ಷೆ ರಾಧಮ್ಮ ಮತ್ತು ದೊಡ್ಡವಲಗಮಾದಿ ಗ್ರಾಪಂ ಅಧ್ಯಕ್ಷೆಯ ಪತಿ ಶೇಷು ರವರಿಗೆ ಜನರೇ ಬುದ್ದಿ ಕಲಿಸಲಿದ್ದಾರೆಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ (Narayanaswamy) ಹೇಳಿದರು.

ಡಿಕೆಹಳ್ಳಿ,ಚಿನ್ನಕೋಟೆ, ದೊಡ್ಡವಲಗಮಾದಿ ಗ್ರಾಪಂಗಳಲ್ಲಿ ನಡೆದ ಕಾಂಗ್ರೆಸ್‌ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿ, ಕೆಲವರು ಕಾಂಗ್ರೆಸ್‌ನಲ್ಲಿ ಬೆಳೆದು ಈಗ ಬಿಜೆಪಿ (BJP) ವ್ಯಾಮೋಹದಿಂದ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಅಂತಹವರಿಗೆ ರಾಜಕೀಯವಾಗಿ ಮುಂದೆ ಯಾವದೇ ಭವಿಷ್ಯ ಇಲ್ಲ ಎಂದರು.

Latest Videos

 40 ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ : ಸತೀಶ ಜಾರಕಿಹೊಳಿ ಹೊಸ ಬಾಂಬ್‌

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ.ಕೆ.ಮಾತನಾಡಿ ದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ವಿಪಕ್ಷಗಳನ್ನು ದಮನ ಮಾಡಲು ಮುಂದಾಗಿದೆ.ದೇಶದಲ್ಲಿ ಹಿಟ್ಲರ್‌ (Hitlar) ಆಡಳಿತ ಹೇರಲು ಪ್ರಧಾನಿ ಮೋದಿ (PM Narendra Modi) ಮುಂದಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಬರೀ ಶ್ರೀಮಂತರ ಮಾತ್ರ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ವಿನಃ ಬಡವರು ಮತ್ತಷ್ಟುಪಾತಾಳಕ್ಕೆ ಕುಸಿದಿದ್ದಾರೆಂದು ಆರೋಪಿಸಿದರು.

ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ನಾಗರಾಜ್‌,ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು,ತಾಪಂ ಮಾಜಿ ಸದಸ್ಯ ಅಮರೇಶ್‌,ಗ್ರಾಪಂ ಸದಸ್ಯ ಕಿರಣ್‌ ಕುಮಾರ್‌,ಜೀವನ್‌,ಮುಖಂಡರಾದ ಮಲ್ಲೇಶ್‌,ಉದ್ಯಮಿ ಗೋಪಾಲರೆಡ್ಡಿ ಮತ್ತಿತರರು ಇದ್ದರು.

ನನಗೂ ಆಫರ್ ಬಂದಿತ್ತು 

 

ಬಿಜೆಪಿ (BJP) ಸೇರಿದರೆ ಹಣದ ಜೊತೆ ಮಂತ್ರಿಗಿರಿ ಸಹ ಕೊಡಲಾಗುವುದೆಂದು ನನಗೂ ಆಫರ್‌ ನೀಡಿದ್ದರು, ಆದರೆ ಮಾತೃಪಕ್ಷಕ್ಕೆ ದ್ರೋಹ ಬಗೆಯಬಾರದೆಂದು ಬಿಜೆಪಿಗರ ಆಫರ್‌ ನಿರಾಕರಿಸಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ (Narayana Swamy) ಹೇಳಿದರು.

ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾಂಗ್ರೆಸ್‌ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿ, ನನಗೆ ಹಣದ ವ್ಯಾಮೋಹವಿದ್ದಿದ್ದರೆ ಯಡಿಯೂರಪ್ಪ (Yediyurappa) ಮುಖ್ಯಮಂತ್ರಿಯಾಗಿದ್ದಾಗ ನನಗೂ ಪಕ್ಷ ಸೇರುವಂತೆ ಮುಖಂಡರು ಆಮಿಷವೊಡ್ಡಿದ್ದರು. ಆದರೆ ನಾನು ಅವರ ಆಹ್ವಾನವನ್ನು ನಿರಾಕರಿಸಿದೆ ಎಂದು ತಿಳಿಸಿದರು.

40 ಅಲ್ಲ, 4 ಬಿಜೆಪಿ ಶಾಸಕರನ್ನು ಕರೆದುಕೊಂಡು ಹೋಗಲಿ

ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆ :  ಕಳೆದ 8ವರ್ಷಗಳಿಂದ ಶಾಸಕನಾಗಿ ಕ್ಷೇತ್ರದದಲ್ಲಿ ಅಭಿವೃದ್ದಿಯಲ್ಲಿ ಹಿಂದೆದೂ ಕಾಣಷ್ಟುಸಾಧನೆ ಮಾಡಿರುವೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ (JDS) ಅಭ್ಯರ್ಥಿಗೆ 54ಸಾವಿರ ಮತಗಳನ್ನು ನೀಡಿದ್ದು ಬೇಸರ ತಂದಿದೆ. ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ ಮಾಡುವರೆಂದು ನಂಬಿ ಮತ ಹಾಕಿದರು. ಆದರೆ ಅವರು ಮುಖ್ಯಮಂತ್ರಿಯಾದರೂ ಏನೂ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

click me!