ವಿದ್ಯುತ್ ಬಿಲ್ ಪಾವತಿಗೆ ಅವಧಿ ವಿಸ್ತರಣೆ ಇಲ್ಲ..!

By Kannadaprabha NewsFirst Published Apr 5, 2020, 7:57 AM IST
Highlights

ವಿದ್ಯುತ್‌ ಗ್ರಾಹಕರು 3 ತಿಂಗಳ ಅವ​ಧಿಗೆ ಬಿಲ್‌ ಪಾವತಿಸುವುದನ್ನು ಮುಂದೂಡುವ ಕುರಿತು ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಗ್ರಾಹಕರು ತಮ್ಮ ವಿದ್ಯುತ್‌ ಬಿಲ್‌ ಪಾವತಿಗೆ ಮುಂದಾಗಬೇಕು ಎಂದು ಮೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಮಂಗಳೂರು(ಏ.05): ವಿದ್ಯುತ್‌ ಗ್ರಾಹಕರು 3 ತಿಂಗಳ ಅವ​ಧಿಗೆ ಬಿಲ್‌ ಪಾವತಿಸುವುದನ್ನು ಮುಂದೂಡುವ ಕುರಿತು ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಗ್ರಾಹಕರು ತಮ್ಮ ವಿದ್ಯುತ್‌ ಬಿಲ್‌ ಪಾವತಿಗೆ ಮುಂದಾಗಬೇಕು ಎಂದು ಮೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಲಾಕ್‌​ಡೌನ್‌ ಹಿನ್ನೆ​ಲೆ​ಯಲ್ಲಿ ಎಲ್ಲ ವಿದ್ಯುತ್‌ ಗ್ರಾಹಕರಿಗೆ ಸರಾಸರಿ ಬಿಲ್‌ ಅಥವಾ ಹಿಂದಿನ ತಿಂಗಳ ಬಿಲ್‌ ನೀಡುವ ವ್ಯವಸ್ಥೆ ಮಾಡಲಾಗುವುದು. ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರಿಗೆ ವಿದ್ಯುತ್‌ ಬಿಲ್‌ನ್ನು ಇ-ಮೇಲ್‌ / ಎಸ್‌ಎಂಎಸ್‌ / ವಾಟ್ಸಾಪ್‌ ಮುಖಾಂತರ ಕಳುಹಿಸಲಾಗುವುದು.

ಹಚ್ಚೋಣ ಏಕತಾ ದೀಪ: ಇಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ಬೆಳಕಿನ ಅಭಿಯಾನ!

ಗ್ರಾಹಕರು ಸಹಾಯವಾಣಿ 1912ಕ್ಕೆ ಕರೆಮಾಡಿ ಅವರ ಅಕೌಂಟ್‌ ಐಡಿ ಹಾಗೂ ಮೊಬೈಲ್‌ ಸಂಖ್ಯೆಯನ್ನು ನೀಡಿದಲ್ಲಿ ಬಿಲ್‌ ವಿವರಗಳನ್ನು ಇ-ಮೇಲ್‌ / ಎಸ್‌ಎಂಎಸ್‌ / ವಾಟ್ಸಾಪ್‌ ಮುಖಾಂತರ ಕಳುಹಿಸಲಾಗುವುದು. ಗ್ರಾಹಕರು ಮೆಸ್ಕಾಂನ ಜಾಲತಾಣ(http://www.mesco.in/ )ನಲ್ಲಿ ನೋಂದಾಯಿಸಿಕೊಂಡು ವಿದ್ಯುತ್‌ ಬಿಲ್‌ ವಿವರಗಳನ್ನು ಪಡೆಯಬಹುದು.

ಗ್ರಾಹಕರು ಆನ್‌ಲೈನ್‌/ಡಿಜಿಟಲ್‌ ವಿಧಾನಗಳ ಮೂಲಕ ವಿದ್ಯುತ್‌ ಬಿಲ್‌ ಪಾವತಿಸಲು ವಿನಂತಿಸಲಾಗಿದೆ. ಮೇ 1ರಿಂದ ಯಥಾಪ್ರಕಾರ ಮಾಪಕ ಓದುವಿಕೆ, ಬಿಲ್‌ ಹಂಚುವಿಕೆ ಹಾಗೂ ಬಿಲ್‌ ಸ್ವೀಕೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಮತ್ತು ವಾಸ್ತವಿಕ ಬಳಕೆಯಲ್ಲಿ ಹಾಗೂ ಸರಾಸರಿ ಬಳಕೆಯಲ್ಲಿ ತಪ್ಪು / ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ಮಾಹೆಯ ಬಿಲ್‌ನಲ್ಲಿ ಸರಿಪಡಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

click me!