ಮೇಲುಕೋಟೆಯಲ್ಲಿ ವಾರದಲ್ಲಿ 2 ದಿನ ದೇವರ ದರ್ಶನವಿಲ್ಲ

Suvarna News   | Asianet News
Published : Aug 15, 2020, 04:22 PM IST
ಮೇಲುಕೋಟೆಯಲ್ಲಿ  ವಾರದಲ್ಲಿ 2 ದಿನ ದೇವರ ದರ್ಶನವಿಲ್ಲ

ಸಾರಾಂಶ

ಮೇಲುಕೋಟೆ ಚೆಲುವನಾರಾಯಣನ ಸನ್ನಿಧಿಯಲ್ಲಿ ವಾರದಲ್ಲಿ ಎರಡು ದಿನ ದೇವರ ದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಈ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ.

ಪಾಂಡವಪುರ (ಆ.15): ಮೇಲುಕೋಟೆ ಚಲುವನಾರಾಯಣಸ್ವಾಮಿ ಮತ್ತು ಶ್ರೀಯೋಗನರಸಿಂಹಸ್ವಾಮಿ ದೇವಾಲಯಗಳಲ್ಲಿ ಶ್ರಾವಣ ಶನಿವಾರ ಮತ್ತು ಭಾನುವಾರಗಳಂದು ದೇವರ ದರ್ಶನ ನಿರ್ಭಂದಿಸಿರುವದರಿಂದ ಸಾರ್ವಜನಿಕರು ದೇವರ ದರ್ಶನಕ್ಕೆ ಬಾರದಂತೆ ತಹಸೀಲ್ದಾರ್‌ ಪ್ರಮೋದ್‌ ಪಾಟೀಲ್ ಮನವಿ ಮಾಡಿದ್ದಾರೆ.

ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ....

 ಈ ದೇವಾಲಯಗಳಲ್ಲಿ ಶ್ರಾವಣ ಶನಿವಾರ ಮತ್ತು ಭಾನುವಾಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಕೋವಿಡ್‌ -19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಸರ್ಕಾರದ ಮಾರ್ಗಸೂಚಿಗಳನ್ವಯ ಸಾಮಾಜಿಕ ಅಂತರ ಕಾಯ್ದೆಕೊಂಡು ದರ್ಶನ ವ್ಯವಸ್ಥೆ ಮಾಡುವುದು ಕಷ್ಟಕರವಾಗಿದೆ ಎಂದರು.

ಶುಕ್ರವಾರ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆ..!..

ಆದ್ದರಿಂದ ಭಕ್ತರು ಬಾರದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ದರಿಂದ ಆ.15 ರ ಶನಿವಾರ ಆ.16 ರ ಭಾನುವಾರದಂದು ಸಹ ದೇವಾಲಯಗಳಲ್ಲಿ ಭಕ್ತರು ಮೇಲುಕೋಟೆಗೆ ಬಾರದಂತೆ ತಹಸೀಲ್ದಾರ್‌ ಪ್ರಮೋದ್‌ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!