ಚನ್ನಪಟ್ಟಣ : ಇಲ್ಲಿಲ್ಲ ಮಹಾಮಾರಿ ಕೊರೋನಾ ಭಯ

By Kannadaprabha News  |  First Published Mar 12, 2020, 12:49 PM IST

ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಕೊರೋನಾ ಭಯವಿಲ್ಲ. ಜನರು ಭಯಪಡುವ ಅಗತ್ಯವೂ ಇಲ್ಲ ಎಂದು ಇಲ್ಲಿನ ಜಿಲ್ಲಾಧಿಕಾರಿ ಅರ್ಚನಾ ಸ್ಪಷ್ಟಪಡಿಸಿದ್ದಾರೆ. 


ಚನ್ನಪಟ್ಟಣ[ಮಾ.12]: ಜಿಲ್ಲೆಯಲ್ಲಿ ಯಾವುದೇ ಕೊರೋನಾ ವೈರಸ್  ಪ್ರಕರಣ ಪತ್ತೆಯಾಗಿಲ್ಲ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನ ಸ್ಪಷ್ಟಪಡಿಸಿದರು.

ಇಗ್ಗಲೂರು ಗ್ರಾಮ ಪಂಚಾಯ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಔಷಧಿ ಮಾರಾಟ ಮಳಿಗೆಗಳಲ್ಲಿ ಮಾಸ್ಕ್ ದೊರಕುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಕೇಳಿದಾಗ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು.

Tap to resize

Latest Videos

ಕೊರೋನಾ ವೈರಸ್ ಸೋಂಕಿತರು ಅಥವಾ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರು ಇನ್ನೊಬ್ಬರಿಗೆ ಹರಡದಂತೆ ಮಾಸ್ಕ್ ಧರಿಸದರೆ ಸಾಕು. ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ, ಆರೋಗ್ಯ ಇಲಾಖೆ ತಿಳಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದರು. 

ಕೊರೋನಾ ವೈರಸ್: ಫೇಸ್ ಮಾಸ್ಕ್‌ನಿಂದ ರಕ್ಷಣೆ ಅಸಾಧ್ಯವೇ?.

ಜಿಲ್ಲಾಸ್ಪತ್ರೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ ಹಾಗೂ ಅಗತ್ಯ ಔಷಧ ಹಾಗೂ ಮಾಸ್ಕ್ ಗಳ ದಾಸ್ತಾನುಗಳಿವೆ ಎಂದು ತಿಳಿಸಿದರು.

click me!