ಶಿವಮೊಗ್ಗದ ಈ ಕಚೇರಿಗೆ ಕೊರೋನಾ ಕಾಲಿಡಲ್ಲ/ ಶಿವಮೊಗ್ಗ ವಿನೋಬನಗರದಲ್ಲಿನ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಯಾವುದಕ್ಕೂ ಸಂಬಂಧವೇ ಇಲ್ಲ/ ಜನನಂಗುಳಿಗೆ ಬ್ರೇಕ್ ಹಾಕುವವರು ಯಾರೂ ಇಲ್ಲ/
ಶಿವಮೊಗ್ಗ(ಏ. 29) ಎಲ್ಲ ಕಡೆ ಕೊರೋನಾ ನಿಯಂತ್ರಣಕ್ಕೆ ಇನ್ನಿಲ್ಲದಂತೆ ಕ್ರಮ ಕೈಗೊಳ್ಳುತ್ತಿದ್ದರೆ ಶಿವಮೊಗ್ಗದಲ್ಲಿ ಮಾತ್ರ ಪರಿಸ್ಥಿತಿ ಹೇಗೆ ಇದೆಯೋ ಹಾಗೆ ಇದೆ. ಶಿವಮೊಗ್ಗ ವಿನೋಬನಗರದಲ್ಲಿನ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಇದಕ್ಕೂ, ಹೊರಗಿನ ವ್ಯವಸ್ಥೆೆಗೂ ಸಂಬಂಧವೇ ಇಲ್ಲ ಎಂಬ ವಾತಾವರಣ ಇತ್ತು.
ಎಲ್ಲ ಕಡೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಇತ್ಯಾಾದಿಗಳ ಬಗ್ಗೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದು ಕಡ ಜನ ಸೇರದಂತೆ ಎಚ್ಚರ ವಹಿಸಲಾಗುತ್ತಿದೆ. ಕಚೇರಿಗಳಲ್ಲಿ ಕೂಡ ಶೇ. 50 ರ ಸಿಬ್ಬಂದಿಗೆ ಅನುವು ಮಾಡಿಕೊಡಲಾಗುತ್ತಿದೆ. ಆದರೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ಇವು ಯಾವುದೂ ಇಲ್ಲ. ಈ ಹಿಂದೆ ಇರುತ್ತಿದ್ದಂತೆ ಜನ ಜಂಗುಳಿ ಹಾಗೆ ಇದೆ. ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ಇರುವುದು ಆಡಳಿತದಕ್ಕೆ ಹಿಡಿದ ಕನ್ನಡಿ.
ರಾಜ್ಯಗಳಿಗೆ ಶುಭ ಸುದ್ದಿ; ಕಡಿಮೆ ದರದಲ್ಲಿ ಲಸಿಕೆ
ನೋಂದಣಿ ಸಮಯದಲ್ಲಿ ಫೋಟೋ ತೆಗೆಯಲು ಮಾಸ್ಕ್ ತೆಗೆಯುವುದು ಅನಿವಾರ್ಯ. ಇದೇ ರೀತಿ ಹೆಬ್ಬೆಟ್ಟು ಗುರುತು ನೀಡುವುದು ಕೂಡ ಅನಿವಾರ್ಯ. ಒಬ್ಬರು ಬೆರಳಿಟ್ಟ ಜಾಗದಲ್ಲಿ ಐದು ನಿಮಿಷದ ಅವಧಿಯಲ್ಲಿ ಇನ್ನೊಬ್ಬರು ಬೆರಳಿಡಬೇಕು. ಈ ಕಚೇರಿಗೆ ಹೋದರೆ ಇಲ್ಲಿ ಕೊರೋನಾ ಇದೆ ಎಂದು ಯಾರಿಗೂ ಅನಿಸುವುದಿಲ್ಲ.
ಅಲ್ಲಿದ್ದವರನ್ನು ಮಾತನಾಡಿಸಿದರೆ ಏನು ಮಾಡಲು ಸಾಧ್ಯ? ನೋಂದಣಿಗೆ ಟೋಕನ್ ನೀಡಿದ್ದಾರೆ. ಬರದಿದ್ದರೆ ಮತ್ತೆ ಸಿಗುವುದಿಲ್ಲ. 14 ದಿನ ಈ ಕಚೇರಿಯನ್ನೂ ಬಂದ್ ಮಾಡಿದರೆ ಸಮಸ್ಯೆ ಇರುವುದಿಲ್ಲ. ತೆರೆದು ಬರಬೇಡಿ ಎಂದರೆ ಹೇಗೆ ಎನ್ನುತ್ತಾಾರೆ.
ನೋಂದಣಾಧಿಕಾರಿಗಳ ಪ್ರಕಾರ ಫೋಟೋ ತೆಗೆಯುವಾಗ ಮಾಸ್ಕ್ ತೆಗೆಯುವುದು ಅನಿವಾರ್ಯ. ಇದೇ ರೀತಿ ಹೆಬ್ಬೆಟ್ಟು ನೀಡುವುದು ಸಹ. ಆದರೆ ಉಳಿದಂತೆ ಎಲ್ಲ ರೀತಿಯ ಎಚ್ಚರಿಕೆಯನ್ನು ಕೂಡ ಕೈಗೊಂಡಿದ್ದೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಶಿವಮೊಗ್ಗದ ಈ ಕಚೇರಿಗೆ ಕೊರೋನಾ ಮಾತ್ರ ಕಾಲಿಡುವುದಿಲ್ಲ!