ಜಿಲ್ಲಾ ಕೇಂದ್ರದಲ್ಲಿ ನಗರದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೋಲಾರಮ್ಮ ಕೆರೆ ತನ್ನ ನೈಜರೂಪ ಕಳೆದುಕೊಂಡು ಜೊಂಡು ಸೂಪ್ಪಿನ ತೋಟವಾಗಿ ಪರಿವರ್ತನೆಯಾಗಿದೆ. ಇದರ ಜೂತೆಗೆ ಕೆಸಿ ವ್ಯಾಲಿ ನೀರನ್ನು ಕೆರೆಗೆ ತುಂಬಿಸಲಾಗಿದೆ.
ಸ್ಕಂದಕುಮಾರ್ ಬಿ.ಎಸ್
ಕೋಲಾರ (ನ.04): ಜಿಲ್ಲಾ ಕೇಂದ್ರದಲ್ಲಿ ನಗರದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೋಲಾರಮ್ಮ ಕೆರೆ ತನ್ನ ನೈಜರೂಪ ಕಳೆದುಕೊಂಡು ಜೊಂಡು ಸೂಪ್ಪಿನ ತೋಟವಾಗಿ ಪರಿವರ್ತನೆಯಾಗಿದೆ. ಇದರ ಜೂತೆಗೆ ಕೆಸಿ ವ್ಯಾಲಿ ನೀರನ್ನು ಕೆರೆಗೆ ತುಂಬಿಸಲಾಗಿದೆ.
ಮಿದುಳು ರೋಗವು ಗಳಿಂದ (mosquito ) ಹರಡುವುದರಿಂದ ನಗರವನ್ನು ಸೊಳ್ಳೆಗಳಿಂದ ಮುಕ್ತಗೊಳಿಸಬೇಕಾಗಿದೆ. ಆದರೆ ಕೋಲಾರಮ್ಮ ಕೆರೆಯು ಕೊಳಚೆಯ ತಾಣವಾಗಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಯಾಗಿದೆ.
ಕುಡಿಯಲು ಬೋರ್‌ವೆಲ್ ನೀರು ಪೂರೈಕೆ
ಜಿಲ್ಲಾಡಳಿತವು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿಯನ್ನು (Lake) ಸ್ವಚ್ಛಗೊಳಿಸುತ್ತಿದ್ದರೂ ಸಹ ಜೊಂಡು ಕೆರೆಯ ತುಂಬ ಆವರಿಸಿದೆ. ಈ ಗಿಡಗಳು ಕೊಳೆತು ಕೊಳಚೆ ನೀರುನ್ನು ಮತ್ತಷ್ಟುಮಾಲಿನ್ಯ ಮಾಡಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಇದರ ಜೊತೆಗೆ ನಗರದಲ್ಲಿನ ಯುಜಿಡಿಗಳ ಕಲ್ಮಶ ನೀರು ಚಿನ್ನಾಪುರ ಕೆರೆಗೆ ಹರಿಯುವ ಬದಲು ಕೋಲಾರಮ್ಮ ಕೆರೆಗೆ ಹರಿಯುತ್ತಿದೆ. ನಗರದ ಕೋಲಾರಮ್ಮ ಕೆರೆಯ ಸುತ್ತಮುತ್ತಲಿನ ವಾರ್ಡುಗಳಿಗೆ ಕೆರೆಯಲ್ಲಿ ಅಳವಡಿಸಿ ಬೋರ್‌ವೆಲ್‌ಗಳಿಂದಲೇ ನಗರಸಭೆ ನೀರು ಪೂರೈಕೆ ಮಾಡುತ್ತಿದೆ. ಕೆರೆಯ ಮಾಲಿನ್ಯ ನೀರೇ ಬೋರ್‌ವೆಲ್‌ಗಳಲ್ಲಿನ ಅಂತರ್ಜಲ ಅಭಿವೃದ್ಧಿ ಹೊಂದಿದ್ದು ಅದೇ ನೀರನ್ನು ಪೂರೈಕೆ ಮಾಡಲಾಗುತ್ತಿರುವುದಾಗಿದೆ.
ಈ ನೀರು ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಆರೋಗ್ಯ ಇಲಾಖೆ ದೃಢಪಡಿಸಬೇಕಿದೆ. ಇಲ್ಲವಾದರಲ್ಲಿ ಮುಂದೆ ನಗರದಲ್ಲಿ ಉಂಟಾಗುವಂತ ಕಾಯಿಲೆಗಳಿಗೆ ನಗರಸಭೆ ಮತ್ತು ಆರೋಗ್ಯ ಇಲಾಖೆಗಳೇ ಹೊಣೆಯಾಗಬೇಕಾಗುತ್ತದೆ.
ಕೇಂದ್ರ ಸರ್ಕಾರದ ಅಮೃತ ಸರೋವರ್ ಯೋಜನೆಯಡಿ ಜಿಲ್ಲೆಯ 75 ಕೆರೆಗಳನ್ನು ಅಭಿವೃದ್ದಿ ಪಡಿಸುವುದಾಗಿದೆ. ಜಿಲ್ಲೆಯಲ್ಲಿ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಹಲವು ಕೆರೆಗಳನ್ನು ವೀಕ್ಷಿಸಿದಾಗ ನಿಯಮಾನುಸಾರ ಕಾಮಗಾರಿ ಮಾಡದೆ ಇರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಕಾಮಗಾರಿಗಳಲ್ಲಿ ಯಾವುದೇ ಚುರುಕು ಮುಟ್ಟುತ್ತಿಲ್ಲ.
ಕೋಲಾರಮ್ಮ ಕೆರೆಯನ್ನು ಜೊಂಡು ಗಿಡಗಳ ಸಮೃದ್ಧವಾದ ತೋಟವಾಗಿದೆ. ಜೊಂಡು ಅಧಿಕ ಪ್ರಮಾಣದಲ್ಲಿ ನೀರನ್ನು ಹಿರಿಕೊಳ್ಳುತ್ತವೆ. ಇದರಿಂದಾಗಿ ಕೆರೆಯಲ್ಲಿನ ನೀರು ಬೇಸಿಗೆ ವೇಳೆಗೆ ಖಾಲಿಯಾಗಲಿದ್ದು ಜನತೆ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಜೊಂಡು ಗಿಡಗಳನ್ನು ಸ್ವಚ್ಚ ಮಾಡಲು ಸಂಸದರು ಪ್ರಾರಂಭದಲ್ಲಿ ಸುಮಾರು 85 ಲಕ್ಷಕ್ಕೂ ಹೆಚ್ಚು ಹಣ ವೆಚ್ಚ ಮಾಡಿ ಕೆರೆಯಲ್ಲಿದ್ದ ಗಿಡಗಂಟಿಗಳನ್ನು ಸ್ವಚ್ಛ ಮಾಡಿಸಿದ್ದರು. ಇದಕ್ಕೆ ಹಲವಾರು ಸಂಘ, ಸಂಸ್ಥೆಗಳ ಸಂಘಟನೆಗಳು ಕೈಜೋಡಿಸಿದ್ದವು. ಸರ್ಕಾರದಿಂದಲೂ ಜೆ.ಸಿ.ಬಿಗಳಿಂದ ಕೆರೆಯಲ್ಲಿದ್ದ ಜೊಂಡು ಗಿಡಗಳನ್ನು ತೆಗೆಸುವ ಕೆಲಸವು ನಿರಂತರವಾಗಿ ನಡೆಯಿತು. ಆದರೂ ಜೊಂಡು ಗಿಡಗಳನ್ನು ಸಂಪೂರ್ಣ ಸ್ವಚ್ಛ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಜೊಂಡು ಮತ್ತೆ ಕೆರೆಯನ್ನು ಆವರಿಸಿದೆ.
ಕಳೆದ ಹಲವು ತಿಂಗಳಿಂದ ಕೆರೆಯ ಕಟ್ಟೆಯನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿಪಡಿಸಲಾಗಿದೆ. ಇದಕ್ಕೆ ಮುಳಬಾಗಿಲು ರಸ್ತೆ ಕಡೆ ಫೆನ್ಸಿಂಗ್ ಅಳವಡಿಸಿದೆ. ಆದರೆ ಕೆರೆಯ ಸುತ್ತಲು ಸರ್ವೆ ಮಾಡಿ ಫೆನ್ಸಿಂಗ್ ಅಳವಡಿಸುವ ಕಾರ್ಯ ಸಂಪೂರ್ಣವಾಗಿ ಇನ್ನು ಆಗದೆ ಇರುವುದರಿಂದು ಒತ್ತುವರಿ ಈಗಲೂ ಮುಂದುವರಿದಿದೆ.
ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಇನ್ನಾದರೂ ನಗರದ ಸುತ್ತ ಇರುವ ಕೆರೆಗಳ ಅಭಿವೃದ್ಧಿ ಕಡೆ ಗಮನಹರಿಸಲಿ ಎಂಬುವುದು ಸಾರ್ವಜನಿಕರ ಮನವಿಯಾಗಿದೆ.
ಜಿಲ್ಲಾ ಕೇಂದ್ರದಲ್ಲಿ ನಗರದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೋಲಾರಮ್ಮ ಕೆರೆ ತನ್ನ ನೈಜರೂಪ ಕಳೆದುಕೊಂಡು ಜೊಂಡು ಸೂಪ್ಪಿನ ತೋಟವಾಗಿ ಪರಿವರ್ತನೆ
ಮಿದುಳು ರೋಗವು ಸೊಳ್ಳೆಗಳಿಂದ ಹರಡುವುದರಿಂದ ನಗರವನ್ನು ಸೊಳ್ಳೆಗಳಿಂದ ಮುಕ್ತಗೊಳಿಸಬೇಕಾಗಿದೆ. ಆದರೆ ಕೋಲಾರಮ್ಮ ಕೆರೆಯು ಕೊಳಚೆಯ ತಾಣ
ಜಿಲ್ಲಾಡಳಿತವು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುತ್ತಿದ್ದರೂ ಸಹ ಜೊಂಡು ಕೆರೆಯ ತುಂಬ ಆವರಿಸಿದೆ