ಮೈಸೂರು: ಬಸ್‌ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ

By Kannadaprabha News  |  First Published Jul 25, 2019, 3:40 PM IST

ಮೈಸೂರಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೂಕ್ತ ಬಸ್ ಸೌಕರ್ಯವಿಲ್ಲದೆ ಪರದಾಡುವಂತಹ ಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳೂ ಸೇರಿ ನೂರಾರು ಮಂದಿ ಈ ಭಾಗದಲ್ಲಿ ದಿನ ನಿತ್ಯ ಓಡಾಡುತ್ತಿದ್ದು, ಬಸ್ ಇಲ್ಲದೆ ಪರದಾಡುವಂತಾಗಿದೆ.


ಮೈಸೂರು(ಜು.25): ಶಾಲಾ ಕಾಲೇಜು ವಿದ್ಯಾರ್ಥಿಗಳು ಸೂಕ್ತ ಬಸ್ ಸೌಕರ್ಯವಿಲ್ಲದೆ ಪರದಾಡುವಂತಹ ಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳೂ ಸೇರಿ ನೂರಾರು ಮಂದಿ ಈ ಭಾಗದಲ್ಲಿ ದಿನ ನಿತ್ಯ ಓಡಾಡುತ್ತಿದ್ದು, ಬಸ್ ಇಲ್ಲದೆ ಪರದಾಡುವಂತಾಗಿದೆ.

ಎಚ್‌.ಡಿ. ಕೋಟೆ ತಾಲೂಕಿನ ಪ್ರಮುಖ ಕೇಂದ್ರ ಸ್ಥಳಗಳಲ್ಲಿ ಒಂದಾದ ಹ್ಯಾಂಡ್‌ ಪೋಸ್ಟ್‌ನಲ್ಲಿ ಬೆಳಗ್ಗೆ 8ರಿಂದ 9ರವರೆಗೆ ತಾಲೂಕು ಕೇಂದ್ರ ಸ್ಥಾನಕ್ಕೆ ಬಸ್‌ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.

Tap to resize

Latest Videos

ದಾವಣಗೆರೆ: ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ತಾಲೂಕಿನ ಇತರ ಹಳ್ಳಿಗಳಾದ ಅಂತರಸಂತೆ, ಸೀರನಹುಂಡಿ, ಆನಗಟ್ಟಿ, ಯಲಮತ್ತೂರು, ಲಕ್ಷ್ಮೇಪುರ, ಜಕ್ಕಹಳ್ಳಿ, ಹೈರಿಗೆ, ಯರಹಳ್ಳಿ ಮುಂತಾದ ಊರುಗಳಿಂದ ಕೋಟೆಗೆ ಕಾಲೇಜಿಗೆಂದು ಬರುವ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬೆಳಗಿನ ಅವಧಿಯಲ್ಲಿ ಸೂಕ್ತ ಬಸ್‌ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಸಾರಿಗೆ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇದರ ಬಗ್ಗೆ ಗಮನ ಹರಿಸಿ ಬಸ್‌ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!