ರೆಸಾರ್ಟ್‌, ಹೋಂಸ್ಟೇಗಳು ತೆರೆದರೂ ಬುಕ್ಕಿಂಗ್‌ ಇಲ್ಲ!

By Kannadaprabha News  |  First Published Jun 9, 2020, 10:14 AM IST

ಕೊರೋನಾ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಬಳಿಕ ಜಿಲ್ಲೆಯ ರೆಸಾರ್ಟ್‌, ಹೋಂಸ್ಟೇಗಳಿಗೆ ಅವಕಾಶ ನೀಡಲಾಗಿದ್ದರೂ ಕೂಡ ಸೋಮವಾರ ಯಾವುದೇ ಬುಕ್ಕಿಂಗ್‌ ಕಂಡುಬಂದಿಲ್ಲ.


ಮಡಿಕೇರಿ(ಜೂ.09): ಕೊರೋನಾ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಬಳಿಕ ಜಿಲ್ಲೆಯ ರೆಸಾರ್ಟ್‌, ಹೋಂಸ್ಟೇಗಳಿಗೆ ಅವಕಾಶ ನೀಡಲಾಗಿದ್ದರೂ ಕೂಡ ಸೋಮವಾರ ಯಾವುದೇ ಬುಕ್ಕಿಂಗ್‌ ಕಂಡುಬಂದಿಲ್ಲ.

ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿದ್ದು ಹೋಂಸ್ಟೇ, ರೆಸಾರ್ಟ್‌, ರೆಸ್ಟೋರೆಂಟ್‌ ಸೇರಿದಂತೆ ಆತಿಥ್ಯ ಕೇಂದ್ರಗಳು ಅವಕಾಶ ನೀಡಿದೆ. ಆದರೆ ಸೋಮವಾರದಿಂದ ರೆಸ್ಟೋರೆಂಟ್‌ಗಳಿಗೆ ಶೇ.30ರಷ್ಟುಸ್ಪಂದನೆ ಹೊರತುಪಡಿಸಿದರೆ ವಿವಿಧ ಆತಿಥ್ಯ ಕೇಂದ್ರಗಳು ಅತಿಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಆತಿಥ್ಯ ಕೇಂದ್ರಗಳು ಸರ್ಕಾರ 33 ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ.

Latest Videos

undefined

ಮಾಲ್, ದೇವಸ್ಥಾನಗಳು ಓಪನ್: ಮಂಗಳೂರಲ್ಲಿ ಹೀಗಿತ್ತು ಮೊದಲ ದಿನ

ಬುಕ್ಕಿಂಗ್‌ ಇಲ್ಲ: ಕೊಡಗಿನಲ್ಲಿ ಹೋಂಸ್ಟೇಗಳು ಆರಂಭವಾಗಿದೆ. ಆದರೆ ಜಿಲ್ಲೆಯಾದ್ಯಂತ ಇರುವ ಹೋಂಸ್ಟೇಗಳಿಗೆ ಯಾವುದೇ ಬುಕ್ಕಿಂಗ್‌ ಬಂದಿಲ್ಲ. ಪ್ರವಾಸಿ ತಾಣಗಳು ತೆರೆಯಲಾಗಿಲ್ಲ. ಆದ್ದರಿಂದ ಪ್ರವಾಸಿಗರು ಬರುವುದು ಕಷ್ಟ. ಆದ್ದರಿಂದ ಹೋಂ ಸ್ಟೇಗಳಿಗೆ ಮತ್ತೆ ನಷ್ಟದ ಭೀತಿ ಎದುರಾಗಿದೆ. ಯಾರೂ ಕೂಡ ಕಡ್ಡಾಯವಾಗಿ ಹೋಂ ಸ್ಟೇಗಳನ್ನು ತೆರೆಯುವಂತೆ ಒತ್ತಾಯ ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ತಮ್ಮ ಹೋಂಸ್ಟೇಗಳಲ್ಲಿ ಅತಿಥಿಗಳಿಗೆ ವಾಸ್ತವ್ಯ ಕಲ್ಪಿಸುವುದು ತಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್‌ನ ಅಧ್ಯಕ್ಷರು ಸೂಚಿಸಿದ್ದಾರೆ.

ಕಾಫಿನಾಡು ದೇಗುಲಗಳಲ್ಲಿ ದೇವರ ದರ್ಶನ; ಭಕ್ತರ ಸಂಖ್ಯೆ ವಿರಳ

ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ತೆರೆಯಲು ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರೆ ತಿಂಗಳಿನಿಂದ ಮಡಿಕೇರಿಯ ರಾಜಾಸೀಟು, ದುಬಾರೆ, ನಿಸರ್ಗಧಾಮ, ಟಿಬೆಟ್‌ ಕ್ಯಾಂಪ್‌, ಗದ್ದುಗೆ ಸೇರಿದಂತೆ ಹಲವು ಪ್ರವಾಸಿ ತಾಣಗಳು ಬಂದ್‌ ಆಗಿವೆ.

ಕೊಡಗಿನಲ್ಲಿ ಹೋಂಸ್ಟೇಗಳು ಆರಂಭವಾಗಿದೆ. ಆದರೆ ಜಿಲ್ಲೆಯಾದ್ಯಂತ ಇರುವ ಹೋಂಸ್ಟೇಗಳಿಗೆ ಯಾವುದೇ ಬುಕ್ಕಿಂಗ್‌ ಬಂದಿಲ್ಲ. ಪ್ರವಾಸಿ ತಾಣಗಳು ಜುಲೈ ಅಂತ್ಯದ ವರೆಗೆ ಬಂದ್‌ ಮುಂದುವರೆಯಲಿದೆ. ಆದ್ದರಿಂದ ಪ್ರವಾಸಿಗರು ಬರುವುದು ಕಷ್ಟ. ಯಾರೂ ಕೂಡ ಕಡ್ಡಾಯವಾಗಿ ಹೋಂ ಸ್ಟೇಗಳನ್ನು ತೆರೆಯುವಂತೆ ಒತ್ತಾಯ ಇಲ್ಲ. ಸರ್ಕಾರದ ಮಾರ್ಗ ಸೂಚಿಯಂತೆ ತಮ್ಮ ಹೋಂಸ್ಟೇಗಳಲ್ಲಿ ಅತಿಥಿಗಳಿಗೆ ವಾಸ್ತವ್ಯ ಕಲ್ಪಿಸುವುದು ತಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಸೂಚಿಸಿದ್ದೇನೆ ಎಂದು ಕೊಡಗು ಜಿಲ್ಲಾ ಹೋಂಸ್ಟೇ ಮಾಲೀಕರ ಸಂಘ ಅಧ್ಯಕ್ಷ ಅನಂತಶಯನ ತಿಳಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಭಕ್ತರ ಭೇಟಿ ವಿರಳ, ಹೀಗಿತ್ತು ಮೊದಲ ದಿನ

ಸೋಮವಾರ ಕೊಡಗಿನ ರೆಸ್ಟೋರೆಂಟ್‌ಗಳಿಗೆ ಶೇ. 30ರಷ್ಟುಮಾತ್ರ ಸ್ಪಂದನೆಯಿದೆ. ಆದರೆ ರೆಸಾರ್ಟ್‌, ಲಾಡ್ಜ್‌ಗಳಿಗೆ ಶೇ. 5ರಷ್ಟುಬುಕ್ಕಿಂಗ್‌ ಕೂಡ ಬಂದಿಲ್ಲ. ಜಿಲ್ಲೆಯಲ್ಲಿ ಆತಿಥ್ಯ ಕೇಂದ್ರಗಳು ಆರಂಭವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುವ ಕೆಲಸ ಮಾಡಲಾಗುತ್ತಿದೆ. ಆತಿಥ್ಯ ಕೇಂದ್ರಗಳಿಗೆ ತಂಗಲು ಆಗಮಿಸುವವರಿಗೆ ಸ್ವಯಂ ಘೋಷಿತ ಪತ್ರವನ್ನು ಮಾಲೀಕರೇ ಸಿದ್ಧಪಡಿಸಿದ್ದೇವೆ. ವಾಸ್ತವ್ಯಕ್ಕೆ ಬರುವವರು ಸಹಿ ಹಾಕಿ ಷರತ್ತಿಗೆ ಬದ್ಧರಾದರೆ ಮಾತ್ರ ತಂಗಲು ಅವಕಾಶ ನೀಡಲಾಗುವುದು ಎಂದು ರೆಸಾರ್ಟ್‌, ರೆಸ್ಟೋರೆಂಟ್‌ ಮಾಲೀಕರ ಸಂಘ ಕೊಡಗು ಅಧ್ಯಕ್ಷ ನಾಗೇಂದ್ರ ಪ್ರಸಾದ್‌ ಹೇಳಿದ್ದಾರೆ.

click me!