ಸಿಗದ ಬೆಡ್‌: ಮಕ್ಕಳ ಚಿಕಿತ್ಸೆಗಾಗಿ ಪಾಲ​ಕ​ರ ಪರದಾಟ..!

By Kannadaprabha NewsFirst Published Sep 15, 2021, 3:33 PM IST
Highlights

*  ವಿಮ್ಸ್‌​ನಲ್ಲಿ ಬೆಡ್‌ಸಮಸ್ಯೆಗೆ ಮುಕ್ತಿ ಸಿಕ್ಕೀತೇ?
*  ಮಕ್ಕಳ ವಿಭಾಗದಲ್ಲಿ ಪ್ರತಿವರ್ಷ ಎದುರಾಗುವ ಬೆಡ್‌ಗಳ ಕೊರತೆ
*  ಪ್ರತಿದಿನ ಆಸ್ಪ​ತ್ರೆಗೆ ದಾಖಲಾಗುತ್ತಿರುವ 30ರಿಂದ 40ಕ್ಕೂ ಅಧಿಕ ಮಕ್ಕಳು 
 

ಬಳ್ಳಾರಿ(ಸೆ.15):  ಇತ್ತೀಚಿನ ದಿನಗಳಲ್ಲಿ ಗಳ ಭೀತಿ ಜನಸಾಮಾನ್ಯರನ್ನು ಕಾಡುತ್ತಿದ್ದು, ಬಹುತೇಕರು ಮಕ್ಕಳ ಚಿಕಿತ್ಸೆಗಾಗಿ ವಿಮ್ಸ್‌ನ ಮಕ್ಕಳ ವಿಭಾಗವನ್ನೇ ಅವಲಂಭಿಸಿದ್ದಾರೆ. ಆದರೆ, ಬೆಡ್‌ಗಳ ಕೊರತೆ ಸಾಮಾನ್ಯ ಎನ್ನುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಮಾತ್ರ ದೊರಕದಂತಾಗಿದೆ.

ಕಳೆದ ಕೆಲ ದಿನಗಳಿಂದ ಸಾಂಕ್ರಾಮಿಕ ರೋಗಗಳು ಹರಡುವಿಕೆಯ ಆತಂಕ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಮಳೆಗಾಲದ ಆರಂಭವಾದಾಗ ಸೊಳ್ಳೆಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಇದರಿಂದ ಮಕ್ಕಳಲ್ಲಿ ನೆಗಡಿ ಕೆಮ್ಮು, ಜ್ವರ, ಶ್ವಾಸಕೋಶದ ಸೋಂಕು, ವೈರಲ್‌ಫೀವರ್‌, ಟೈಫಾಯ್ಡ್‌ನಂತಹ ನಾನಾ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಗಾಗಿ ಪಾಲ​ಕ​ರು ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಅಲೆದಾಡುತ್ತಿದ್ದಾರೆ.

ಮಹಾಮಾರಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಸಾಂಕ್ರಾಮಿಕ ರೋಗಗಳು ಹರಡುವಿಕೆ ಹೆಚ್ಚಾಗುತ್ತಿದ್ದು, ಚಿಕಿತ್ಸೆಗಾಗಿ ಜನಸಾಮಾನ್ಯರು ವಿಮ್ಸ್‌ಅನ್ನೇ ಅವಲಂಬಿಸಿದ್ದಾರೆ. ಸ್ಥಳೀಯರು ಮಾತ್ರವಲ್ಲದೇ ವಿಜಯನಗರ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಜಿಲ್ಲೆ ಸೇರಿ ನೆರೆಯ ಆಂಧ್ರದ ಜನತೆ ಸಹ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಾ​ರೆ.

ನರೇಗಾ ಅನುಷ್ಠಾನದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ: ಸಚಿವ ಈಶ್ವರಪ್ಪ

ವಿಮ್ಸ್‌ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಲಭ್ಯ​ವಿ​ರುವ ಬೆಡ್‌ಗಳ ಸಂಖ್ಯೆಗಿಂತ ಮೂರುಪಟ್ಟು ಹೆಚ್ಚು ಮಕ್ಕಳು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುತ್ತಿರುವುದರಿಂದ ವಿಮ್ಸ್‌ನ ನ್ಯೂ ಡೆಂಟಲ್‌ಕಾಲೇಜಿನಲ್ಲಿ ತಾತ್ಕಾಲಿಕವಾಗಿ 160 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಾರಿ ಈ ಸಮಸ್ಯೆ ಎದುರಾಗುತ್ತಿದೆಯಾದರೂ ಶಾಶ್ವತ ಪರಿಹಾರ ಮಾತ್ರ ಇಲ್ಲದಂತಾಗಿರುವುದು ಜನರಿಗೆ ಗೋಳಾಗಿ ಪರಿಣಮಿಸಿದೆ.

ಬೆಡ್‌ಗಳು:

ಪ್ರತಿದಿನ 30ರಿಂದ 40ಕ್ಕೂ ಅಧಿಕ ಮಕ್ಕಳು ಆಸ್ಪ​ತ್ರೆಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ವಿಮ್ಸ್‌ಆಸ್ಪ​ತ್ರೆಯ ಮಕ್ಕಳ ವಿಭಾ​ಗ​ದಲ್ಲಿ ಸುಮಾರು 120 ಬೆಡ್‌​ಗಳು ಭರ್ತಿ​ಯಾ​ಗಿರುವ ಹಿನ್ನೆ​ಲೆ​ಯಲ್ಲಿ ವಿಮ್ಸ್‌ನ ನ್ಯೂ ಡೆಂಟಲ್‌ ಕಾಲೇಜಿನಲ್ಲಿ 160 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ಹೊರತು ಪಡಿಸಿ ವಿಮ್ಸ್‌ನಲ್ಲಿ ಹೆರಿಗೆಯಾಗುವಂತ ಮಕ್ಕಳ ಚಿಕಿತ್ಸೆಗಾಗಿ 0-1ತಿಂಗಳ ವರೆಗಿನ ಮಕ್ಕಳಿಗಾಗಿ ಎನ್‌ಐಸಿಯುನಲ್ಲಿ 60 ಬೆಡ್‌ಗಳನ್ನು ಮಿಸಲಿರಿಸಿದೆ.

ಆಸ್ಪತ್ರೆಯಲ್ಲಿ ಪ್ರತಿ ದಿನ ಸುಮಾರು 25-30ಹೆರಿಗೆಗಳು ಆಗುತ್ತಿವೆ. ಇದರಲ್ಲಿ ಮಗುವಿನ ಕಡಿಮೆ ತೂಕ, ಅನಾರೋಗ್ಯ ಸೇರಿ ನಾನಾ ಕಾರಣಗಳಿಂದ ಎನ್‌ಐಸಿಯುನಲ್ಲಿ ನಾಲ್ಕೈದು ಮಕ್ಕಳು ದಾಖಲಾಗುತ್ತವೆ. ಇದರಿಂದ ಇಲ್ಲಿಯೂ ಬೆಡ್‌ಗಳ ಸಮಸ್ಯೆ ಎದುರಾಗುವಂತಾಗಿದೆ. ಪ್ರಸ್ತುತ ಈಗಿರುವ ಬೆಡ್‌ಗಳನ್ನು ಮತ್ತಷ್ಟು ಹೆಚ್ಚಳ ಮಾಡಿದ್ದಲ್ಲಿ ಅನುಕೂಲವಾಗಲಿದೆ.

ಪ್ರಸ್ತುತ ವಿಮ್ಸ್‌ನಲ್ಲಿ ಆರ್ಥೋ, ನ್ಯೂರೋಸರ್ಜರಿ, ಪ್ಲಾಸ್ಟಿಕ್‌ ಸರ್ಜರಿ ಡಿಪಾರ್ಟ್‌ಮೆಂಟ್‌ಗಳನ್ನು ಟಿಬಿ ಸ್ಯಾನಿಟೋರಿಯಂ ಬಳಿಯಿರುವ ಟ್ರಾಮಾಕೇರ್‌ ಸೆಂಟರ್‌ಗೆ ವರ್ಗಾಯಿಸಿದಲ್ಲಿ ಮತ್ತಷ್ಟು ಬೆಡ್‌ಗಳು ದೊರೆಯಲಿದೆ. ಪ್ರಸ್ತುತ ವಿಮ್ಸ್‌ನ ನ್ಯೂ ಡೆಂಟಲ್‌ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿರುವ 160 ಬೆಡ್‌ಗಳ ಜೊತೆ ಅವಶ್ಯಕತೆಗನುಗುಣವಾಗಿ ಇನ್ನು 100 ಬೆಡ್‌ಗಳ ವ್ಯವಸ್ಥೆ ಯನ್ನು ಮಾಡಲಾಗುವುದು ಹಾಗೂ ಮಕ್ಕಳ ವಿಭಾಗದಲ್ಲಿ ಪ್ರತಿವರ್ಷ ಎದುರಾಗುವ ಬೆಡ್‌ಗಳ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗು​ವು​ದು ಎಂದು ವಿಮ್ಸ್‌ನಿರ್ದೇಶಕ ಡಾ. ಗಂಗಾಧರ ಗೌಡ ತಿಳಿಸಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವುದರಿಂದ ಚಿಕಿತ್ಸೆಗಾಗಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ. ವಿಮ್ಸ್‌ನ ನ್ಯೂ ಡೆಂಟಲ್‌ಕಾಲೇಜಿನಲ್ಲಿ ಈಗಾಗಲೇ 160 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಅವಶ್ಯಕತೆಗನುಗುಣವಾಗಿ ಇನ್ನು 100 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಬಳ್ಳಾರಿಯ ವಿಮ್ಸ್‌ನಿರ್ದೇಶಕ  ಡಾ. ಗಂಗಾಧರ ಗೌಡ ತಿಳಿಸಿದ್ದಾರೆ. 
 

click me!