ರಾಮನ​ಗರ-ಚನ್ನಪ​ಟ್ಟಣ ಕ್ಷೇತ್ರ​ ಜವಾ​ಬ್ದಾರಿ ನಿಖಿಲ್‌ಗೆ!

By Kannadaprabha News  |  First Published Nov 11, 2022, 6:19 AM IST

ವಿಧಾ​ನ​ಸಭಾ ಚುನಾ​ವ​ಣೆಗೆ ಆರು ತಿಂಗಳು ಬಾಕಿ ಇರು​ವಾ​ಗಲೇ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಪಕ್ಷಕ್ಕೆ ಶಕ್ತಿ ತುಂಬಲು ರಾಮ​ನ​ಗರ ಹಾಗೂ ಚನ್ನ​ಪ​ಟ್ಟಣ ಕ್ಷೇತ್ರ​ಗ​ಳ ಪ್ರವಾ​ಸದಲ್ಲಿ ಸಕ್ರಿ​ಯ​ರಾ​ಗಿದ್ದಾರೆ. ಇದು ರಂಗ ಪ್ರವೇ​ಶದ ತಯಾರಿ ಎಂಬ ಚರ್ಚೆ​ಗಳು ರಾಜ​ಕೀಯ ವಲ​ಯ​ದಲ್ಲಿ ನಡೆ​ದಿವೆ.


ಎಂ.ಅ​ಫ್ರೋಜ್ ಖಾನ್‌

  ರಾಮ​ನ​ಗರ (ನ.11):  ವಿಧಾ​ನ​ಸಭಾ ಚುನಾ​ವ​ಣೆಗೆ ಆರು ತಿಂಗಳು ಬಾಕಿ ಇರು​ವಾ​ಗಲೇ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಪಕ್ಷಕ್ಕೆ ಶಕ್ತಿ ತುಂಬಲು ರಾಮ​ನ​ಗರ ಹಾಗೂ ಚನ್ನ​ಪ​ಟ್ಟಣ ಕ್ಷೇತ್ರ​ಗ​ಳ ಪ್ರವಾ​ಸದಲ್ಲಿ ಸಕ್ರಿ​ಯ​ರಾ​ಗಿದ್ದಾರೆ. ಇದು ರಂಗ ಪ್ರವೇ​ಶದ ತಯಾರಿ ಎಂಬ ಚರ್ಚೆ​ಗಳು ರಾಜ​ಕೀಯ ವಲ​ಯ​ದಲ್ಲಿ ನಡೆ​ದಿವೆ.

Tap to resize

Latest Videos

ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ (HD Kumaraswamy) ​ ಪಂಚ​ರತ್ನ ರಥ​ಯಾ​ತ್ರೆ​ ಹಿನ್ನೆ​ಲೆ​ಯಲ್ಲಿ ರಾಜ್ಯಾ​ದ್ಯಂತ ಪ್ರವಾಸ ಹೊರ​ಡಲು ಅಣಿ​ಯಾ​ಗು​ತ್ತಿ​ದ್ದಾರೆ. ಅವರ ಅನು​ಪ​ಸ್ಥಿತಿ ಕೊರಗು ನೀಗಿ​ಸುವ ಉದ್ದೇ​ಶ​ದಿಂದ ನಿಖಿಲ್‌ ಕುಮಾ​ರ​ಸ್ವಾಮಿ (Nikhil Kumaraswamy)  ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ಗ​ಳಲ್ಲಿ ಪಕ್ಷ ಸಂಘ​ಟ​ನೆಯ ಜವಾ​ಬ್ದಾರಿ ಹೊತ್ತಿ​ದ್ದಾರೆ.

ವಾರ​ದಲ್ಲಿ ನಾಲ್ಕೈದು ದಿನ ಉಭಯ ಕ್ಷೇತ್ರ​ಗ​ಳಿಗೆ ಭೇಟಿ ನೀಡು​ತ್ತಿ​ರುವ ನಿಖಿಲ್‌ ಕಾರ್ಯ​ಕ​ರ್ತರ ಸಭೆ ನಡೆಸಿ ಪಕ್ಷ ಸಂಘ​ಟ​ನೆ ಜತೆ ಜತೆಗೆ ಕ್ಷೇತ್ರದ ಜನರ ಕುಂದು ಕೊರ​ತೆ​ಗ​ಳನ್ನು ಆಲಿ​ಸು​ತ್ತಿ​ದ್ದಾರೆ. ಹಳ್ಳಿ​ಗ​ಳಲ್ಲಿ ಮೂಲ​ಸೌ​ಲಭ್ಯ ಕೊರತೆ ಸಂಬಂಧ ಶಾಸ​ಕದ್ವಯರ ಗಮ​ನಕ್ಕೆ ತಂದು ಕೆಲಸ ಮಾಡಿ​ಕೊ​ಡುತ್ತಿದ್ದಾರೆ.

ಕೆಲ ದಿನ​ಗಳ ಹಿಂದಷ್ಟೇ ಕುಮಾ​ರ​ಸ್ವಾ​ಮಿ​ ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ರಾಮ​ನ​ಗರ ಕ್ಷೇತ್ರ​ದಿಂದ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಸ್ಪರ್ಧಿ​ಸು​ವು​ದಿ​ಲ್ಲ​ ಹಾಗೂ ಜೆಡಿ​ಎಸ್‌ 126 ಅಭ್ಯ​ರ್ಥಿ​ಗಳ ಪಟ್ಟಿ​ಯಲ್ಲಿ ನಿಖಿಲ್‌ ಹೆಸರೂ ಇರ​ಬ​ಹು​ದೆಂದು ಸುಳಿವು ನೀಡಿ​ದ್ದ​ರು. ಇದಾದ ಬಳಿಕ ನಿಖಿಲ್‌ ಎರಡು ಕ್ಷೇತ್ರ​ಗ​ಳಿಗೆ ಹೆಚ್ಚಿನ ಸಮಯ ಮೀಸ​ಲಿ​ಡು​ತ್ತಿ​ದ್ದಾರೆ.

ಆಕಾಂಕ್ಷಿತ ಅಭ್ಯ​ರ್ಥಿ​ಗಳು ಅಲರ್ಚ್‌:

ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ಗ​ಳಲ್ಲಿ ಪಕ್ಷ​ವನ್ನು ಬೇರು ಮಟ್ಟ​ದಿಂದ ಗಟ್ಟಿ​ಗೊ​ಳಿ​ಸಲು ಮುಂದಾ​ಗಿ​ರುವ ನಿಖಿಲ್‌ ಕುಮಾ​ರ​ಸ್ವಾಮಿ ಮನೆ ಸೇರಿ​ರುವ ಮುಖಂಡರ ಮನ​ವೊ​ಲಿ​ಸು​ತ್ತಿ​ದ್ದಾರೆ. ಇದು ಜೆಡಿ​ಎಸ್‌ ಪಾಳಯದಲ್ಲಿ ಕೊಂಚ ಸಮಾ​ಧಾನ ಮೂಡಿ​ಸಿದೆ. ಇದನ್ನು ಕಂಡು ಕಾಂಗ್ರೆಸ್‌ ಮತ್ತು ಬಿಜೆಪಿ ಆಕಾಂಕ್ಷಿತ ಅಭ್ಯ​ರ್ಥಿ​ಗಳು ಫುಲ್‌ ಅಲರ್ಚ್‌ ಆಗಿ​ದ್ದಾರೆ.

ರಾಮ​ನ​ಗರದಲ್ಲಿ ಕಾಂಗ್ರೆಸ್‌ ಆಕಾಂಕ್ಷಿತ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌, ಬಿಜೆಪಿ ಆಕಾಂಕ್ಷಿ​ತ ಅಭ್ಯರ್ಥಿಗಳಾ​ದ ಗೌತಮ್‌ಗೌಡ, ಡಿ.ನ​ರೇಂದ್ರ ಹಾಗೂ ಚನ್ನ​ಪ​ಟ್ಟ​ಣ​ದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.​ಯೋ​ಗೇ​ಶ್ವರ್‌, ಕಾಂಗ್ರೆಸ್‌ ಆಕಾಂಕ್ಷಿತ ಅಭ್ಯರ್ಥಿ ಪ್ರಸನ್ನ ಪಿ.ಗೌ​ಡ​ರು ಪಕ್ಷ ಸಂಘ​ಟ​ನೆ​ಯಲ್ಲಿ ಹಿಂದೆ ಬಿದ್ದಿಲ್ಲ. ಪಕ್ಷದ ಮುಖಂಡರು, ಕಾರ್ಯ​ಕ​ರ್ತ​ರನ್ನು ವಿಶ್ವಾ​ಸಕ್ಕೆ ತೆಗೆ​ದು​ಕೊಳ್ಳುವ, ಸ್ವ ಪಕ್ಷೀಯ ಅಸ​ಮಾ​ಧಾನ ತಣಿ​ಸುವ, ಅತೃ​ಪ್ತರ ಮನ​ವೊ​ಲಿ​ಸು​ವು​ದರ ಜೊತೆಗೆ ಅನ್ಯ ಪಕ್ಷ​ಗಳ ಮುಖಂಡ​ರನ್ನು ಸೆಳೆ​ಯುವ ಪ್ರಯ​ತ್ನದಲ್ಲಿ​ದ್ದಾರೆ. ಅಲ್ಲದೆ, ಕ್ಷೇತ್ರ​ಗ​ಳಲ್ಲಿನ ಸಣ್ಣ​ಪುಟ್ಟಕಾರ್ಯ​ಕ್ರ​ಮ​ಗ​ಳನ್ನೂ ಬಿಡದೆ ಹಾಜರಿ ಹಾಕು​ತ್ತಿ​ದ್ದಾ​ರೆ.

ಎಚ್‌ಡಿಕೆ ಒಂದೇ ಕ್ಷೇತ್ರ​ದಿಂದ ಸ್ಪರ್ಧೆ:

ಕಳೆದ ವಿಧಾನಸಭಾ ಚುನಾವಣೆಯ ಸಮಯದ ಪರಿಸ್ಥಿತಿಯೇ ಬೇರೆ ಇತ್ತು. ಈಗಿನ ಪರಿಸ್ಥಿತಿಯೇ ಬೇರೆ ಇದೆ. ಇದನ್ನು ಅರಿ​ತಿ​ರುವ ಕುಮಾ​ರ​ಸ್ವಾ​ಮಿ ಈಗಾ​ಗಲೇ ಚನ್ನ​ಪ​ಟ್ಟಣ ಕ್ಷೇತ್ರ​ದಿಂದ ಸ್ಪರ್ಧೆ ಮಾಡುವ ಸ್ಪಷ್ಟಸಂದೇಶವನ್ನು ಕಾರ್ಯ​ಕ​ರ್ತ​ರಿಗೆ ರವಾ​ನಿ​ಸಿ​ದ್ದಾರೆ. ಕಳೆದ ಚುನಾ​ವ​ಣೆ​ಯಲ್ಲಿ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ಗಳಲ್ಲಿ ಗೆಲುವು ಸಾಧಿ​ಸಿದ್ದ ಅವರು ಚನ್ನ​ಪ​ಟ್ಟಣ ಕ್ಷೇತ್ರ ಉಳಿ​ಸಿ​ಕೊಂಡಿ​ದ್ದರು. ಈ ಬಾರಿ ಒಂದು ಕ್ಷೇತ್ರ​ದಿಂದ ಸ್ಪರ್ಧೆ ಮಾಡುವ ನಿರ್ಧಾ​ರಕ್ಕೆ ಬಂದಿ​ದ್ದಾರೆ. ಹಾಗಾ​ದರೆ ರಾಮ​ನ​ಗರ ಕ್ಷೇತ್ರ​ದಿಂದ ಜೆಡಿ​ಎಸ್‌ ಹುರಿ​ಯಾಳು ಯಾರಾ​ಗು​ತ್ತಾ​ರೆಂಬ ಕುತೂ​ಹಲ ಮೂಡಿ​ಸು​ತ್ತಿ​ದೆ.

ಬಾಕ್ಸ್‌........

ಭವಾನಿ ಸ್ಪರ್ಧಿ​ಸಿ​ದರೆ ಅನಿತಾ ಸ್ಪರ್ಧೆ ನಿಶ್ಚಿ​ತ

ಮುಂದಿನ ಚುನಾ​ವ​ಣೆಯಲ್ಲಿ ಅನಿತಾ ಕುಮಾ​ರ​ಸ್ವಾಮಿ ಪುತ್ರ ನಿಖಿಲ್‌ ಅವ​ರಿಗೆ ಕ್ಷೇತ್ರ ಬಿಟ್ಟು ಕೊಡು​ತ್ತಾರೆ ಎಂಬ ಮಾತು​ಗಳು ಕೇಳಿ ಬಂದಿ​ದ್ದವು. ಆದ​ರೀಗ ಅನಿ​ತಾ​ರ​ವರು ಮತ್ತೊಂದು ಅವ​ಧಿಗೆ ಶಾಸ​ಕ​ರಾ​ಗುವ ಆಸೆ ಹೊಂದಿ​ದ್ದಾರೆ. ಕುಮಾ​ರ​ಸ್ವಾ​ಮಿ​ಯ ನಿರಾ​ಕ​ರ​ಣೆ ನಡು​ವೆಯೂ ಅನಿ​ತಾ​ರ​ವರು ಟಿಕೆಟ್‌ಗಾಗಿ ಬಿಗಿ ಪಟ್ಟು ಹಿಡಿ​ದಿ​ದ್ದಾರೆ ಎನ್ನ​ಲಾ​ಗಿ​ದೆ. ಅಲ್ಲದೆ, ರಾಮ​ನ​ಗರ ದೇವೇ​ಗೌ​ಡ ಕುಟುಂಬದ ಪಾಲಿಗೆ ಅದೃ​ಷ್ಟದ ಕ್ಷೇತ್ರ. ಅಷ್ಟಕ್ಕೂ ಕುಮಾ​ರ​ಸ್ವಾ​ಮಿ ಅನಿತಾ ಅವ​ರನ್ನು ಕಣ​ಕ್ಕಿ​ಳಿ​ಸು​ವು​ದಿ​ಲ್ಲ​ ಎಂದಿ​ದ್ದಾ​ರೆಯೇ ಹೊರತು ತಮ್ಮ ಕುಟುಂಬ​ದ​ವ​ರು ಸ್ಪರ್ಧಿ​ಸು​ವು​ದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಇಲ್ಲಿ ತಮ್ಮ ಕುಟುಂಬ​ದ​ವ​ರನ್ನು ಹೊರತು ಪಡಿಸಿ ಬೇರೆ ಯಾರಿಗೂ ಜೆಡಿ​ಎಸ್‌ನಿಂದ ಸ್ಪರ್ಧಿ​ಸಲು ಕುಮಾ​ರ​ಸ್ವಾಮಿ ಅವ​ಕಾಶ ನೀಡು​ವು​ದಿಲ್ಲ. ಹಾಸನ ಕ್ಷೇತ್ರ​ದಿಂದ ಮಾಜಿ ಸಚಿವ ಎಚ್‌.ಎಂ.​ರೇ​ವಣ್ಣ ಧರ್ಮ​ಪತ್ನಿ ಭವಾನಿ ಸ್ಪರ್ಧಿಸಿ​ದರೆ ರಾಮ​ನ​ಗರ ಕ್ಷೇತ್ರ​ದಲ್ಲಿ ಅನಿತಾ ಕುಮಾ​ರ​ಸ್ವಾಮಿ ಸ್ಪರ್ಧೆ ಮಾಡು​ವುದು ನಿಶ್ಚಿ​ತ​. ಇಲ್ಲವೆ ಕೊನೆ ಘಳಿ​ಗೆ​ಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸ್ಪರ್ಧಿ​ಸುವ ಅಭ್ಯ​ರ್ಥಿ​ಗಳ ಆಧಾ​ರದ ಮೇಲೆ ಕುಮಾ​ರ​ಸ್ವಾಮಿ, ಅನಿತಾ ಹಾಗೂ ನಿಖಿಲ್‌ ಪೈಕಿ ಯಾರು ಬೇಕಾ​ದರೂ ಕಣ​ಕ್ಕಿ​ಳಿ​ಯ​ಬ​ಹುದು ಎನ್ನು​ತ್ತಿವೆ ಜೆಡಿ​ಎಸ್‌ ಮೂಲ​ಗ​ಳು.

ನಿಖಿಲ್‌ಗಾಗಿ ನಿಲ್ಲದ ಕ್ಷೇತ್ರ ಹುಡು​ಕಾ​ಟ

ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ರಾಜ​ಕೀಯ ಭವಿ​ಷ್ಯದ ದೃಷ್ಟಿ​ಯಿಂದ ಗೆಲುವು ಸುಲ​ಭ​ವಾಗುವ ಕ್ಷೇತ್ರ​ದ ಹುಡು​ಕಾಟ ಮುಂದು​ವ​ರಿದಿದೆ. ಮಂಡ್ಯ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಸೋಲು ಕಂಡಿ​ರುವ ನಿಖಿಲ್‌ ರಾಜ​ಕೀಯ ಭವಿ​ಷ್ಯದ ಚಿಂತೆ ಮಾಜಿ ಸಿಎಂ ಕುಮಾ​ರ​ಸ್ವಾಮಿ ಅವ​ರಿಗೆ ಕಾಡು​ತ್ತಿದೆ.

ಮಾಜಿ ಪ್ರಧಾನಿ ದೇವೇ​ಗೌ​ಡರು ನಿಖಿಲ್‌ರವರ ವಿವಾ​ಹದ ಸಂದ​ರ್ಭ​ದ​ಲ್ಲಿಯೇ ರಾಮ​ನ​ಗರ ಕ್ಷೇತ್ರ​ದಿಂದ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಆದರೆ, ನಿಖಿಲ್‌ ಕುಮಾ​ರ​ಸ್ವಾ​ಮಿ​ ಅವ​ರಿಗೆ ಸೋಲು ಕಂಡಿ​ರುವ ನೆಲ​ದ​ಲ್ಲಿಯೇ ಗೆದ್ದು ಬರ​ಬೇ​ಕೆಂಬ ಹಂಬಲ. ಹೀಗಾಗಿ ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಮಂಡ್ಯ ಸಂಸತ್‌ ಕ್ಷೇತ್ರ​ದಿಂದಲೇ ಸ್ಪರ್ಧಿಸುವ ಇರಾದೆ ಹೊಂದಿ​ದ್ದಾರೆ. ಜೊತೆಗೆ ರಾಮ​ನ​ಗರ ಮತ್ತು ಮಾಗಡಿ ವಿಧಾ​ನ​ಸಭಾ ಕ್ಷೇತ್ರದ ಜತೆಗೆ ಮಂಡ್ಯ ಜಿಲ್ಲೆಯ ಮಂಡ್ಯ ಮತ್ತು ಕೆ.ಆರ್‌.ಪೇಟೆ ವಿಧಾ​ನ​ಸಭಾ ಕ್ಷೇತ್ರ​ಗ​ಳ​ಲ್ಲಿಯೂ ನಿಖಿಲ್‌ ಕುಮಾ​ರ​ಸ್ವಾಮಿ ಹೆಸರು ಚಾಲ್ತಿ​ಯ​ಲ್ಲಿದೆ.

click me!