Chikkaballapura : ಎಎಸ್‌ಐ ಮನೇಲಿ ಗುಂಡು ಹಾರಿಸಿ ದೋಚಿದ್ದು 18 ಲಕ್ಷ ರು, ನಗ, ನಾಣ್ಯ!

By Kannadaprabha News  |  First Published Nov 11, 2022, 6:10 AM IST

ಪೊಲೀಸ್‌ ಇಲಾಖೆಯ ಎಎಸ್‌ಐ ಮನೆಗೆ ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಕನ್ನ ಹಾಕಿ ಕಾರಿನಲ್ಲಿ ಬಂದು ದರೋಡೆ ನಡೆಸುವ ಮೂಲಕ ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗುವ ವೇಳೆ ಅಡ್ಡ ಬಂದ ಎಎಸ್‌ಐ ಹಾಗೂ ಆತನ ಪುತ್ರನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


  ಚಿಕ್ಕಬಳ್ಳಾಪುರ (ನ.11):  ಪೊಲೀಸ್‌ ಇಲಾಖೆಯ ಎಎಸ್‌ಐ ಮನೆಗೆ ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಕನ್ನ ಹಾಕಿ ಕಾರಿನಲ್ಲಿ ಬಂದು ದರೋಡೆ ನಡೆಸುವ ಮೂಲಕ ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗುವ ವೇಳೆ ಅಡ್ಡ ಬಂದ ಎಎಸ್‌ಐ ಹಾಗೂ ಆತನ ಪುತ್ರನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಳ್ಳರ ಪತ್ತೆಗೆ 5 ತಂಡ ರಚನೆ:

Tap to resize

Latest Videos

ಈ ವೇಳೆ ಕೇಂದ್ರ ವಲಯದ ಐಜಿ ಚಂದ್ರಶೇಖರ್‌, ದರೋಡೆಗೆ ಒಳಗಾದ (ASI)  ನಾರಾಯಣಸ್ವಾಮಿ ಗೆ (House)  ಭೇಟಿ ನೀಡಿ ಪರಿಶೀಲಿಸಿದರಲ್ಲದೇ ಮನೆಯವರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಪಿಗಳ ಬಂಧನಕ್ಕಾಗಿ 5 ವಿಶೇಷ ತಂಡಗಳ ರಚನೆ ಮಾಡಿದ್ದೇವೆಂದರು.

ಈಗಾಗಲೇ ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿದ್ದು ಪ್ರಕರಣ ತನಿಖೆಯಲ್ಲಿರುವಾಗ ಹೆಚ್ಚಿನ ಮಾಹಿತಿ ನೀಡಲು ಬಯಸುವುದಿಲ್ಲ. ಆದರೆ ಕೃತ್ಯದಲ್ಲಿ ಪಾಲ್ಗೊಂಡಿರುವ ದರೋಡೆಕೋರರು ಪಾತಾಳದಲ್ಲಿ ಇದ್ದರೂ ನಾವು ಅವರನ್ನು ಬಂಧಿಸಿ ಕರೆ ತರುತ್ತೇವೆ. ಅದಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ಮಾಡುತ್ತಿದ್ದೇವೆಂದು ಚಂದ್ರಶೇಖರ್‌ ತಿಳಿಸಿದರು. ದರೋಡೆಕೋರರ ಹಲ್ಲೆಯಿಂದ ಗಾಯಗೊಂಡಿರುವ ನಾರಾಯಣಸ್ವಾಮಿ ಹಾಗೂ ಅವರ ಪುತ್ರ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ವೇಳೆ ಎಸ್ಪಿ ಡಿ.ಎಲ್‌. ನಾಗೇಶ್‌, ಡಿವೈಎಸ್‌ಪಿ ವಾಸುದೇವ್‌ ಇದ್ದರು. ಇದಕ್ಕೂ ಮೊದಲು ಎಫ್‌ಎಸ್‌ಎಲ್‌ ತಂಡ ಹಾಗೂ ಶ್ವಾನ ದಳ ಭೇಟಿ ನೀಡಿ ಮನೆಯನ್ನು ಶೋಧಿಸಿತು. ಗುರುವಾರ ಶಸ್ತ್ರಚಿಕಿತ್ಸೆ ಮೂಲಕ ಶರತ್‌ ಸೊಂಟದಲ್ಲಿದ್ದ ಗುಂಡನ್ನು ಹೊರ ತೆಗೆಯಲಾಗಿದೆ.

ಬೆಳ್ಳಿ ಸಾಮಾನು ಮುಟ್ಟಿಲ್ಲ..ಚಿನ್ನಾಭರಣ ಬಿಟ್ಟಿಲ್ಲ!

ಕಳ್ಳರು ಮನೆಯ ಮೊದಲ ಮಹಡಿಗೆ ತೆರಳಿ ಬೀರುವನ್ನು ಒಡೆದು ಅದರಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ಒಂದಿಷ್ಟುಬಿಡದೇ ದೋಚಿದ್ದಾರೆ. ಆದರೆ ಬೆಳ್ಳಿಯ ಆಭರಣಗಳನ್ನು ಸ್ಥಳದಲ್ಲಿಯೆ ಬಿಟ್ಟು ಹೋಗಿದ್ದು ಚಿನ್ನಾಭರಣಗಳನ್ನು ಸಂಪೂರ್ಣ ಕದ್ದು ಹೋಗಿದ್ದಾರೆ. ಅಲ್ಲದೇ ಎಎಸ್‌ಐ ಪತ್ನಿ ಸುಗುಣ ಮೈಮೇಲಿದ್ದ 2 ಎಳೆ ಮಾಂಗಲ್ಯ ಸರ, 1 ಜೊತೆ ಕಿವಿ ಓಲೆ-ಜುಮಕಿ, ಎ2 ಬಂಗಾರದ ಬಳೆಗಳನ್ನು ಬಿಚ್ಚಿಸಿಕೊಂಡಿರುವ ದರೋಡೆಕೋರರು, ಸೊಸೆ ಮೈಮೇಲಿದ್ದ 2 ಎಳೆ ಮಾಂಗಲ್ಯ ಸರ, 1 ಜೊತೆ ಕಿವಿ ಓಲೆ-ಜುಮಕಿ, ಕೈಯಲ್ಲಿದ್ದ ಉಮಾ ಗೋಲ್ಡ… 2 ಬಳೆಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ.

15 ಲಕ್ಷ ರು. ನಗದು, 800 ಗ್ರಾಂ ಬಂಗಾರ ಕಳ್ಳರ ಪಾಲು

ಬಲ್ಲ ಮೂಲಗಳ ಪ್ರಕಾರ ಎಎಸ್‌ಐ ಮನೆ ಮೇಲೆ ದಾಳಿ ನಡೆಸಿ ದರೋಡೆ ನಡೆಸಿರುವ ಕಳ್ಳರು, ಬರೋಬ್ಬರಿ 18 ಲಕ್ಷಕ್ಕೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ದೋಚಿ ಹೋಗಿದ್ದಾರೆಂದು ತಿಳಿದು ಬಂದಿದೆ. ಆ ಪೈಕಿ 15 ಲಕ್ಷಕ್ಕೂ ಅಧಿನ ನಗದು ಹಾಗೂ ಬರೋಬ್ಬರಿ 800 ಗ್ರಾಂ ನಷ್ಟಚಿನ್ನಾಭರಣಗಳನ್ನು ಕದ್ದು ಹೋಗಿದ್ದಾರೆ. ಪೆರೇಸಂದ್ರ ಪೊಲೀಸ್‌ ಠಾಣೆಗೆ ಎಎಸ್‌ಐ ನಾರಾಯಣಸ್ವಾಮಿ ರವರ ಪತ್ನಿ ಸುಗುಣ ಎಂಬುವರು ನೀಡಿರುವ ದೂರಿನಲ್ಲಿ ಮಾತ್ರ ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಕಳವು ಆಗಿರುವ ಬಗ್ಗೆ ತಿಳಿಸಿದ್ದು ಪರಿಶೀಲಿಸಿ ವಿವರ ನೀಡುವುದಾಗಿ ಹೇಳಿದ್ದಾರೆ.

ಎಎಸ್‌ಐ ಮನೆಯಲ್ಲಿ ಚಿನ್ನಾಭರಣ ದೋಚಿಸಿರುವ ಕಳ್ಳರು ಬೆಳ್ಳಿ ಅಭರಣಗಳನ್ನು ಅಲ್ಲಿಯೆ ಬಿಟ್ಟು ಹೋಗಿರುವುದು.

click me!