ನಾಳೆಯಿಂದ 5 ದಿನ ಭಾರಿ ಮಳೆ ಸಾಧ್ಯತೆ: ಕೊಡಗಲ್ಲಿ ಆರೆಂಜ್‌ ಅಲರ್ಟ್‌!

By Web Desk  |  First Published Jul 17, 2019, 7:55 AM IST

ನಾಳೆಯಿಂದ 5 ದಿನ ಭಾರಿ ಮಳೆ ಸಾಧ್ಯತೆ| 20 ಸೆಂ.ಮೀ.ವರೆಗೂ ಮಳೆ ಸಂಭವ| ಕೊಡಗಲ್ಲಿ ಆರೆಂಜ್‌ ಅಲರ್ಟ್‌


ಬೆಂಗಳೂರು[ಜು.17]: ಕಳೆದ ವರ್ಷ ಭಾರೀ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಜು.18ರಿಂದ 5 ದಿನಗಳ ಕಾಲ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 115.6 ರಿಂದ 204.4 ಮಿ.ಮೀ.ವರೆಗೂ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ. ಪ್ರಕೃತಿ ವಿಕೋಪ ಸಂಬಂಧಿಸಿ ಯಾವುದೇ ಸಮಸ್ಯೆಗಳಿಗೆ ದೂ​-08272-221077 ಅನ್ನು ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Tap to resize

Latest Videos

ಸಾಮಾನ್ಯವಾಗಿ ಮಳೆಯ ಪರಿಸ್ಥಿತಿ ನೋಡಿಕೊಂಡು ಯೆಲ್ಲೋ (ಹಳದಿ), ಆರೆಂಜ್‌ (ಕಿತ್ತಳೆ) ಹಾಗೂ ರೆಡ್‌ (ಕೆಂಪು) ಅಲರ್ಟ್‌ ಎಂದು ಮೂರು ವಿಧದಲ್ಲಿ ಅಲರ್ಟ್‌ ಘೋಷಣೆ ಮಾಡಲಾಗುತ್ತದೆ. ಸಾಮಾನ್ಯದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಆರೆಂಜ್‌ ಅಲರ್ಟ್‌ ಘೋಷಿಸಲಾಗುತ್ತದೆ.

ರಾಯಚೂರು, ಕೊಪ್ಪಳದಲ್ಲಿ ಭರ್ಜರಿ ಮಳೆ:

ಈ ನಡುವೆ ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ಭರ್ಜರಿ ಮಳೆಯಾಗಿದ್ದು, ಬರದಿಂದ ಕಂಗೆಟ್ಟಿದ್ದ ಜನತೆಗೆ ಜೀವಕಳೆ ಬಂದಂತಾಗಿದೆ. ರಾಯಚೂರು ನಗರ ಸೇರಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಇನ್ನು ಕೊಪ್ಪಳ ನಗರದಲ್ಲಿ ಸುಮಾರು ಮೂರು ಗಂಟೆ ಕಾಲ ನಿರಂತರವಾಗಿ ಧಾರಾಕಾರ ಮಳೆ ಸುರಿದಿದೆ. ನಗರದ ಅಲ್ಲಲ್ಲಿ ರಸ್ತೆಗಳು ನೀರು ತುಂಬಿಕೊಂಡು ಕೆರೆಯಂತಾಗಿರುವುದು ಕಂಡು ಬಂತು.

click me!