ಮುಚ್ಚಿದ ಲಾರಿಯಲ್ಲಿ 8 ದಿನ ಪಯಣಿಸಿ ಅಸ್ಸಾಂ ತಲುಪಿದ ಮೈಸೂರಿನ ಜಿರಾಫೆ..!

By Kannadaprabha NewsFirst Published Dec 16, 2019, 12:54 PM IST
Highlights

ಮೈಸೂರು ಮೃಗಾಲಯ ಹೊಸ ದಾಖಲೆ ಬರೆದಿದ್ದು, ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಮೈಸೂರಿನ ಜಿರಾಫೆ 3,200 ಕಿ. ಮೀ. ಸಂಚರಿಸಿ ಅಸ್ಸಾಂನ ಗುವಾಹಟಿಗೆ ತಲುಪಿದೆ. ಇದಕ್ಕೆ ಬದಲಾಗಿ ಅಲ್ಲಿನ ಮೃಗಾಲಯದಿಂದ ಹೊಸ ಅತಿಥಿಗಳು ಮೈಸೂರಿನ ಮೃಗಾಲಯಕ್ಕೆ ಆಗಮಿಸಿದ್ದಾರೆ.

ಮೈಸೂರು(ಡಿ.16): ಮೈಸೂರು ಮೃಗಾಲಯ ಹೊಸ ದಾಖಲೆ ಬರೆದಿದ್ದು, ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಮೈಸೂರಿನ ಜಿರಾಫೆ 3,200 ಕಿ. ಮೀ. ಸಂಚರಿಸಿ ಅಸ್ಸಾಂನ ಗುವಾಹಟಿಗೆ ತಲುಪಿದೆ. ಇದಕ್ಕೆ ಬದಲಾಗಿ ಅಲ್ಲಿನ ಮೃಗಾಲಯದಿಂದ ಹೊಸ ಅತಿಥಿಗಳು ಮೈಸೂರಿನ ಮೃಗಾಲಯಕ್ಕೆ ಆಗಮಿಸಿದ್ದಾರೆ.

ಮೈಸೂರು ಮೃಗಾಲಯದಿಂದ ವಿನೂತನ ದಾಖಲೆ ಬರೆಯಲಾಗಿದ್ದು, ಅಸ್ಸಾಂ ರಾಜ್ಯದ ಗುವಾಹಟಿಗೆ ಜಿರಾಫೆ ಸಾಗಣೆ ಮಾಡಲಾಗಿದೆ. ಪ್ರಾಣಿ ವಿನಿಮಯ ಯೋಜನೆಯಡಿ ದಾಖಲೆ ನಿರ್ಮಾಣ ಮಾಡಲಾಗಿದ್ದು, ಬರೋಬ್ಬರಿ 3,200 ಕಿ.ಮೀ. ದೂರಕ್ಕೆ ಸಾಗಿಸಲಾಗಿದೆ. ಇಷ್ಟೊಂದು ದೂರಕ್ಕೆ ಪ್ರಾಣಿ ಸಾಗಣೆ ಮಾಡಿದ್ದು ದೇಶದಲ್ಲೇ ಮೊದಲು.

ಮೈಸೂರು ಮೃಗಾಲಯದ Weekly Off ರದ್ದು: ಪ್ರವಾಸಿಗರು ಎಲ್ಲಾ ದಿನವೂ ಹೋಗ್ಬಹುದು

ಶ್ರೀ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿ ಸಾಹಸ ಮಾಡಿ, 12 ಅಡಿ ಎತ್ತರದ ಗಂಡು ಜಿರಾಫೆ ಸ್ಥಳಾಂತರ ಮಾಡಿದ್ದಾರೆ. ಗುವಾಹಟಿಯ ಮೃಗಾಲಯ ಮತ್ತು ಬಟಾನಿಕಲ್ ಗಾರ್ಡನ್​ಗೆ 14 ತಿಂಗಳು ವಯಸ್ಸಿನ ಜಿರಾಫೆ ಸಾಗಣೆ ಮಾಡಿದ್ದಾರೆ. ಮುಚ್ಚಿದ ಲಾರಿಯಲ್ಲಿ 8 ದಿನ ಪಯಣಿಸಿದ ಜಿರಾಫೆ ಅಸ್ಸಾಂ ತಲುಪಿದೆ. ಈ ಹಿಂದೆ ಮೈಸೂರು ಮೃಗಾಲಯ ಲಕ್ನೋ, ಪಾಟ್ನಾ ಝೂಗಳಿಗೂ ಜಿರಾಫೆ ಕಳುಹಿಸಿತ್ತು.

ತಮಾಷೆಗೆಂದು ಸಿಂಹದ ಬೋನಿಗಿಳಿದು ಲೇವಡಿ ಮಾಡಿದ ಯುವತಿ: ಮುಂದೇನಾಯ್ತು?

click me!