ಹೊಸ ಕಾರಿನಲ್ಲಿ ಬರುತ್ತಿದ್ದವರಿಗೆ ಸಾವಿನ ಆಘಾತ | ಇನ್ನೂ ರಿಜಿಸ್ಟರ್ ಆಗದ ಕಾರು ಕಾಲುವೆಗೆ
ಹಾವೇರಿ(ಡಿ.30): ಹಾವೇರಿ ತಾಲೂಕಿನ ಗುತ್ತಲ ಸಮೀಪದ ಸೋಮನಕಟ್ಟಿ ಶಿಬಾರ ಹಾಗೂ ಕನವಳ್ಳಿಯ ಮಧ್ಯ ಇರುವ ತುಂಗಭದ್ರಾ ಕಾಲುವೆಗೆ ಇನ್ನೂ ನೋಂದಣಿಯಾಗದ ಕಾರೊಂದು ಬಿದ್ದಿದೆ.
ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಒಬ್ಬ ವ್ಯಕ್ತಿ ಕಾರಿನಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಶ್ರೀರಾಮನ ಬಗ್ಗೆ ವಾಟ್ಸಾಪ್‌ನಲ್ಲಿ ನಿಂದನಾತ್ಮಕ ಸಂದೇಶ: ಯುವಕನ ವಿರುದ್ಧ ಕೇಸ್
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತ ಶವ ಹಾಗೂ ಇನ್ನೋರ್ವನನ್ನು ಸ್ಥಳೀಯರ ಸಹಾಯದಿಂದ ಮೇಲಕ್ಕೆ ತಂದಿರುವದಾಗಿ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.