ಶ್ರೀರಾಮನ ಬಗ್ಗೆ ವಾಟ್ಸಾಪ್‌ನಲ್ಲಿ ನಿಂದನಾತ್ಮಕ ಸಂದೇಶ | ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಮಾತನಾಡಿದ ಯುವಕನ ವಿರುದ್ಧ ಕೇಸ್
ಹಾವೇರಿ(ಡಿ.30): ಶ್ರೀರಾಮನ ಬಗ್ಗೆ ವಾಟ್ಸಾಪ್‌ನಲ್ಲಿ ನಿಂದನಾತ್ಮಕ ಸಂದೇಶ ಕಳುಹಿಸಿ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಮಾತನಾಡಿದ ಯುವಕನ ವಿರುದ್ಧ ಕೇಸ್ ದಾಖಲಾಗಿದೆ.
ವಾಟ್ಸಾಪ್‌ನಲ್ಲಿ ಶ್ರೀರಾಮಚಂದ್ರನ ಬಗ್ಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ಕೋಮು ಭಾವನೆಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಅನ್ಯ ಕೋಮಿನ ಯುವಕನೊಬ್ಬನ ವಿರುದ್ಧ ರಟ್ಟೀಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಿ ದೇವಿಯ ಅವಹೇಳನ ಮಾಡಿದ ಭೂಪ, ಟ್ವಿಟರ್ ವಿರುದ್ಧ ದೂರು
ಸಾಹಿಲ್ ಎಂಬಾತನೇ ಶ್ರೀರಾಮನ ಬಗ್ಗೆ ನಿಂದನೆ ಮಾಡಿದ ಯುವಕ. ಈತನ ಸ್ನೇಹಿತ ಲೋಹಿತ್ ನಿಕ್ಕಂ ಎಂಬಾತ ಹನುಮಜಯಂತಿ ಅಂಗವಾಗಿ ಶ್ರೀರಾಮನ ವಾಟ್ಸಾಪ್ ಡಿಪಿ ಹಾಕಿಕೊಂಡಿದ್ದ. ಅದನ್ನು ನೋಡಿದ ಸಾಹಿಲ್ ಧ್ವನಿ ಸಂದೇಶ ಕಳುಹಿಸಿದ್ದಾನೆ.
ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ, ನಿಂದನಾತ್ಮಕ ರೀತಿಯಲ್ಲಿ ಕಳುಹಿಸಿದ ಸಂದೇಶ ಎಲ್ಲೆಡೆ ಹರಿದಾಡಿದೆ. ಇದರಿಂದ ಕೆರಳಿದ ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಮಾಸೂರು ಬಂದ್‌ಗೆ ಕರೆಕೊಟ್ಟಿದ್ದರು.
ಕೋಳಿ ಸಾರಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ
ಇದರಿಂದ ಮಾಸೂರು ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು. ಬಳಿಕ ಡಿವೈಎಸ್ಪಿ ಸುರೇಶ ಹಾಗೂ ಸಿಬ್ಬಂದಿ ಆಗಮಿಸಿ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ ಮೇಲೆ ಬಂದ್ ಕರೆ ವಾಪಸ್ ಪಡೆಯಲಾಯಿತು. ಆರೋಪಿ ಪತ್ತೆಯಾಗಿ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಾಹಿಲ್ ವಿರುದ್ಧ ರಟ್ಟೀಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ