ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್; ಗ್ರಾಮಸ್ಥರ ಕನಸು ನನಸಾಯ್ತು!

Published : Jun 29, 2026, 06:01 AM IST
Bus

ಸಾರಾಂಶ

ಬಸವನಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದ್ದು, ಇದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ಗ್ರಾಮಸ್ಥರು ಹಾರ, ತುರಾಯಿ ಹಾಕಿ ಪೂಜೆ ಸಲ್ಲಿಸುವ ಮೂಲಕ ಬಸ್ಸನ್ನು ಸಂಭ್ರಮದಿಂದ ಸ್ವಾಗತಿಸಿ, ಶಾಸಕರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ವಿಜಯಪುರ: ಬಸವನಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ಹೋಗುವ ನೂತನ ಬಸ್ ಗೆ ಗ್ರಾಮಸ್ಥರಿಂದ ಹಾರ, ತುರಾಯಿ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು.

ಬಸ್ ಮಾರ್ಗ ಈ ರೀತಿಯಾಗಿದೆ

ಬಹುದಿನಗಳ ಬೇಡಿಕೆಯಾದ ಕೊಂಡಗೂಳಿ ಮಾರ್ಗವಾಗಿ ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕುದುರಿ ಸಾಲವಾಡಗಿ, ಯಾಳವಾರ , ಕೊಂಡಗೂಳಿ, ಕೋರವಾರ ಹಾಗೂ ಕೊಕಟನೂರ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರಕ್ಕೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹಾಗೂ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಗ್ರಾಮಸ್ಥರು ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಗ್ರಾಮದ ಮುಖಂಡರು ಮಾತನಾಡಿ, ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆಗೆ ಸಹಕರಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿದರು.

ಇದೇ ವೇಳೆ ಮುಖಂಡರಾದ ಶಿವು ಕೊಳ್ಳಾರಿ, ಬಾಬು ನದಾಫ್, ಉಮೇಶ ಹನ್ನಿ,ಕಾಸಿಲಿಂಗ ಸಿಂದಗೇರಿ,ಅಕ್ಷಯ ಗೊಬ್ಬರ, ಕಲ್ಲು ಅವರಾದಿ, ಶಿವಾನಂದ ಗೊಬ್ಬರ,ಮಹಿಬೂಬ ಖಾಜಿ, ಮುನೀರ್ ನದಾಫ್, ಬಸವಲಿಂಗಯ್ಯ ಹಿರೇಮಠ ಹಾಗೂ ಬಸವರಾಜ ಕುಲಕರ್ಣಿ ಸೇರಿ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಅಮಲಿನ ಅಂಶ ಪತ್ತೆ ಆದ್ರೆ ಪಾನ್‌ ಮಸಾಲ, ಗುಟ್ಕಾ ನಿಷೇಧ: ಡಿಕೆ ಶಿವಕುಮಾರ್ ಎಚ್ಚರಿಕೆ

ಇದನ್ನೂ ಓದಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರು; ನಾಳೆಯಿಂದ ಮನೆಮನೆಗೆ ಎಸ್‌ಐಆರ್

PREV
Read more Articles on
click me!

Recommended Stories

ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ, ನಿಯಂತ್ರಣಕ್ಕೆ ಬಾರದ ಬೆಂಕಿ
ಕಾರಿನಲ್ಲಿ ಬಂದು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಂದ ಶೂ ಕಳ್ಳತನ, ಸಿಸಿಟಿವಿಯಲ್ಲಿ ಕೃತ್ಯ ಸೆರೆ