ವಿಜಯಪುರ To ಬೇನಾಳ RS: ಕೊನೆಗೂ ಆರಂಭವಾದ ಬಹುನಿರೀಕ್ಷಿತ ಸೇವೆ, ಈಡೇರಿತು ಗ್ರಾಮಸ್ಥರ ಬೇಡಿಕೆ

Published : Jun 16, 2026, 06:56 AM IST
Bus

ಸಾರಾಂಶ

ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದೆ. ಈ ಬಸ್ ಪ್ರತಿದಿನ ನಾಲ್ಕು ಟ್ರಿಪ್‌ಗಳ ಮೂಲಕ ಆಲಮಟ್ಟಿ ಉದ್ಯಾನದವರೆಗೆ ಸಂಚರಿಸಲಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ವಿಜಯಪುರ/ಆಲಮಟ್ಟಿ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ (ಸಂಚಾರ ) ಸೇವೆ ಸೋಮವಾರದಿಂದ ಆರಂಭವಾಗಿದೆ. ವರ್ಷದ ಹಿಂದೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬೇನಾಳ ಆರ್. ಎಸ್. ಗ್ರಾಮಸ್ಥರು ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬಸ್ ಸಂಚಾರ ಆರಂಭಿಸಿದ್ದಾರೆ. 

ಬಸ್ ಸಮಯ ಈ ರೀತಿಯಾಗಿದೆ

ಈ ನೂತನ ಬಸ್ಸು ಪ್ರತಿದಿನ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ಹೊರಟು 9.30ಕ್ಕೆ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ. 9:45ಕ್ಕೆ ಉದ್ಯಾನದಿಂದ ಹೊರಟು 11.30ಕ್ಕೆ ವಿಜಯಪುರ ತಲುಪುತ್ತದೆ. ಅದೇ ಬಸ್‌ 11.45ಕ್ಕೆ ವಿಜಯಪುರವನ್ನು ಬಿಟ್ಟು 1.30ಕ್ಕೆ ಆಲಮಟ್ಟಿ ಉದ್ಯಾನಕ್ಕೆ ಬರುತ್ತದೆ. ನಂತರ ಮಧ್ಯಾಹ್ನ 2 ಗಂಟೆಗೆ ಉದ್ಯಾನ ಬಿಟ್ಟು 3.30ಕ್ಕೆ ವಿಜಯಪುರ ತಲುಪುತ್ತದೆ. ಹೀಗೆ ಪ್ರತಿದಿನ 4 ಟ್ರಿಪ್‌ ಬಸ್‌ ಸೇವೆ ಒದಗಿಸುತ್ತದೆ.

ನೂತನ ಬಸ್ ಸಂಚಾರದಿಂದ ಈ ಭಾಗದ ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳಾ ಉದ್ಯೋಗಿಗಳಿಗೆ ಬಹಳ ಸಹಾಯವಾಗಿದೆ.

ಬಸ್ ಮಾರ್ಗ ಈ ರೀತಿಯಾಗಿದೆ

ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಹೊರಟ ಬಸ್ಸು ಜುಮನಾಳ ಕ್ರಾಸ್, ಹೊನಗನಹಳ್ಳಿ, ತೊನಶ್ಯಾಳ ಕ್ರಾಸ್, ಮುಳವಾಡ ಪ್ರವಾಸಿ ಮಂದಿರ, ಮುಳವಾಡ, ಕಲಗುರ್ಕಿ, ಕಲಗುರ್ಕಿ ರೈಲು ನಿಲ್ದಾಣ, ತಳೇವಾಡ ಕ್ರಾಸ್, ಕೂಡಗಿ ರೈಲು ನಿಲ್ದಾಣ, ಎನ್‌ಟಿಪಿಸಿ, ಅಂಗಡಗೇರಿ ರೈಲು ನಿಲ್ದಾಣ, ವಂದಾಲ ರೈಲು ನಿಲ್ದಾಣ, ಬೇನಾಳ ರೈಲು ನಿಲ್ದಾಣ, ಬೇನಾಳ ಕ್ರಾಸ್, ಆಲಮಟ್ಟಿ ಸರ್ಕಲ್ ಬಸ್ ನಿಲ್ದಾಣ, ಆಲಮಟ್ಟಿ ರೈಲು ನಿಲ್ದಾಣದ ಮುಖಾಂತರ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

4 ದಶಕಗಳ ಬಳಿಕ ಒಂದೆಡೆ ಸೇರಿದ 1983-84ನೇ ಸಾಲಿನ ವಿದ್ಯಾರ್ಥಿಗಳು; ಮೃತ ಗೆಳೆಯರಿಗೆ ಕಂಬನಿ
ಅನುಮಾನಾಸ್ಪದವಾಗಿ 'ಮಜಾ ಭಾರತ' ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ನಿಧನ; ಶವ ಪತ್ತೆ