ಕೊರೋನಾ ಸೋಂಕು ಸ್ಪೋಟ ಸಾಧ್ಯತೆ, ಎಚ್ಚರ ಅಗತ್ಯ: ಬಿವೈ ರಾಘವೇಂದ್ರ

By Kannadaprabha NewsFirst Published Jun 14, 2020, 10:50 AM IST
Highlights

ಕೊರೋನಾ ಸ್ಫೋಟಿಸುವ ಸಾಧ್ಯತೆ: ಸಂಸದ ರಾಘವೇಂದ್ರ | ಮುಂದಿನ ದಿನಗಳಲ್ಲಿ ನಾಗರಿಕರು ಜಾಗ್ರತೆ ವಹಿಸಲು ಸೂಚನೆ |  ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ, ಥರ್ಮಸ್‌ ಪ್ಲಾಸ್ಕ್‌ ವಿತರಣೆ

ತೀರ್ಥಹಳ್ಳಿ (ಜೂ. 14): ಕೊರೋನಾ ಸೋಂಕು ಸಮುದಾಯ ಮಟ್ಟದಲ್ಲಿ ವ್ಯಾಪಿಸುವ ಹಂತಕ್ಕೆ ತಲುಪಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಸಂಸತ್‌ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ತಾಲೂಕಿನ ಕೊರೊನಾ ವಾರಿಯ​ರ್ಸ್ ಗೌರವಾರ್ಥ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ಮತ್ತು ಥರ್ಮಸ್‌ ಪ್ಲಾಸ್ಕ್‌ ವಿತರಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಈ ಸೋಂಕು ಅತ್ಯಂತ ಅಪಾಯದ ಹಂತ ತಲುಪುವ ಸೂಚನೆಗಳು ಗೋಚರವಾಗುತ್ತಿವೆ. ಜನರು ವೈಯಕ್ತಿಕವಾಗಿ ಈ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಕರೋನಾ ವಿಪತ್ತನ್ನು ನಿಯಂತ್ರಿಸುವಲ್ಲಿ ಈ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು.

ಮೆಗ್ಗಾನ್‌ ವೈದ್ಯರ ’ಖಾಸಗಿ ಕೆಲಸಕ್ಕೆ’ ಖಡಕ್‌ ಎಚ್ಚರಿಕೆ

ಇದಕ್ಕೆ ಮುನ್ನ ತಾಲೂಕಿನ ಅಂಬುತೀರ್ಥದಲ್ಲಿರುವ ಶರಾವತಿ ನದಿ ಮೂಲಕ್ಕೆ ಹಿರಿಯ ಅ​ಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂಸದರು ಈ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿ, ನಾಡಿಗೆ ಬೆಳಕನ್ನು ನೀಡುವ ನದಿಯ ಮೂಲ ಸ್ಥಾನವಾದ ಮತ್ತು ಪುರಾಣ ಪ್ರಸಿದ್ಧವಾದ ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುವಲ್ಲಿ ಪ್ರವಾಸೋದ್ಯಮ, ನೀರಾವರಿ ಮುಂತಾದ ಇಲಾಖೆಗಳ ಆರ್ಥಿಕ ಸಹಕಾರದೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂತರ ಪಟ್ಟಣದ ಸಮೀಪದ ತುಡ್ಕಿ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 13 ಕೋಟಿ ವೆಚ್ಚದ ಒಕ್ಕಲಿಗರ ಸಮುದಾಯ ಭವನದ ಕಾಮಗಾರಿ ವೀಕ್ಷಿಸಿದರು. ಹಾಗೂ ಕುರುವಳ್ಳಿಯಲ್ಲಿ ಬಿಲ್ಲವ ಸಮಾಜದ ಸಮುದಾಯ ಭವನದ ಶಂಕು ಸ್ಥಾಪನೆಯನ್ನು ನೆರವೇರಿಸಿದರು.

ಶಾಸಕ ಆರಗ ಜ್ಞಾನೇಂದ್ರ, ನೀರಾವರಿ ಇಲಾಖೆಯ ಅ​ಧಿಕಾರಿ ರಮೇಶ್‌, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಅ​ಧಿಕಾರಿ ಪೂರ್ಣಿಮಾ, ಪರಾತತ್ವ ಇಲಾಖೆ ತೇಜೇಶ್ವರ್‌, ಪ್ರವಾಸೋದ್ಯಮ ಇಲಾಖೆ ಲಕ್ಷಿತ್ರ್ಮೕನಾರಾಯಣ ಕಾಶಿ, ಜಿಪಂ ಸದಸ್ಯೆ ಅಪೂರ್ವ ಶರ​, ತಹಸೀಲ್ದಾರ್‌ ಡಾ, ಶ್ರೀಪಾದ್‌, ಎಸ್‌. ದತ್ತಾತ್ರಿ ಜ್ಯೋತಿ ಪ್ರಕಾಶ್‌ ಮುಂತಾದವರು ಇದ್ದರು.

click me!