ಮನು ಸಂಸ್ಕೃತಿಯನ್ನು ಉಸಿರಾಗಿಸಿಕೊಂಡಿರುವುದು ಭಾರತ. ಇದಕ್ಕೆ ಈ ನೆಲದ ತಾಯಂದಿರೇ ಕಾರಣರು. ನೆಲದ ಹೆಗ್ಗುರುತು ಹೆಣ್ಣಿನ ಮೇಲೆ ನಿಂತಿದೆ ಎಂದು ರಾಷ್ಟ್ರೀಯವಾದಿ, ಸಾಮಾಜಿಕ ಚಿಂತಕರಾದ ಚೈತ್ರಾ ಕುಂದಾಪುರ ಹೇಳಿದರು.
ಸುರಪುರ (ಫೆ.26) : ಮನು ಸಂಸ್ಕೃತಿಯನ್ನು ಉಸಿರಾಗಿಸಿಕೊಂಡಿರುವುದು ಭಾರತ. ಇದಕ್ಕೆ ಈ ನೆಲದ ತಾಯಂದಿರೇ ಕಾರಣರು. ನೆಲದ ಹೆಗ್ಗುರುತು ಹೆಣ್ಣಿನ ಮೇಲೆ ನಿಂತಿದೆ. ಈ ನೆಲದ ಭರಸವೆಯನ್ನು ಹಿರಿಯರು ಇಟ್ಟಿಕೊಂಡಿರುವುದು ತಾಯಂದಿರ ಮೇಲೆಯೇ ಹೊರತು ಪುರುಷರ ಮೇಲಲ್ಲ. ಜಗತ್ತಿನ ಅಳಿವು ಉಳಿವು ಹೆಣ್ಣಿನ ಮೇಲೆ ನಿಂತಿದೆ ಎಂದು ರಾಷ್ಟ್ರೀಯವಾದಿ, ಸಾಮಾಜಿಕ ಚಿಂತಕರಾದ ಚೈತ್ರಾ ಕುಂದಾಪುರ(Chaitra Kundapur) ಹೇಳಿದರು.
ನಗರದ ಕಡ್ಲೆಪ್ಪನವರ ನಿಷ್ಠಿ ಮಠದಲ್ಲಿ ನಡೆಯುತ್ತಿರುವ ಶರಣ ಚರಿತಾಮೃತ ಪ್ರವಚನ(Sharana Charitaamrit) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿನ ಪರಂಪರೆ, ಸಂಸ್ಕೃತಿಯಲ್ಲಿ ಹೆಣ್ಣು ಇದ್ದಾಳೆ. ಯುದ್ಧ, ಆಲೋಚನೆಯ ಪ್ರತಿಯೊಂದು ಕಣಕಣದಲ್ಲಿ ಮಹಿಳೆಯಿದ್ದಾಳೆ. ದೇಶದ ಐಕ್ಯತೆ ಮತ್ತು ಏಕತೆ ಹೆಣ್ಣಿನಿಂದ ಸಾಧ್ಯ ಎಂದರು.
ಲವ್ ಜಿಹಾದ್ ದೇಶಕ್ಕೆ ಅಂಟಿದ ಪಿಡುಗು: ಚೈತ್ರಾ ಕುಂದಾಪುರ
ಮಹಾಸಾದ್ವಿ ಅಕ್ಕಮಹಾದೇವಿ(Mahasadhvi akkamahadevi) ನಾಡಿನಲ್ಲಿ ಜನಿಸಿದ ನಾವೆಲ್ಲರೂ ಶ್ರೇಷ್ಠರು. ಶರಣರು, ಸಂತರ ಇರುವ ಅದ್ಭುತ ದೇಶ ಭಾರತವಾಗಿದೆ. ಹೆಣ್ಣು ಮಕ್ಕಳು ಬಡತನದಲ್ಲಿದ್ದರೂ ಅಸುರರನ್ನು ಸಂಹರಿಸುವ ಶಕ್ತಿಯಿರುತ್ತದೆ. ಧನ, ವಿದ್ಯೆ, ಕಲೆಯಲ್ಲೂ ಲಕ್ಷಿ ್ಮೕ, ಸರಸ್ವತಿಯಿದ್ದಾಳೆ. ಭೂಮಿ ತಾಯಿ, ಹೆಣ್ಣು, ಭರತ ಮಾತೆ ಹೆಣ್ಣು, ಮನೆಯ ಕಳಶ ಹೆಣ್ಣು ಪ್ರತಿ ಪುರುಷನ ಅಭಿವೃದ್ಧಿಯ ಹಿಂದೆ ಓರ್ವ ಮಹಿಳೆಯಿದ್ದಾಳೆ. ಹೆಣ್ಣಿಲ್ಲದ ಪುರುಷರ ಜೀವನ ಸಂಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದರು.
ಎಲ್ಲ ಕಟುಂಬದ ಸದಸ್ಯರು ಒಟ್ಟಿಗೆ ಕೂತು ಆಹಾರ ಸೇವಿಸಬೇಕು. ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಹೋಗಬೇಕು. ತಾಯಂದಿರು, ಹೆಣ್ಣು ಮಕ್ಕಳು ಹಣೆಗೆ ಕುಂಕುಮವಿಡಬೇಕು. ಮಕ್ಕಳು ಎಷ್ಟೇ ಓದಿ ಎಲ್ಲಿಯಾದರೂ ಕೆಲಸಕ್ಕೆ ಹೋಗಲಿ. ಅವರು ಮತ್ತೆ ನಾವು ಜನಿಸಿದ ನೆಲಕ್ಕೆ ಮರಳಬೇಕು ಎನ್ನುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿಸಬೇಕು. ಗಂಡಿಗಿಂತ ಹೆಣ್ಣು ಶ್ರೇಷ್ಠ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.
ಯಾದಗಿರಿ ವಾಂತಿಭೇದಿ ಪ್ರಕರಣ: ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ, ಸಚಿವ ಚವ್ಹಾಣ್
ಕಡ್ಲೆಪ್ಪನವರ ಮಠಾಧೀಶ ಪ್ರಭುಲಿಂಗ ಸ್ವಾಮೀಜಿ(Prabhulinga swamiji) ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ವೀರೇಶ ನಿಷ್ಠಿ ದೇಶಮುಖ, ಬಸವರಾಜ ಜಮದ್ರಖಾನಿ, ಚನ್ನಬಸಪ್ಪ ಹೂಗಾರ, ಶರಣಪ್ಪ ಹಳ್ಳದ, ದೊಡ್ಡಪ್ಪಗೌಡ ಪಾಟೀಲ್, ರಾಚಯ್ಯಸ್ವಾಮಿ ಬಲಶಟ್ಟಿಹಾಳ, ದೇವು ಹೆಬ್ಬಾಳ, ಸಂದೀಪ ಜೋಶಿ, ಸಂಗನಗೌಡ ಪಾಟೀಲ್, ನಿಟಲಾಕ್ಷ ಪಂಚಾಂಗಮಠ, ಪ್ರಸನ್ನ ಹೆಡಗಿನಾಳ, ಬಸವರಾಜ ಜಾಲಹಳ್ಳಿ, ಸಿದ್ದಲಿಂಗಯ್ಯ ಸ್ವಾಮಿ ಶಾಸ್ತಿ್ರಗಳು ಬಾಚಿಮಟ್ಟಿ, ಶಿವಶರಣಬಸವ ಪುರಾಣಿಕ ಮಠ, ಬೋರಮ್ಮ ಯಾಳವಾರ, ಆರತಿ ಕಡ್ಲಪ್ಪನವರ ಮಠ, ನೀಲಮ್ಮ ಹೂಗಾರ, ಶರಣಮ್ಮ ಗುಮ್ಮ, ನಾಗರತ್ನ ನಿಂಬಾಳ ಇತರರಿದ್ದರು.