Farmers protest: ನಾಳೆ ರಾಷ್ಟ್ರೀಯ ಹೆದ್ದಾರಿಗಳು ಬಂದ್; ಸಂಚಾರ ಮಾರ್ಗಗಳಲ್ಲಿ ದೊಡ್ಡ ಬದಲಾವಣೆ!

Published : Oct 12, 2026, 09:59 PM IST
Highway Closed

ಸಾರಾಂಶ

ಕಬ್ಬು ಬೆಳೆಗಾರರ ದೆಹಲಿ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತ ಮುಖಂಡರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದಾರೆ. ಇದರಿಂದಾಗಿ ಧಾರವಾಡ, ಬೆಳಗಾವಿ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಹಲವು ಪ್ರಮುಖ ರಸ್ತೆಗಳ ಸಂಚಾರ ಮಾರ್ಗಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.

ಕಬ್ಬು ಬೆಳೆಗಾರರು ಹೋದ ದೆಹಲಿ ಸಭೆ ಇಂದು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರೈತ ಮುಖಂಡರು ಈಗಾಗಲೇ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಎದುರಾಗಿದೆ. ಈ ನಿಟ್ಟಿನಲ್ಲಿಎಲ್ಲೆಲ್ಲಿ ಏನೆನೂ ಆಗಿದೆ. ಯಾವ ರಸ್ತೆ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದಾರೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್!

ಹೌದು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಹಿನ್ನೆಲೆಯಲ್ಲಿ ಧಾರವಾಡದಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಸಂಪರ್ಕಕ್ಕಿಸುವ ಮಾರ್ಗಗಳ ಬದಲಾವಣೆಯಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರಿಂದಲೇ ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್‌ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುವುದಂತು ಖಚಿತ ವಾಗಿದೆ.

ಹೆದ್ದಾರಿ ಬಂದ್ ಹಿನ್ನೆಲೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ!

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿರುವುದರಿಂದ ವಾಹನ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಬೆಳಗಾವಿ ಜಿಲ್ಲಾ ಪೊಲೀಸರು ಭಾರೀ ಮತ್ತು ಲಘು ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿದ್ದಾರೆ. ಧಾರವಾಡದಿಂದ ಬೆಳಗಾವಿಗೆ ಬರುವ ವಾಹನಗಳು ಧಾರವಾಡ - ಅಳ್ನಾವರ - ಖಾನಾಪುರ ಮಾರ್ಗವಾಗಿ ಬೆಳಗಾವಿ ತಲುಪಬೇಕು. ಧಾರವಾಡದಿಂದ ಗೋಕಾಕ್ ಕಡೆಗೆ ಹೋಗುವ ವಾಹನಗಳು ಧಾರವಾಡ - ಬೆಳವಡಿ - ಬೈಲಹೊಂಗಲ ಮಾರ್ಗವನ್ನು ಬಳಸಬೇಕು. ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆಗೆ ಬರುವ ಭಾರೀ ವಾಹನಗಳು ಕಾಗಲ್ - ನಿಪ್ಪಾಣಿ - ಚಿಕ್ಕೋಡಿ - ಗೋಕಾಕ್ ಮಾರ್ಗವಾಗಿ ಧಾರವಾಡಕ್ಕೆ ಸಂಚರಿಸಬೇಕು.

ಈ ಹಿಂದೆ ಏನಾಗಿತ್ತು?

ಕಬ್ಬು ಬೆಳೆಗಾರರು, ಕಬ್ಬು ಹಾಗೂ ಸಕ್ಕರೆ ಬೆಲೆ ಹೆಚ್ಚಿಸಬೇಕು ಆಗ್ರಹಿಸಿ ಹುಬ್ಬಳ್ಳಿ ಚನ್ನಮ್ಮ ಸರ್ಕಲ್‌ನಲ್ಲಿ ಲಕ್ಷಾಂತರ ರೈತರ ಸೇರುವ ಮೂಲಕ ಸರ್ಕಾರಕ್ಕೆ ಕೇಂದ್ರ ಜೋಶಿಗೆ ಅಂದೇ ಎಚ್ಚರಿಕೆ ನೀಡಲಾಗಿತ್ತು. ಅಂದು ಹೋರಾಟ ತೀವ್ರ ಸ್ವರೂಪದಲ್ಲಿ ಹೆಚ್ಚಾದಾಗ, ಬ್ಯಾರಿಕೇಡ್ ಮುರಿದು, ಜೋಶಿ ಮನೆಗೆ ಮುತ್ತಿಗೆ ಹಾಕಲಾಯ್ತು, ಆಗ ಸ್ವತಃ ಜೋಶಿ ಅವರೇ, ಅ.12ಕ್ಕೆ ರೈತ ನಿಯೋಗ ಕರೆಸಿ ದೆಹಲಿಯಲ್ಲಿ ಸಭೆ ಮಾಡೋದಾಗಿತ್ತು. ಆದರೆ ಆ ಸಭೆ ವಿಫಲವಾಗಿದ್ದ ಕಾರಣದಿಂದ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

North Karnataka: ಯಾವ ಉತ್ತರ ಕರ್ನಾಟಕ ಭಾಷೆ ಎಂದ ವಿಚಾರ; ಪ್ರದೀಪ ವಿರುದ್ಧ ಉತ್ತರದಲ್ಲಿ ಎಲ್ಲೆಡೆ ಆಕ್ರೋಶ! ಮನೆ ಮುತ್ತಿಗೆಗೆ ಪ್ಲಾನ್?
ನಟಿ ಅನುಷ್ಕಾ ಶೆಟ್ಟಿ ಸಹೋದರ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾಗಿ ಮರು ನೇಮಕ