ನಾನು ಸಚಿವನಾಗಲು ಅವರೇ ಕಾರಣ : ನಾರಾಯಣಗೌಡ

By Kannadaprabha News  |  First Published Oct 20, 2020, 10:01 AM IST

ನಾನು ಸಚಿವನಾಗಲು ಅವರೇ ಕಾರಣ ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ. 


ಶಿವಮೊಗ್ಗ (ಅ.20): ಪೌರಾಡಳಿತ ಸಚಿವ ನಾರಾಯಣಗೌಡ ಅವರು ಮುಖ್ಯಮಂತ್ರಿ ಸಮ್ಮುಖದಲ್ಲೇ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕೊಂಡಾದಿದ್ದಾರೆ. ತಾವು ಶಾಸಕ, ಸಚಿವನಾಗಿ ಆಯ್ಕೆಯಾಗಿ ಈ ಸ್ಥಾನದಲ್ಲಿ ನಿಲ್ಲಲು ವಿಜಯೇಂದ್ರ ಅವರೇ ಕಾರಣ ಎಂದು ಹೊಗಳಿದ್ದಾರೆ.

ಶಿಕಾರಿಪುರದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾನು ಈ ಸ್ಥಾನದಲ್ಲಿ ನಿಲ್ಲಲು ಬಿ.ವೈ. ವಿಜಯೇಂದ್ರ ಅವರೇ ಕಾರಣ. ಅವರ ಪರಿಶ್ರಮದಿಂದಾಗಿ ತಮಗೆ ಗೆಲವು ದೊರಕಿದೆ.

Tap to resize

Latest Videos

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರ್ಪಡೆ...

ರಾಜ್ಯದ ಈ ಹಿಂದಿನ ಮುಖ್ಯಮಂತ್ರಿಗಳು ಕೆ.ಆರ್‌.ಪೇಟೆ ತಾಲೂಕು ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದರು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟುಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

click me!