ವಿಜಯಪುರ ನಗರಕ್ಕೆ ಆಗಮಿಸಿದ ಯಡೂರಿನಿಂದ ಶ್ರೀಶೈಲಕ್ಕೆ ತೆರಳುತ್ತಿರುವ ನಂದಿಸೇನೆ ರಥಯಾತ್ರೆ

Published : Mar 09, 2026, 11:26 AM IST
Srishaila

ಸಾರಾಂಶ

ಯಡೂರಿನಿಂದ ಶ್ರೀಶೈಲದವರೆಗೆ ಸಾಗುತ್ತಿರುವ ನಂದಿಸೇನೆ ರಥಯಾತ್ರೆಯು ವಿಜಯಪುರ ನಗರಕ್ಕೆ ಆಗಮಿಸಿತು. ಜೋಡೆತ್ತಿನ ಕೃಷಿಕರ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ಅವರಿಗೆ ಮಾಸಿಕ ₹11,000 ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.

ವಿಜಯಪುರ: ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಿದ ನಂದಿಸೇನೆ ರಥಯಾತ್ರೆ ವಿಜಯಪುರ ನಗರಕ್ಕೆ ಅಗಮಿಸಿತು. ಶ್ರೀರಾಮನವಮಿ ಉತ್ಸವ ಸಮಿತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಗರಕ್ಕೆ ಸ್ವಾಗತಿಸಿ ಬೀಳ್ಕೊಡಲಾಯಿತು.

ನಂದಿ ಸೇನೆ ರಥಯಾತ್ರೆಯ ಮೂಲ ಉದ್ದೇಶ

ಸಮಾಜ ಸೇವಕ ಉಮೇಶ ವಂದಾಲ ಮಾತನಾಡಿ, ಯಡೂರದಿಂದ ಶ್ರೀಶೈಲದ ವರೆಗೆ ಜರಗುತ್ತಿರುವ ನಂದಿ ಸೇನೆ ರಥಯಾತ್ರೆಯ ಮೂಲ ಉದ್ದೇಶ ಜೋಡೆತ್ತಿನ ಕೃಷಿಕರ ಮೇಲೆ ದೇಶದ ಭವಿಷ್ಯ ನಿಂತಿದೆ ಎಂಬುವುದರ ಕುರಿತು ಜನಜಾಗೃತಿ ಮೂಡಿಸುವುದಾಗಿದೆ. ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಯೋಜನೆಗಳು ಜಾರಿ ಮಾಡುವ ಅವಶ್ಯಕತೆಯಿದೆ. ನಂದಿ ಸೇನೆ ಹಕ್ಕೊತ್ತಾಯದಂತೆ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11,000 ಪ್ರೋತ್ಸಾಹ ಧನ ನೀಡಬೇಕಾದ ಅವಶ್ಯಕತೆಯಿದೆ ಎಂದರು.

ಇದನ್ನೂ ಓದಿ: Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ

ನಂದಿ ಕೂಗು ಅಭಿಯಾನ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎಸ್.ಜಿ.ನಾಡಗೌಡ, ನಿವೃತ್ತ ಕೃಷಿ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ‌, ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿದರು.

ಈ ವೇಳೆ ಶಿವಾನಂದ ಬುಯ್ಯಾರ, ಬಸವರಾಜ‌ ಮಾಳಗೊಂಡ, ಅಭಿಷೇಕ ಬಿರಾದಾರ, ಬಸವರಾಜ ಕೋನರಡ್ಡಿ, ಅರವಿಂದ ಕವಲಗಿ, ಮಂಜುನಾಥ ಹಿರೇಮಠ, ಓಂಕಾರ ಅಥರ್ಗಾ, ಭಾರತಿ ಬುಯ್ಯಾರ, ದಾನಯ್ಯ ಹಿರೇಮಠ, ಸಚಿನ ಸವನಹಳ್ಳಿ, ಸಂಪತರಾವ ಕುಲಕರ್ಣಿ, ರಾಜು ಮುಚ್ಚಂಡಿ, ಅಶೋಕ ಪೆದ್ದಿ, ಅರ್ಜುನ ಕವಟೆಕರ, ಸಂಗಮೇಶ ಉಕ್ಕಲಿ ಭಾಗವಹಿಸಿದ್ದರು.

ಇದನ್ನೂ ಓದಿ: 'ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ?' ಅಲ್ಪಸಂಖ್ಯಾತ ಅಭ್ಯರ್ಥಿ ಬೇಕೆಂದ ಜಮೀರ್‌ ವಿರುದ್ಧ ಎಸ್‌ಎಸ್ ಮಲ್ಲಿಕಾರ್ಜುನ್ ಕಿಡಿ

PREV
Read more Articles on
click me!

Recommended Stories

Bengaluru temperature: ಇದು ಗಾರ್ಡನ್ ಸಿಟಿನಾ, ಕಲ್ಬುರ್ಗಿನಾ? ಬೇಸಿಗೆ ಆರಂಭವಾದ ಹತ್ತೇ ದಿನದಲ್ಲಿ 33 ಡಿಗ್ರಿ ಬಿಸಿಲು!
Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ