ಗಬ್ಬೆದ್ದು ನಾರುತ್ತಿವೆ ಇಳಕಲ್ ಸಾರ್ವಜನಿಕ ಶೌಚಾಲಯಗಳು! ನಿಮ್ಮ ಊರು ಸಾರ್ವಜನಿಕ ಶೌಚಾಲಯ ಹೇಗಿದೆ?

Kannadaprabha News   | Kannada Prabha
Published : Mar 09, 2026, 07:25 AM IST
Ilkal public toiletIlkal s public toilets are stinking and in pathetic condition!

ಸಾರಾಂಶ

ಇಳಕಲ್ಲ ನಗರದಲ್ಲಿ ಸಾರ್ವಜನಿಕ ಮೂತ್ರಾಲಯಗಳ ತೀವ್ರ ಕೊರತೆ ಮತ್ತು ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಇದರಿಂದ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ನಗರಸಭೆಯು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಬಸವರಾಜ ಮಠದ

 ಇಳಕಲ್ಲನಗರಸಭೆ ಇರುವುದು ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು. ಆದರೆ ಇಳಕಲ್ಲ ನಗರದಲ್ಲಿರುವ ಎಲ್ಲ ಮೂತ್ರಾಲಯಗಳು ಗಬ್ಬೆದ್ದು ನಾರುತಿದ್ದರೂ ಇಳಕಲ್ಲ ನಗರಸಭೆ ಈ ಕಡೆ ಕಣ್ಣೆತ್ತಿಯೂ ನೋಡುತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ನಗರದ ಜನಸಂಖ್ಯೆ ಒಂದು ದಾಟಿದೆ. ಅಲ್ಲದೆ ಅಪಾರ ಸಂಖ್ಯೆಯ ಜನರು ತಾಲೂಕಿನ ಬೇರೆ ಬೇರೆ ಊರುಗಳಿಂದ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಷ್ಟೊಂದು ಜನಸಂಖ್ಯೆಗೆ ನಗರದಲ್ಲಿರುವುದು ಕೇವಲ ಮೂರು ಮೂತ್ರಾಲಯ ಮಾತ್ರ. ನಗರಸಭೆ ಎದುರು, ಕಾಯಿಪಲ್ಲೆ ಮಾರುಕಟ್ಟೆ, ನಂಬರ್‌ 10 ಸರಕಾರಿ ಶಾಲೆಯ ಬಳಿ ಮೂತ್ರಾಲಯ ಇವೆ. ಪುರುಷರ ಮೂತ್ರಾಲಯ ಮಾತ್ರ ಇವೆ. ಇವುಗಳೂ ಸಹ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಒಳಗೆ ಕಾಲಿಡದಂತಹ ಪರಿಸ್ಥಿತಿ ಇದೆ. ಹಾಗಾಗಿ ಮೂತ್ರ ಮಾಡಲು ಬರುವ ಜನರು ಈ ದುರವಸ್ಥೆ ನೋಡಿ ಮೂತ್ರಾಲಯ ಪಕ್ಕದ ಗೋಡೆಗೆ ಮೂತ್ರ ಮಾಡಿ ಹೋಗುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಮೂತ್ರಾಲಯಗಳ ಸೌಲಭ್ಯ ಇಲ್ಲದ್ದರಿಂದ ಸಾರ್ವಜನಿಕರು ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಗೊರಬಾಳ ನಾಕಾ ಬಳಿ ಜನದಟ್ಟನೆ ಇರುತ್ತದೆ. ಹಳ್ಳಿಗಳಿಂದ ಬರುವ ಪ್ರಯಾಣಿಕರೆಲ್ಲ ಇಲ್ಲಿಯೇ ಇಳಿದುಕೊಳ್ಳುತ್ತಾರೆ. ಬಸ್‌ನಿಂದ ಇಳಿದವರೇ ಮೂತ್ರಾಲಯ ಹುಡುಕುತ್ತಾರೆ. ಆದರೆ ಎಲ್ಲಿಯೂ ಕಾಣದಿದ್ದಾಗ ರಸ್ತೆಬದಿಗೆ ನಿಂತು ಮೂತ್ರ ವಿಸರ್ಜನೆ ಮಾಡುವುದು ಅನುವಾರ್ಯವಾಗಿದೆ. ಇನ್ನು ಮುಖ್ಯ ಬಜಾರ್‌ನಲ್ಲಿಯೂ ಮೂತ್ರಾಲಯ ಇಲ್ಲ. ಇಲ್ಲಿಯೂ ಜನರು ಸಂದಿಗೊಂದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ.

\Bಮೂಗು ಮುಚ್ಚಿಕೊಂಡೇ ಹೋಗಬೇಕು:\Bಇಳಕಲ್ಲ ನಗರದಲ್ಲಿ ಇರುವ ಮೂರು ಮೂತ್ರಾಲಯಗಳ ನಿರ್ವಹಣೆಯನ್ನು ನಗರಸಭೆ ಮಾಡುತ್ತಿಲ್ಲ. ನಿರ್ಮಾಣ ಮಾಡಿದಾಗಿನಿಂದ ಈವರೆಗೆ ಒಮ್ಮೆಯೂ ಸ್ವಚ್ಛತೆ ಕಂಡಿಲ್ಲ ಎನ್ನುತ್ತಾರೆ ಸಾರ್ವಜನಿಕರು. ನಗರಸಭೆ ಎದುರುಗಡೆಯೇ ಇರುವ ಮೂತ್ರಾಲಯವೂ ಗಬ್ಬೆದ್ದು ನಾರುತ್ತಿದೆ. ತನ್ನ ಎದುರಿಗಿರುವ ಮೂತ್ರಾಲಯವನ್ನೇ ಸ್ವಚ್ಛ ಮಾಡದ ನಗರಸಭೆಯವರು ಇನ್ನು ನಗರದ ವಿವಿಧೆಡೆ ಇರುವ ಮೂತ್ರಾಲಯದ ಕಡೆಗೆ ಕಣ್ಣೆತ್ತಿ ನೋಡುವರೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಸಾರ್ವಜನಿಕರಿಗಾಗಿ ಮೂತ್ರಾಲಯ ಸೌಲಭ್ಯ ಕಲ್ಪಿಸುವುದಾಗಿ ಹೇಳಿ ನಗರಸಭೆ ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುತ್ತದೆ. ತೆರಿಗೆ ವಸೂಲಿ ಮಾಡಲು ಮಾತ್ರ ಆಸಕ್ತಿ ತೋರುವ ನಗರಸಭೆ ಸೌಲಭ್ಯ ಕಲ್ಪಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಸ್ವಚ್ಛ ಭಾರತ ಯೋಜನೆಯಡಿ ಸರಕಾರದಿಂದ ಸಾಕಷ್ಟು ಅನುದಾನ ಪಡೆಯುತ್ತಿರುವ ನಗರಸಭೆ ಸಾರ್ವಜನಿಕರಿಗೆ ಉಚಿತ ಬೇಡ, ಹಣ ಕೊಟ್ಟಾದರೂ ಉಪಯೋಗಿಸುವ ವ್ಯವಸ್ಥಿತ ಮೂತ್ರಾಲಯಗಳ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

\Bಮಹಿಳೆಯರ ಪರದಾಟ ಕೇಳೋರಿಲ್ಲ:\Bಇನ್ನು ಮಹಿಳೆಯರ ಪರಿಸ್ಥಿತಿಯಂತೂ ಕೇಳುವುದೇ ಬೇಡ. ನಗರದಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಶೌಚಾಲಯ ಅಥವಾ ಮೂತ್ರಾಲುಗಳಿಲ್ಲ. ತಾಲೂಕು ಕೇಂದ್ರವಾದ ಇಳಕಲ್ಲ ನಗರಕ್ಕೆ ವಿವಿಧ ಕೆಲಸಗಳಿಗಾಗಿ, ವ್ಯಾಪಾರ ವಹಿವಾಟು ನಡೆಸಲು ಪುರುಷರಷ್ಟೇ ಮಹಿಳೆಯರು ನಗರಕ್ಕೆ ಬರುತ್ತಾರೆ. ಉಚಿತ್ರ ಪ್ರಯಾಣ ಆರಂಭದ ಬಳಿಕವಂತೂ ಪುರುಷರ ದುಪ್ಪಟ್ಟು ಪ್ರಯಾಣಿಕರು ನಗರಕ್ಕೆ ಬರುತ್ತಿದ್ದಾರೆ. ಪರಸ್ಥಳದಿಂದ ಬಂದ ಮಹಳೆಯರು ಮೂತ್ರ ಮಾಡಲು ಮೂತ್ರಾಲಯ ಹುಡಕಿ ಕಡೆಗೆ ಸಂದಿ ಗೊಂದಿಗಳಲ್ಲಿ ಹೋಗುವ ಪರಿಸ್ಥಿತಿ ಬಂದಿದೆ. ಶೌಚಾಲಯವೂ ಇಲ್ಲದಿರುವುದರಿಂದ ನೈಸರ್ಗಿಕ ಕರೆ ತೀರಿಸಲು ಹೆಣಗಾಡುವಂತಾಗಿದೆ.

ನಗರಸಭೆ ಜನಪ್ರತಿನಿಧಿಗಳ ಅವಧಿ ಮುಕ್ತಾಯವಾಗಿ ಅಧಿಕಾರಿಗಳ ಆಡಳಿತ ಇದ್ದು, ಸಾರ್ವಜನಿಕರ ಸಮಸ್ಯೆ ಆಲಿಸುವವರು ಇಲ್ಲದಂತಾಗಿದ್ದಾರೆ. ಯಾರಿಗೆ ಸಮಸ್ಯೆ ಹೇಳಿಕೊಳ್ಳುವುದು ಸಾರ್ವಜನಿಕರಿಗೆ ದಾರಿ ತೋರದಂತಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಕಚೇರಿಯಲ್ಲಿ ಕೂಡ್ರುವುದನ್ನು ಬಿಟ್ಟು ನಗರದಲ್ಲಿ ಅಡ್ಡಾಡಿ ಸಾರ್ವಜನಿಕರ ಸಮಸ್ಯೆ ಆಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

\Bನಗರದಲ್ಲಿ ಮೂತ್ರಾಲಯದ ಕೊರತೆಯ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಸಾರ್ವಜನಿಕರಿಂದಲೂ ಅನೇಕನ ಮನವಿಗಳು ಬಂದಿವೆ. ಈ ವರ್ಷದ ಬಜೆಟ್‌ ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಟ್ಟು ಮೂತ್ರಾಲಯಗಳ ಸಂಖ್ಯೆ ಹೆಚ್ಚಿಸಲಾಗುವುದು. ಈಗಿರುವ ಮೂತ್ರಾಲಯಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.

- ಶ್ರೀನಿವಾಸ ಜಾಧವ, ಪೌರಾಯುಕ್ತರು ಇಳಕಲ್ಲ ನಗರಸಭೆ

ಇಳಕಲ್ಲ ನಗರದ ಪ್ರಮುಖ ಕೇಂದ್ರವಾದ ಕಂಠಿ ವೃತ್ತದಲ್ಲಿ ಮೂತ್ರಾಲಯ ಸಮಸ್ಯೆ ಬಹಳಷ್ಟಿದೆ. ಹೊರಗಡೆಯಿಂದ ಬರುವ ಸಾರ್ವಜನಿಕರು, ಮಹಿಳೆಯರು ಮೂತ್ರ ಮಾಡಲು ಪರದಾಡುತ್ತಿದ್ದಾರೆ. ನಗರಸಭೆ ಹಣಕೊಟ್ಟು ಬಳಕೆ ಮಾಡುವ ಶೌಚಾಲಯದ ವ್ಯವಸ್ಥೆಯನ್ನಾದರೂ ಮಾಡಬೇಕು.

- ಶಂಕರ ಮದಿಕೇರಿ ಸಾರ್ವಜನಿಕರು\B

PREV
Read more Articles on
click me!

Recommended Stories

ವಿಜಯಪುರ ನಗರಕ್ಕೆ ಆಗಮಿಸಿದ ಯಡೂರಿನಿಂದ ಶ್ರೀಶೈಲಕ್ಕೆ ತೆರಳುತ್ತಿರುವ ನಂದಿಸೇನೆ ರಥಯಾತ್ರೆ
Bengaluru temperature: ಇದು ಗಾರ್ಡನ್ ಸಿಟಿನಾ, ಕಲ್ಬುರ್ಗಿನಾ? ಬೇಸಿಗೆ ಆರಂಭವಾದ ಹತ್ತೇ ದಿನದಲ್ಲಿ 33 ಡಿಗ್ರಿ ಬಿಸಿಲು!