SHIMUL: ಶಿಮುಲ್‌ನಿಂದ ನಂದಿನಿ ಸಿಹಿ ಲಸ್ಸಿ ಮಾರುಕಟ್ಟೆಗೆ

Published : Jan 18, 2023, 12:34 PM IST
SHIMUL: ಶಿಮುಲ್‌ನಿಂದ ನಂದಿನಿ ಸಿಹಿ ಲಸ್ಸಿ ಮಾರುಕಟ್ಟೆಗೆ

ಸಾರಾಂಶ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡ ಶಿಮುಲ್‌ ಇದೀಗ ‘ನಂದಿನಿ ಸಿಹಿ ಲಸ್ಸಿ’ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶಿಮುಲ್‌ ಅಧ್ಯಕ್ಷ ಶ್ರೀಪಾದ ರಾವ್‌ ಸೋಮವಾರ ಮಾಚೇನಹಳ್ಳಿಯ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಇದನ್ನು ಬಿಡುಗಡೆಗೊಳಿಸಿದರು.

ಶಿವಮೊಗ್ಗ (ಜ.೧೮) : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡ ಶಿಮುಲ್‌ ಇದೀಗ ‘ನಂದಿನಿ ಸಿಹಿ ಲಸ್ಸಿ’ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶಿಮುಲ್‌ ಅಧ್ಯಕ್ಷ ಶ್ರೀಪಾದ ರಾವ್‌ ಸೋಮವಾರ ಮಾಚೇನಹಳ್ಳಿಯ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಇದನ್ನು ಬಿಡುಗಡೆಗೊಳಿಸಿದರು.

ಶಿಮುಲ್‌(SHIMUL) PSSC-22000-/5.1_** ಧೃಡೀಕರಣ ಪಡೆದಿದ್ದು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಈಗಾಗಲೇ ಶಿಮುಲ್‌ನಲ್ಲಿ ಸಿಹಿ ಉತ್ಪನ್ನಗಳಾದ ಪೇಡ, ಮೈಸೂರು ಪಾಕ್‌, ಗೊಡಂಬಿ ಬರ್ಫಿ, ನಂದಿನಿ ಬೈಟ್‌, ಪನ್ನೀರ್‌ ಹಾಗೂ ಪೊ›ಬೈಯೊಟಿಕ್‌ ಗುಣಲಕ್ಷಣವಿರುವ ಮೊಸರು ಮಸಾಲ ಮಜ್ಜಿಗೆ ಉತ್ಪಾದನೆ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ಈ ಎಲ್ಲ ಉತ್ಪನ್ನಗಳ ಕುರಿತು ಗ್ರಾಹಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಹೊಸ ಉತ್ಪನ್ನವಾಗಿ ಮೊಸರು ಆಧಾರಿತ ಸಿಹಿ ಲಸ್ಸಿಯನ್ನು ಜ.16ರಿಂದ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಶ್ರೀಪಾದ ರಾವ್‌ ಹೇಳಿದರು.

ನಂದಿನಿ-ಅಮುಲ್‌ ಪ್ರತ್ಯೇಕ ಅಸ್ತಿತ್ವ ಹೊಂದಿರಲಿವೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಉಪಾಧ್ಯಕ್ಷ ಎಚ್‌.ಕೆ. ಬಸಪ್ಪ, ನಿರ್ದೇಶಕರಾದ ಸಿ.ವೀರಭದ್ರಬಾಬು, ಡಿ.ಆನಂದ, ವಿದ್ಯಾಧರ, ಜಗದೀಶಪ್ಪ ಬಣಕಾರ್‌, ಟಿ.ಶಿವಶಂಕರಪ್ಪ, ಪಿ.ತಿಪ್ಪೇಸ್ವಾಮಿ, ಎಚ್‌.ಬಿ. ದಿನೇಶ್‌, ಬಿ.ಜಿ.ಬಸವರಾಜಪ್ಪ, ಕೆ.ಎ. ತಾರಾನಾಥ, ಕೆ.ಎನ್‌. ಸೋಮಶೇಖರಪ್ಪ, ಜಿ.ಪಿ. ಯಶವಂತರಾಜು, ಎನ್‌.ಎಚ್‌. ಭಾಗ್ಯ, ಎಂ.ಸಿದ್ಧಲಿಂಗಪ್ಪ, ಎನ್‌.ಡಿ. ಹರೀಶ್‌, ವ್ಯವಸ್ಥಾಪಕ ನಿರ್ದೇಶರಾದ ಡಾ. ಕೆ.ಎಸ್‌. ಬಸವರಾಜ, ಉಪನಿರ್ದೇಶಕ ಡಾ. ಎಸ್‌.ಬಿ.ಯಲಿ ಪಸಂ, ಉಪ ನಿಬಂಧಕ ವಾಸುದೇವ ಹಾಗೂ ಕಹಾಮದ ಪ್ರತಿನಿಧಿ ಬಿ.ಟಿ. ಕಿಶೋರ್‌ ಹಾಗೂ ಒಕ್ಕೂಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!