ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಿ ಪ್ರತಿ ಲೀಟರ್ ಹಾಲಿಗೆ .3 ಹೆಚ್ಚಳ ಮಾಡಲಾಗುವುದು. ಈ ದರ ಏರಿಕæ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕಿತ್ತೂರು (ಅ.31) : ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಿ ಪ್ರತಿ ಲೀಟರ್ ಹಾಲಿಗೆ .3 ಹೆಚ್ಚಳ ಮಾಡಲಾಗುವುದು. ಈ ದರ ಏರಿಕæ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Milk Price Rise: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಇಂದಿನಿಂದ ಹಾಲಿನ ದರ 3 ರೂ ಹೆಚ್ಚಳ..?
undefined
ಭಾನುವಾರ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿಕ್ರಾಸ್‌ನಲ್ಲಿ .10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿಶಿಥಲೀಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಂದಿನಿ ಹಾಲಿನ ದರ ಪರಿಷ್ಕರಣೆ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್‌ಗೆ ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವ ಸಲ್ಲಿಸಿವೆ. ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಹಾಲಿನ ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಶಿಥಲೀಕರಣಕ್ಕೆ ಚನ್ನಮ್ಮ ಹೆಸರು ನಾಮಕರಣ:
ಹೂಲಿಕಟ್ಟಿಶಿಥಲೀಕರಣ ಕೇಂದ್ರಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಹೂಲಿಕಟ್ಟಿಶಿಥಲೀಕರಣ ಕೇಂದ್ರದ 30 ಸಾವಿರ ಲೀಟರ್ ಹಾಲು ಶೇಖರಣೆ ಸಾಮರ್ಥ್ಯ ಹೊಂದಿದೆ. 5 ಎಕರೆ ಜಾಗಯಲ್ಲಿ .10 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗುವುದು. ಇದಕ್ಕೆ ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟದಿಂದ ತಲಾ .5 ಕೋಟಿ ವೆಚ್ಚ ಭರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ಹಾಲು ಶೇಖರಣೆ ಸಾಮರ್ಥ್ಯವನ್ನು 60 ಸಾವಿರ ಲೀಟರ್‌ಗೆ ವಿಸ್ತರಿಸಲಾಗುವುದು. ಹಸು ಮತ್ತು ಎಮ್ಮೆ ಹಾಲವನ್ನು ಪ್ರತ್ಯೇಕವಾಗಿ ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರೇ ನಮ್ಮ ಆಸ್ತಿ:
ರಾಜ್ಯದಲ್ಲಿ ಒಟ್ಟು 16 ಜಿಲ್ಲಾ ಹಾಲು ಒಕ್ಕೂಟಗಳಿದ್ದು, .20 ಸಾವಿರ ಕೋಟಿ ವ್ಯವಹಾರ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು. ಲಾಭಾಂಶವನ್ನು ರೈತರಿಗೆ ನೀಡಲು ನಾವು ಬದ್ಧರಿದ್ದೇವೆ. ರೈತರೇ ನಮ್ಮ ಆಸ್ತಿಯಾಗಿದ್ದಾರೆ. ಹೂಲಿಕಟ್ಟಿಯಲ್ಲಿ ಹಾಲಿನ ಶಿಥಲೀಕರಣ ಮತ್ತು ಸಂಸ್ಕರಣ ಘಟಕ ಸ್ಥಾಪಿಸುವಂತೆ 25 ವರ್ಷಗಳಿಂದ ಬೇಡಿಕೆ ಇತ್ತು. ಈ ಬೇಡಿಕೆಯನ್ನು ನನ್ನ ಅವಧಿಯಲ್ಲಿ ಈಡೇರಿಸುವ ಸೌಭಾಗ್ಯ ದೊರೆತಿರುವುದು ನನ್ನ ಪುಣ್ಯ. ನನ್ನ ಅವಧಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗಿರುವುದು ನನಗೆ ಖುಷಿ ತಂದಿದೆ. ಇದರಿಂದಾಗಿ ಬೈಲಹೊಂಗಲ, ಖಾನಾಪುರ ಮತ್ತು ಬೆಳಗಾವಿಗೆ ಅನುಕೂಲವಾಗಲಿದೆ. ಸಾಗಾಣಿಕೆ ವೆಚ್ಚ ಉಳಿಯಲಿದೆ. ಈ ಭಾಗದಲ್ಲಿ 75 ಸಹಕಾರಿ ಸಂಘಗಳಿವೆ. 15308 ಹಾಲಿನ ಸಂಗ್ರಹವಿದೆ. ಗುಣಮಟ್ಟಕಾಪಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕೆಎಂಎಫ್ ನೌಕರರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ: ಹೈಕೋರ್ಟ್
ನಂದಿನಿ ಮಿಲ್ಕ್ ಪ್ಲಾಂಟ್ ನಿರ್ಮಿಸುವ ಗುರಿ
ಉತ್ತರ ಕರ್ನಾಟಕ ಭಾಗದ ರೈತರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ರೈತರ ಹಿತಾಸಕ್ತಿಗೆ ಬದ್ಧರಾಗಿ ನಾವು ಕೆಲಸ ಮಾಡುತ್ತಿದ್ದೇವೆ. ರೈತರ ಅಭಿವೃದ್ಧಿಯೇ ನಮ್ಮ ಗುರಿ. .400 ಕೋಟಿ ಅಂದಾಜು ವೆಚ್ಚದಲ್ಲಿ ಬೆಳಗಾವಿಯಲ್ಲಿ ನಂದಿನಿ ಮಿಲ್‌್ಕ ಪ್ಲಾಂಟ್ ನಿರ್ಮಿಸುವ ಯೋಜನೆಯಿದೆ. ಇದರಿಂದಾಗಿ 500 ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಯುವಕರಿಗೆ ಉದ್ಯೋಗ ಸೃಷ್ಟಿಮಾಡುವುದರ ಜೊತೆಗೆ ಹೈನುಗಾರರ ಹಿತಕ್ಕೂ ನಾವು ಬದ್ಧರಾಗಿದ್ದೇವೆ. ದಕ್ಷಿಣ ಕರ್ನಾಟಕ ರೈತರು ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗೆ ರೈತರು ಹೆಚ್ಚು ಒತ್ತು ನೀಡಿದ್ದಾರೆ. ಇದರ ಜೊತೆಗೆ ಹೈನುಗಾರಿಕೆಗೂ ಒತ್ತು ನೀಡಬೇಕು. ಹೈನುಗಾರಿಕೆ ಉತ್ಪಾದನೆಯಲ್ಲಿ ದೇಶದಲ್ಲಿ ನಂ. 1 ಅಮೂಲ್ಯ ಇದ್ದರೆ, ನಂ. 2ರ ಸ್ಥಾನದಲ್ಲಿ ಕೆಎಂಎಫ್ ಇದೆ. ಕೆಎಂಎಫ್ ರೈತರ ಹಿತಾಸಕ್ತಿಗೆ ಬದ್ಧವಿದೆ. ಕೆಲವೊಂದು ಖಾಸಗಿ ಹಾಲು ಉತ್ಪಾದಕ ಸಂಘಗಳು ಇವೆ. ಅವುಗಳಿಗೆ ಆದ್ಯತೆ ನೀಡದೇ ಕೆಎಂಎಫ್‌ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಮನವಿ ಮಾಡಿದರು.