ಬೆಂಗಳೂರಿನಲ್ಲೀಗ 70 ಕಿಮೀ ಮಾರ್ಗ: ದೇಶಕ್ಕೆ ನಮ್ಮ ಮೆಟ್ರೋ ಶೀಘ್ರ ನಂ.2..!

Published : Mar 02, 2023, 06:51 AM IST
ಬೆಂಗಳೂರಿನಲ್ಲೀಗ 70 ಕಿಮೀ ಮಾರ್ಗ: ದೇಶಕ್ಕೆ ನಮ್ಮ ಮೆಟ್ರೋ ಶೀಘ್ರ ನಂ.2..!

ಸಾರಾಂಶ

ಬಹುತೇಕ ಮಾರ್ಚ್‌ ಮಧ್ಯಂತರದಲ್ಲಿ ಈ ಮಾರ್ಗ ಜನಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಇದರಿಂದಾಗಿ ಶೀಘ್ರವೇ ಬಿಎಂಆರ್‌ಸಿಎಲ್‌ ಹೈದ್ರಾಬಾದ್‌ ಮೆಟ್ರೋ ರೈಲ್ವೆಗಿಂತ ಕೊಂಚ ಹೆಚ್ಚಿನ ವ್ಯಾಪ್ತಿ ಹೊಂದಿದಂತಾಗಲಿದೆ. ಆದರೆ, ಬಿಎಂಆರ್‌ಸಿಎಲ್‌ ಹಾಗೂ ಎಚ್‌ಎಂಆರ್‌ ಎರಡೂ ಸುಮಾರಾಗಿ 69 ಕಿ.ಮೀ. ಉದ್ದದ ವ್ಯಾಪ್ತಿಯಿಂದ ದೇಶದಲ್ಲಿ ಮೆಟ್ರೋ ರೈಲ್ವೆ ಸೇವೆಯಲ್ಲಿ ಎರಡನೇ ಸ್ಥಾನ ಹಂಚಿಕೊಂಡಂತಾಗಲಿದೆ.

ಬೆಂಗಳೂರು(ಮಾ.02):  ಮೆಟ್ರೋ ರೈಲ್ವೆ ವ್ಯವಸ್ಥೆಯಲ್ಲಿ ದೇಶದಲ್ಲೆ 2ನೇ ಅತೀ ಉದ್ದದ ಮಾರ್ಗ ಹೊಂದಿರುವ ಹೆಗ್ಗಳಿಕೆಗೆ ಶೀಘ್ರವೇ ‘ನಮ್ಮ ಮೆಟ್ರೋ’ ಭಾಜನವಾಗಲಿದೆ. ಸದ್ಯ ಹೈದ್ರಾಬಾದ್‌ ಮೆಟ್ರೋ ರೈಲ್ವೆ (69 ಕಿಮೀ) ಜೊತೆಗೆ ಈಗ 3ನೇ ಸ್ಥಾನದಲ್ಲಿರುವ ಬಿಎಂಆರ್‌ಸಿಎಲ್‌ ವರ್ಷಾಂತ್ಯಕ್ಕೆ ಅದನ್ನೂ ಹಿಂದಿಕ್ಕುವ ನಿರೀಕ್ಷೆಯಿದೆ. ಸದ್ಯ ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ ನೇರಳೆ ಮಾರ್ಗ (25.63) ಹಾಗೂ ನಾಗಸಂದ್ರದಿಂದ ರೇಷ್ಮೆ ಕೇಂದ್ರದವರೆಗೆ ಹಸಿರು ಮಾರ್ಗ (30.4) ಸೇರಿ ಒಟ್ಟಾರೆ 56 ಕಿಮೀ ನಷ್ಟುಮೆಟ್ರೋ ಸೇವೆಯಲ್ಲಿದೆ. ಇದರ ಜತೆಗೀಗ ನೇರಳೆ ಮಾರ್ಗದ ವಿಸ್ತರಿತ ಕೆ.ಆರ್‌.ಪುರಂ-ವೈಟ್‌ಫೀಲ್ಡ್‌ 13.71ಕಿಮೀ ಸೇರ್ಪಡೆಯಿಂದ ಒಟ್ಟಾರೆ 69.71 ಕಿಮೀ ಉದ್ದದ ಮೆಟ್ರೋ ಜನಬಳಕೆಗೆ ಮುಕ್ತವಾದಂತಾಗಲಿದೆ.

ಹೈದ್ರಾಬಾದ್‌ ಮೆಟ್ರೋ ರೈಲ್ವೆ (ಎಚ್‌ಎಂಆರ್‌) ಮೂರು ಮಾರ್ಗಗಲ್ಲಿ 69.2 ಕಿಮೀ ಉದ್ದದ ವ್ಯಾಪ್ತಿಯಲ್ಲಿದ್ದು, ದೆಹಲಿ ಹೊರತುಪಡಿಸಿದರೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಕೆ.ಆರ್‌.ಪುರಂ-ವೈಟ್‌ಫೀಲ್ಡ್‌ ಮಾರ್ಗದ ನಡುವಣ ಸುರಕ್ಷತಾ ತಪಾಸಣೆ ನಡೆಸಿರುವ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಕೆಲ ಸೂಚನೆಗಳೊಂದಿಗೆ ಸಂಚಾರ ನಡೆಸಲು ಅನುಮತಿ ನೀಡಿದ್ದಾರೆ.

ತಮಿಳುನಾಡಿನ ಹೊಸೂರು ಮುನ್ನ ನಮ್ಮಲ್ಲೇ ಮೆಟ್ರೋ ವಿಸ್ತರಿಸಿ: ಕನ್ನಡಿಗರ ಆಗ್ರಹ

ಬಹುತೇಕ ಮಾರ್ಚ್‌ ಮಧ್ಯಂತರದಲ್ಲಿ ಈ ಮಾರ್ಗ ಜನಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಇದರಿಂದಾಗಿ ಶೀಘ್ರವೇ ಬಿಎಂಆರ್‌ಸಿಎಲ್‌ ಹೈದ್ರಾಬಾದ್‌ ಮೆಟ್ರೋ ರೈಲ್ವೆಗಿಂತ ಕೊಂಚ ಹೆಚ್ಚಿನ ವ್ಯಾಪ್ತಿ ಹೊಂದಿದಂತಾಗಲಿದೆ. ಆದರೆ, ಬಿಎಂಆರ್‌ಸಿಎಲ್‌ ಹಾಗೂ ಎಚ್‌ಎಂಆರ್‌ ಎರಡೂ ಸುಮಾರಾಗಿ 69 ಕಿ.ಮೀ. ಉದ್ದದ ವ್ಯಾಪ್ತಿಯಿಂದ ದೇಶದಲ್ಲಿ ಮೆಟ್ರೋ ರೈಲ್ವೆ ಸೇವೆಯಲ್ಲಿ ಎರಡನೇ ಸ್ಥಾನ ಹಂಚಿಕೊಂಡಂತಾಗಲಿದೆ.

ಈ ವರ್ಷ ಸುಮಾರು 40 ಕಿ.ಮೀ. ಮಾರ್ಗ ಜನಬಳಕೆಗೆ ಮುಕ್ತವಾಗಲಿದೆ. ಹೊಸದಾದ ಹಳದಿ ಮಾರ್ಗದ ಆರ್‌.ವಿ.ರೋಡ್‌ - ಬೊಮ್ಮಸಂದ್ರವರೆಗಿನ 19 ಕಿಮೀ ಹಾಗೂ ನೇರಳೆ ಮಾರ್ಗದ ಬೈಯಪ್ಪನಹಳ್ಳಿ- ವೈಟ್‌ ಫೀಲ್ಡ್‌ 15 ಕಿಮೀ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರಲ್ಲಿ ಪ್ರಮುಖವಾಗಿ ಐಟಿ ಕಾರಿಡಾರ್‌ ಎಂದೇ ಕರೆಸಿಕೊಳ್ಳಲಿರುವ ವೈಟ್‌ಫೀಲ್ಡ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯನ್ನು ಕೂಡ ಮೆಟ್ರೋ ಸಂಪರ್ಕಿಸಲಿದೆ. ಇದರ ಜೊತೆಗೆ ಮೈಸೂರು ರಸ್ತೆಯ ಕೆಂಗೇರಿಯಿಂದ ಚಲ್ಲಘಟ್ಟವರೆಗೆ ಹಾಗೂ ಹಸಿರುವ ಮಾರ್ಗದ ಹೇಸರಘಟ್ಟ-ಮಾದವಾರವರೆಗಿನ 4 ಕಿ.ಮೀ. ಮಾರ್ಗದಲ್ಲಿಯೂ ಮೆಟ್ರೋ ಸಂಚರಿಸುವ ಸಾಧ್ಯತೆಯಿದೆ.

ಇನ್ನು, ಮೆಟ್ರೋ 2ನೇ ಹಂತದಲ್ಲಿ ಬಿಎಂಆರ್‌ಸಿಎಲ್‌ ಒಟ್ಟಾರೆ 72 ಕಿ.ಮೀ. ಮೆಟ್ರೋ ಜಾಲವನ್ನು ವಿಸ್ತರಿಸುತ್ತಿದ್ದು, ಕಾಳೇನ ಅಗ್ರಹಾರದಿಂದ-ನಾಗವಾರದವರೆಗಿನ 14 ಕಿಮೀ ಸುರಂಗ ಕೂಡ ಇದರಲ್ಲಿ ಸೇರಿದೆ.

ತಮಿಳುನಾಡಿನ ಹೊಸೂರಿಗೆ ಮೆಟ್ರೋ ರೈಲು: ಕನ್ನಡಿಗರ ಆಕ್ರೋಶ

ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ‘ಮಾಚ್‌ರ್‍ 15ರ ಬಳಿಕ ಕೆ.ಆರ್‌.ಪುರಂ-ವೈಟ್‌ಫೀಲ್ಡ್‌ ನಡುವಣ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ. ಇದರಿಂದ ಒಟ್ಟಾರೆ ನಾವು ಹೈದ್ರಾಬಾದ್‌ ಮೆಟ್ರೋಗೆ ಹತ್ತಿರವಾದಂತಾಗಲಿದ್ದೇವೆ. ಒಟ್ಟಾರೆ ಈ ವರ್ಷ 40 ಕಿ.ಮೀ. ಜನತೆಗೆ ಲಭ್ಯವಾಗಲಿದೆ. ನಿರೀಕ್ಷೆಯಂತೆ ಈ ಮಾರ್ಗಗಳಲ್ಲಿ ಸಂಚಾರ ಆರಂಭವಾದರೆ ದೆಹಲಿ ಬಳಿಕ ಬೆಂಗಳೂರು ಹೆಚ್ಚಿನ ಜಾಲ ಹೊಂದಿದ ಮೆಟ್ರೋ ಎನ್ನಿಸಿಕೊಳ್ಳಲಿದೆ’ ಎಂದು ತಿಳಿಸಿದರು.

ಕೆ.ಆರ್‌.ಪುರಂ-ವೈಟ್‌ಫೀಲ್ಡ್‌ ಮಾರ್ಗ ಸೇರ್ಪಡೆಯಿಂದ ನಾವೀಗ ಹೈದ್ರಾಬಾದ್‌ ಮೆಟ್ರೋಗೆ ಸಮವಾಗಿದ್ದೇವೆ. ಈ ವರ್ಷಾಂತ್ಯಕ್ಕೆ 40ಕಿಮೀ ಸೇರ್ಪಡೆ ಆಗುತ್ತಿದ್ದು, ದೇಶದಲ್ಲೆ 2ನೇ ಸ್ಥಾನಕ್ಕೇರಲಿದ್ದೇವೆ ಅಂತ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ತಿಳಿಸಿದ್ದಾರೆ. 

ಮೆಟ್ರೋ ಮಾರ್ಗ ಕಿಮೀ

ದೆಹಲಿ ಮೆಟ್ರೋ 349
ಹೈದ್ರಾಬಾದ್‌ 69.1
ನಮ್ಮ ಮೆಟ್ರೋ 56.1 ( 69.71)
ಚೆನ್ನೈ ಮೆಟ್ರೋ 54.65
ಕೊಲ್ಕತಾ ಮೆಟ್ರೋ 47
ನಾಗಪುರ ಮೆಟ್ರೋ 38.22

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ