ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಬಿಡದಿಯನ್ನ ಗ್ರೇಟರ್ ಬ್ಯಾಂಗಳೂರಿಗೆ ಸೇರಿಸ್ತಿದ್ದೇವೆ. ಚುನಾವಣೆ ಆದಮೇಲೆ ಈ ವಿಚಾರ ಮಾತನಾಡುತ್ತೇನೆ. ಬಿಡದಿಗೆ ಮೆಟ್ರೋ ಬಂದೇ ಬರುತ್ತದೆ.
ಬೆಂಗಳೂರು (ಫೆ.12): ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಬಿಡದಿಯನ್ನ ಗ್ರೇಟರ್ ಬ್ಯಾಂಗಳೂರಿಗೆ ಸೇರಿಸ್ತಿದ್ದೇವೆ. ಚುನಾವಣೆ ಆದಮೇಲೆ ಈ ವಿಚಾರ ಮಾತನಾಡುತ್ತೇನೆ. ಬಿಡದಿಗೆ ಮೆಟ್ರೋ ಬಂದೇ ಬರುತ್ತೆ. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೆಡಿ ಮಾಡ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಾರಿಗೆ ಇಲಾಖೆಯಿಂದ ರಾಮನಗರ ಜಿಲ್ಲೆಗೆ ನೀಡಲಾದ ಕೆಎಸ್‌ಆರ್‌ಟಿಸಿಯ ನೂತನ ವಿನ್ಯಾಸದ 25 ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಯಾವ ಸರ್ಕಾರವೂ ಗ್ಯಾರಂಟಿ ಜಾರಿ ಮಾಡಿಲ್ಲ. ವು ಕಷ್ಟಪಟ್ಟು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಡದಿಯನ್ನ ಗ್ರೇಟರ್ ಬ್ಯಾಂಗಳೂರಿಗೆ ಸೇರಿಸ್ತಿದ್ದೇವೆ. ನಾವೆಲ್ಲ ಬೆಂಗಳೂರು ಜಿಲ್ಲೆಯವರು. ಚುನಾವಣೆ ಆದಮೇಲೆ ಈ ವಿಚಾರ ಮಾತನಾಡುತ್ತೇನೆ. ಬಿಡದಿಗೆ ಮೆಟ್ರೋ ಬಂದೇ ಬರುತ್ತದೆ. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೆಡಿ ಮಾಡ್ತಿದ್ದೇವೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕೊಡಗು ಬೈಕ್ ಗುದ್ದಿ ಯುವಕ ಸಾವು; ಈ ಅಪಘಾತಕ್ಕೆ ನಾನೇ ಕಾರಣವೆಂದು ಬೈಕ್ ಸವಾರ ಆತ್ಮಹತ್ಯೆ!
ರಾಜ್ಯದಲ್ಲಿ ರಾಮನಗರ ಜಿಲ್ಲೆಯನ್ನ ಮಾಡೆಲ್ ಜಿಲ್ಲೆಯಾಗಿ ಮಾಡ್ತೀವಿ. ಸಂಸದ ಡಿ.ಕೆ.ಸುರೇಶ್ ಇದಕ್ಕೆ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ನಾನು, ರಾಮಲಿಂಗಾರೆಡ್ಡಿ, ಸ್ಥಳೀಯ ಶಾಸಕರು ಸೇರಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಯಾವ ಯಾವ ಇಲಾಖೆಯಲ್ಲಿ ಏನೇನು ಯೋಜನೆ ಅನ್ನೋದನ್ನ ಚರ್ಚೆ ಮಾಡ್ತೀವಿ. ರಾಜ್ಯದ ಸಾರಿಗೆ ಇಲಾಖೆಗೆ ರಾಮಲಿಂಗಾರೆಡ್ಡಿ ಮಂತ್ರಿ ಆಗಿದ್ದಾರೆ. ರಾಜ್ಯಕ್ಕೆ 1 ಸಾವಿರ ಅಶ್ವಮೇಧ ಹೊಸ ಬಸ್ ಖರೀದಿ ಮಾಡ್ತಿದ್ದೀವಿ. ರಾಮನಗರದ 5 ತಾಲೂಕುಗಳಿಗೆ 100 ಬಸ್‌ಗಳನ್ನು ಮಂಜೂರು ಮಾಡಿದ್ದೇವೆ. ಸದ್ಯಕ್ಕೆ 25 ಬಸ್ ಗಳನ್ನ ನೀಡಿದ್ದೇವೆ. ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನದ ಬಸ್ ಗಳನ್ನ ನಾವು ಕೊಡ್ತಿದ್ದೇವೆ. ಎಲ್ಲರೂ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇಡೀ ದೇಶದಲ್ಲಿ ನಮ್ಮ ಸರ್ಕಾರದ ರೋಡ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ನಂಬರ್ ಓನ್ ಆಗಿದೆ. ಈಗಾಗಲೇ ನಮ್ಮ ಸರ್ಕಾರದಿಂದ ಜಾರಿಗೊಳಿಸಿದ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಸಾರಿಗೆ ಇಲಾಖೆಗೂ ಅಗತ್ಯ ಅನುದಾನ ಕೊಡ್ತಿದ್ದೀವಿ. ಹೆಣ್ಣುಮಕ್ಕಳು ಎಲ್ಲಾಕಡೆ ಓಡಾಡ್ತಿದ್ದಾರೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ 151 ಕೋಟಿ ಮಹಿಳೆಯರ ಸಂಚಾರ:
ಸರ್ಕಾರದ ಮೊದಲ ಗ್ಯಾರಂಟಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಂಟೇ ತಿಂಗಳಿಗೆ ಶಕ್ತಿ ಯೋಜನೆಯಡಿ 151 ಕೋಟಿ ನಾರಿಯರು ಸಂಚಾರ ಮಾಡಿದ್ದಾರೆ. ಸರ್ಕಾರದ ಮೊದಲ ಗ್ಯಾರೆಂಟಿಗೆ 150 ಕೋಟಿ ಮಹಿಳೆಯರು ಬೆಂಬಲ ನೀಡಿದ್ದಾರೆ. 2023ರ ಜೂ.11 ರಿಂದ 2024ರ ಫೆ.12ವರೆಗೆ 151 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. KSRTC, BMTC ಸೇರಿ ಎಲ್ಲಾ ಸಾರಿಗೆ ನಿಗಮಗಳ ಮೂಲಕ ಮಹಿಳೆಯರ ಪ್ರಯಾಣ ಮಾಡಿದ್ದಾರೆ.
ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಕೈ ಹಿಡಿದ ನಾರಿಯರು; 8 ತಿಂಗಳಲ್ಲಿ 151 ಕೋಟಿ ಮಹಿಳೆಯರ ಸಂಚಾರ
ಶಕ್ತಿ ಯೋಜನೆ ಜಾರಿಯಾಗಿ ಎಂಟು ತಿಂಗಳಿಗೆ 3,599 ಕೋಟಿ ರೂ. ವ್ಯಯ ಮಾಡಲಾಗಿದೆ. ಪ್ರತಿನಿತ್ಯ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್ ನಿಂದ 3,614 ಕೋಟಿ ವ್ಯಯವಾಗಿದೆ. ಕಳೆದ 244 ದಿನಗಳಲ್ಲಿ 151,35,86,738 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. (ಇಲ್ಲಿವರೆಗೆ 151,35,86,738 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದಿಂದ 3614,52,04,190 ಕೋಟಿ ರೂ. ಸರ್ಕಾರದ ಹಣ ವೆಚ್ಚವಾಗಿದೆ.