ವಿಶ್ವವಿದ್ಯಾಲಯಗಳಲ್ಲಿ ಇಂದಿರಾ ಕ್ಯಾಂಟೀನ್‌

By Kannadaprabha News  |  First Published Jun 15, 2023, 6:04 AM IST

ಕರ್ನಾಟಕ ಸರ್ಕಾರವು ಬಡವರು ಮತ್ತು ದುಡಿಯುವ ಕಾರ್ಮಿಕ ವರ್ಗದ ಜನರ ಹಸಿವನ್ನು ನೀಗಿಸಲು ಪ್ರಾರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳ ಬಲವನ್ನು ಇನ್ನೂ ಹೆಚ್ಚಿಸಬೇಕಿದೆ.


ಮೈಸೂರು :  ಕರ್ನಾಟಕ ಸರ್ಕಾರವು ಬಡವರು ಮತ್ತು ದುಡಿಯುವ ಕಾರ್ಮಿಕ ವರ್ಗದ ಜನರ ಹಸಿವನ್ನು ನೀಗಿಸಲು ಪ್ರಾರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳ ಬಲವನ್ನು ಇನ್ನೂ ಹೆಚ್ಚಿಸಬೇಕಿದೆ.

ಇನ್ನೊಂದು ಖುಷಿ ವಿಚಾರವೆಂದರೆ ರಾಜ್ಯಾದ್ಯಂತ ಮತ್ತಷ್ಟು ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇದರ ಜೊತೆಗೆ ರಾಜ್ಯದ ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ದೊಡ್ಡ ದೊಡ್ಡ ಕಾಲೇಜುಗಳಲ್ಲಿಯೂ ಕೂಡ ಆರಂಭಿಸಬೇಕು. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಸದ್ಯದಲ್ಲೇ ಇರುವ ಕ್ಯಾಂಪಸ್‌ನ ಕ್ಯಾಂಟೀನ್‌ಗಳಲ್ಲಿ ಕಾಫಿ ಟೀ ಮತ್ತು ಆಹಾರದ ಬೆಲೆ ತುಂಬಾ ದುಬಾರಿಯಾಗಿದೆ. ವಿದ್ಯಾರ್ಥಿಗಳ ಹಸಿವನ್ನು ನೀಗಿಸಲು ಕ್ಯಾಂಪಸ್‌ನಲ್ಲಿ ಹೊಸದಾದ ಕ್ಯಾಂಟೀನ್‌ ತೆರೆಯಬೇಕು. ರಾಜ್ಯಾದ್ಯಂತ ಆಸ್ಪತ್ರೆ, ಬಸ್‌ ನಿಲ್ದಾಣ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕ್ಯಾಂಟೀನ್‌ ಸ್ಥಾಪಿಸಿದ ಹಾಗೆ ವಿಶ್ವವಿದ್ಯಾಲಯಗಳಲ್ಲಿಯು ಆರಂಭಿಸಬೇಕು.

Latest Videos

undefined

ಕ್ಯಾಂಟೀನಲ್ಲಿ ಆಹಾರದ ಗುಣಮಟ್ಟತೆ ಹಾಗೂ ಪ್ರಮಾಣ ಉತ್ತಮವಾಗಿರಬೇಕು. ಆಯಾ ಸ್ಥಳಗಳ ಸ್ಥಳೀಯ ಆಹಾರವನ್ನು ಒದಗಿಸಬೇಕು. ಕ್ಯಾಂಟೀನ್‌ ಮತ್ತು ಕ್ಯಾಂಟೀನ್‌ ನಲ್ಲಿರೋ ಪಾತ್ರೆಗಳನ್ನು ಸ್ವಚ್ಛತೆಯಿಂದ ಇರಿಸಬೇಕು. ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗು ಅನುಕೂಲವಾಗುತ್ತದೆ. ಅದಕ್ಕಾಗಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಬೇಕು.

- ಶ್ರೀಶೈಲ್‌ ಪಾಟೀಲ್‌, ಜೇವರ್ಗಿ

ಇಂದಿರಾ ಕ್ಯಾಂಟೀನ್ ಮರು ಚಾಲನೆ

ಬೆಂಗಳೂರು (ಜೂ.12) ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ರೂಪ ನೀಡಿ ಮರು ಚಾಲನೆ ನೀಡಲಾಗುತ್ತಿದ್ದು, ಆಯಾ ಪ್ರಾದೇಶಿಕತೆಗೆ ತಕ್ಕಂತೆ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಸಲು ನಿರ್ಧರಿಸಲಾಗಿದೆ.

ಜನರಿಗೆ ಕಡಿಮೆ ದರದಲ್ಲಿ ಆಹಾರ ನೀಡಲು 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಯೋಜನೆ(Indira canteen scheme) ಜಾರಿಗೊಳಿಸಿದ್ದರು. ಆದರೆ, ಕಳೆದ ಮೂರೂವರೆ ವರ್ಷಗಳಿಂದ ಕ್ಯಾಂಟೀನ್‌ಗಳು ನಿರ್ವಹಣೆ ಕೊರತೆಯಿಂದ ಜನರಿಗೆ ಸಮರ್ಪಕವಾಗಿ ಆಹಾರ ಪೂರೈಸುತ್ತಿಲ್ಲ. ಇದೀಗ ಇಂದಿರಾ ಕ್ಯಾಂಟೀನ್‌ಗಳನ್ನು ದುರಸ್ತಿಗೊಳಿಸಿ, ಹೊಸ ರೂಪದೊಂದಿಗೆ ಮತ್ತೆ ಆರಂಭಿಸಲಾಗುತ್ತಿದೆ. ಈ ಕುರಿತಂತೆ ಕ್ಯಾಂಟೀನ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇಂದಿರಾ ಕ್ಯಾಂಟೀನಲ್ಲಿ ಚಪಾತಿ, ಮುದ್ದೆ ಭಾಗ್ಯ?: ಹೊಸ ಆಹಾರದ ಮೆನು ಸಿದ್ಧಪಡಿಸುವಂತೆ ಸಿದ್ದು ಸೂಚನೆ

ಇಂದಿರಾ ಕ್ಯಾಂಟೀನ್‌ಗಳ ಮರು ಆರಂಭಕ್ಕೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳು ಸೇರಿದಂತೆ 170ಕ್ಕೂ ಹೆಚ್ಚಿನ ಇಂದಿರಾ ಕ್ಯಾಂಟೀನ್‌ಗಳಿವೆ. ಅವುಗಳಲ್ಲಿ ಬಹುತೇಕ ಕ್ಯಾಂಟೀನ್‌ಗಳು ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿವೆ. ಇದೀಗ ಸ್ಥಗಿತಗೊಂಡಿರುವ ಕ್ಯಾಂಟೀನ್‌ಗಳ ಪಟ್ಟಿಮಾಡಿ ಅವುಗಳಲ್ಲಿ ಮತ್ತೆ ಆಹಾರ ಪೂರೈಕೆ ಆರಂಭಿಸಬೇಕು. ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಹೊಸದಾಗಿ ಗುತ್ತಿಗೆದಾರರನ್ನು ನೇಮಿಸಬೇಕು ಎಂದು ತಿಳಿಸಿದರು.

ಕ್ಯಾಂಟೀನ್‌ಗಳಲ್ಲಿ ಪೂರೈಸುವ ಆಹಾರ ಕ್ರಮವನ್ನು ಬದಲಿಸಬೇಕು. ಪ್ರಮುಖವಾಗಿ ಉತ್ತರ ಕರ್ನಾಟಕದ ಕ್ಯಾಂಟೀನ್‌ಗಳಲ್ಲಿ ಅಲ್ಲಿನ ಆಹಾರವನ್ನೇ ಪೂರೈಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ, ಗುಣಮಟ್ಟಹಾಗೂ ಪ್ರಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಆಹಾರ ಪೂರೈಸಬೇಕು. ಜತೆಗೆ ಎಲ್ಲ ಕ್ಯಾಂಟೀನ್‌ಗಳಿಗೂ ಹೊಸದಾಗಿ ಮೆನು ಸಿದ್ಧಪಡಿಸಿ, ಅದನ್ನು ಪೂರೈಸಬೇಕು ಎಂದು ಸೂಚಿಸಿದರು.

click me!