ಪ್ರಾಚೀನ ಕಾಲದಲ್ಲಿಯೇ ಭಾರತದ ಶ್ರೀಮಂತಿಕೆ ವೈಭವವಿತ್ತು

By Kannadaprabha NewsFirst Published Jun 15, 2023, 5:59 AM IST
Highlights

ಪ್ರಾಚೀನ ಕಾಲದಲ್ಲಿಯೇ ಭಾರತದ ಶ್ರೀಮಂತಿಕೆಯ ವೈಭವವನ್ನು ಪಂಚತಂತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಡಾ. ಶತಾವಧಾನಿ ಆರ್‌. ಗಣೇಶ್‌ ತಿಳಿಸಿದರು.

  ಮೈಸೂರು :  ಪ್ರಾಚೀನ ಕಾಲದಲ್ಲಿಯೇ ಭಾರತದ ಶ್ರೀಮಂತಿಕೆಯ ವೈಭವವನ್ನು ಪಂಚತಂತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಡಾ. ಶತಾವಧಾನಿ ಆರ್‌. ಗಣೇಶ್‌ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಹಾಗೂ ಇಂದಿರಾ ಗಾಂಧಿ ರಾಷ್ಟಿ್ರೕಯ ಕಲಾ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಿದ್ದ ಪಂಚತಂತ್ರದಲ್ಲಿನ ಸಾಂಸ್ಕೃತಿಕ ವಿಚಾರಗಳ ಕುರಿತು ಅವರು ಉಪನ್ಯಾಸ ನೀಡಿದರು.

ಕೇವಲ ಮಣ್ಣು, ಮರಗಳನ್ನು ಬಹಳಸಿಕೊಂಡು ಸಂಪ್ರದಾಯ ಬದ್ಧವಾಗಿ ನಿರ್ಮಿಸಿಕೊಳ್ಳುತ್ತಿದ್ದರು. ಇನ್ನೂ ಆಭರಣಗಳ ವಿನ್ಯಾಸಗಳು ಬಹಳ ಅಪರೂಪದ್ದವಾಗಿದ್ದವು. ಹರಗಿನ ಮೂಲಕ ಒಡವೆಗಳನ್ನು ತಯಾರಿಸಿ ಧರಿಸುತ್ತಿದ್ದರು ಎಂಬ ಉಲ್ಲೇಖವಿದೆ. ಮಹಿಳೆಯರ ಪ್ರಾತಿನಿಧ್ಯವೂ ಇತ್ತು ಎಂದರು.

ಪಂಚತಂತ್ರದಲ್ಲಿನ ಸನಾತನ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಹರಪ್ಪ, ಮೆಹಂಜೋದಾರ್‌ ನಂತರ ಪ್ರಾಚೀನ ಕಾಲದಲ್ಲಿಯೇ ಭಾರತದ ಶ್ರೀಮಂತಿಕೆಯ ವೈಭವವನ್ನು ಪಂಚತಂತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂದು ಮಠ ಮಾನ್ಯಗಳು, ದೇವಸ್ಥಾನ, ಮನೆಗಳ ನಿರ್ಮಾಣಗಳು ಬಹಳ ವಿಶೇಷವಾಗಿ ವಿನ್ಯಾಸವಾಗಿದ್ದವು ಎಂದು ಅವರು ಹೇಳಿದರು.

ಆಹಾರ ಸಂಸ್ಕೃತಿಯಲ್ಲಿಯೂ ಸ್ವಾರಸ್ಯಗಳಿದ್ದವು. ಮಕ್ಕಳಿಗೆ ರಾಜನೀತಿಗೆ ಜೊತೆಗೆ ಹಲವು ಬಗೆಯ ಸ್ವಾರಸ್ಯಕರ ಅಧ್ಯಯನ ಜೊತೆಗೆ ಮನುಷ್ಯನು ಅನುಸರಿಬೇಕಾದ ಬದುಕಿನ ಪದ್ಧತಿಗಳು ಪಂಚತಂತ್ರದಲ್ಲಿವೆ ಎಂದರು.

ಪ್ರಾಚೀನ ಕಾಲದ ಸಂಗೀತಾಭ್ಯಾಸದ ಮಹ್ವತವನ್ನು ಸಾರಲಾಗಿತ್ತು. ವೇಣು, ಮೃದಂಗ, ಹಾವಡಿಗರು ಬಳಸುತ್ತಿದ್ದ ಪುಂಗಿ ಇನ್ನೂ ಅನೇಕ ಸಾಧನ ಸಲಕರಣೆಗಳು ಬಳಕೆಯಲ್ಲಿದ್ದವು ಎನ್ನುವುದರ ಜೊತೆಗೆ ಸಂಗೀತದ ಸ್ವಾರಸ್ಯದ ಬಗ್ಗೆ ಉಲ್ಲೇಖವಿದೆ. ರಾಜಮಹಾರಾಜರ ಅಸ್ಥಾನದಲ್ಲಿ ಸಂಗೀತ, ವಾದ್ಯ ಪಂಡಿರ ದೊಡ್ಡ ಬಳಗವೇ ಇತ್ತು ಎಂದು ಅವರು ತಿಳಿಸಿದರು.

ಕೆಲವು ಪುಣ್ಯಾವಂತರು ದೇಶ ವಿಭಜನೆಯನ್ನು ಒಪ್ಪುವುದಿಲ್ಲ. ಈಗಲೂ ದೇಶಭಕ್ತರಲ್ಲಿ ಆ ನೋವಿದೆ. ಆದರೆ, ದೇಶ ವಿಭಜನೆಯ ನೋವು ಅನುಭವಿಸಿದವರಿಗೆ ಸಂಕಟ ತಿಳಿಯುತ್ತಿಲ್ಲ. ಪಂಜಾಬ್‌, ಬಂಗಾಳವೇ ದ್ರೋಹ ಮಾಡುತ್ತಿವೆ. ಆದರೆ, ಮತ್ತೆ ದೇಶ ವಿಭಜನೆಯಾಗುವ ಕಡೆಗೆ ಸಾಗುತ್ತಿದೆಯೇನೂ ಅನ್ನುವಷ್ಟರ ಮಟ್ಟಿಗೆ ದೇಶದ್ರೋಹ, ದೇಶ ವಿಚಿತ್ರಕಾರಿ ಶಕ್ತಿಗಳೇ ಕೆರಳಿವೆ ಎಂದು ಅವರು ಹೇಳಿದರು.

ಪ್ರಾಚೀನ ಶಿಕ್ಷಣ ವ್ಯವಸ್ಥೆ ಮತ್ತೆ ಅವಶ್ಯಕ

ಬೆಂಗಳೂರು (ನ.20): ಭಾರತದ ಜೊತೆಗೆ ಜಗತ್ತಿನ ಉತ್ತಮ ಭವಿಷ್ಯಕ್ಕಾಗಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಚೀನ ಕಾಲದ ಬಹುಶಿಸ್ತೀಯ ಮತ್ತು ಅಂತರ್‌ ಶಿಸ್ತೀಯ ಶಿಕ್ಷಣ ವ್ಯವಸ್ಥೆಯನ್ನು ಮರು ಸ್ಥಾಪಿಸುವ ಅಗತ್ಯವಿದೆ ಎಂದು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ಗಣಿತಶಾಸ್ತ್ರಜ್ಞ ಪ್ರೊ.ಮಂಜುಲ್‌ ಭಾರ್ಗವ ಪ್ರತಿ ಪಾದಿಸಿದ್ದಾರೆ.

ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಚಾಣಕ್ಯ ವಿಶ್ವವಿದ್ಯಾಲಯ’ದ ಅಧಿಕೃತ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ (ಒಂದು ಪದವಿ ವಿಭಾಗದಲ್ಲಿ ಆ ವಿಭಾಗದ ವಿಷಯಗಳ ಜತೆಗೆ ಬೇರೆ ವಿಭಾಗದ ವಿಷಯಗಳನ್ನೂ ಅರ್ಥಾತ್‌ ವಿಜ್ಞಾನ ವಿಭಾಗದವರು ಕಲಾ, ವಾಣಿಜ್ಯ ಕೋರ್ಸುಗಳನ್ನೂ ಓದುವಂತಹದ್ದು) ಮತ್ತು ಅಂತರ್‌ ಶಿಸ್ತೀಯ (ಒಂದಕ್ಕೊಂದು ಸಂಬಂಧ ಇರುವ ಎರಡು ವಿಷಯಗಳನ್ನು ಒಟ್ಟಿಗೆ ಓದುವುದು) ಅಧ್ಯಯನಕ್ಕೆ ಅವಕಾಶಗಳಿದ್ದವು. ಅಂತಹ ಅಧ್ಯಯನ ವ್ಯವಸ್ಥೆ ಇಂದಿನ ಉನ್ನತ ಶಿಕ್ಷಣದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕಿದೆ. ಇದರಿಂದ ದೇಶ ಮುಂಚೂಣಿಗೆ ಸಾಗಲಿದೆ. ಜತೆಗೆ ಜಾಗತಿಕ ಭವಿಷ್ಯಕ್ಕೂ ಈ ಶಿಕ್ಷಣ ವ್ಯವಸ್ಥೆ ಅಗತ್ಯವಾಗಿದೆ ಎಂದು ಹೇಳಿದರು.

Chanakya University: ಚಾಣಕ್ಯ ವಿವಿಯಲ್ಲಿ ಉನ್ನತ ಶಿಕ್ಷಣದ ಹೊಸ ಪ್ರಯೋಗ

ಜಗತ್ತಿನ ಎಲ್ಲ ಶ್ರೇಷ್ಠ ಆವಿಷ್ಕಾರಗಳು ಬಹುಶಿಸ್ತೀಯ ವ್ಯವಸ್ಥೆಯಲ್ಲೇ ಹೊರಬಂದವು. ಜಾಗತಿಕ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಈ ಶಿಕ್ಷಣ ವ್ಯವಸ್ಥೆಗಳು ಯಶಸ್ವಿಯಾಗಿವೆ. ಪ್ರತಿ ಅಧ್ಯಯನವೂ ಒಂದಕ್ಕೊಂದು ಸಂಪರ್ಕ ಸೃಷ್ಟಿಸುವಂತಿರಬೇಕು. ಆಗ ನಮ್ಮ ವಿದ್ಯಾರ್ಥಿಗಳು ಒಂದು ವಿಷಯ ಅಥವಾ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲವನ್ನೂ ಒಳಗೊಂಡು ಹೊಸ ಆವಿಷ್ಕಾರಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದರು.

ಶೂನ್ಯ ಅಥವಾ ಸೊನ್ನೆಯನ್ನು ಕಂಡು ಹಿಡಿದಿದ್ದು ಭಾರತೀಯರು. ಇದೇ ಮುಂದೆ 1ರಿಂದ 9ರ ವರೆಗಿನ ಅಂಕಿಗಳನ್ನು ಶೋಧಿಸುವ ಮೂಲಕ ಗಣಿತದ ಬೆಳವಣಿಗೆಗೆ ನಾಂದಿ ಆಯಿತು. ಅದೇ ರೀತಿ ಪ್ರತಿ ಕ್ಷೇತ್ರವೂ ಆರಂಭವಾಗುವುದು ಶೂನ್ಯದಿಂದಲೇ. ಶೂನ್ಯವೇ ಎಲ್ಲ ಸಾಧನೆಗೂ ಬುನಾದಿ. ಹೀಗೆ ಯಾವುದೇ ಹೊಸ ವಿಚಾರ ಜಗತ್ತಿನ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಅದನ್ನು ಬಳಸಿಕೊಂಡು ಮುಂದಕ್ಕೆ ಬೆಳೆಸುವ ಅಥವಾ ಒಳ್ಳೆಯ ರೂಪ ಕೊಡುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಾಗುತ್ತದೆ. ಸ್ಟೀವ್‌ ಜಾಬ್ಸ್‌ ಕಂಪನಿ ಮಾಡಿದ್ದು ಇದನ್ನೆ. ಇಂದಿಗೂ ಆ ಕಂಪನಿ ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

click me!