ಇದು ನಮ್ಮದೆ ಗ್ರಾಮ ಪಂಚಾಯಿತಿ ಪಿಡಿಓ ಒಬ್ಬರ ಕತೆ/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೋ/ ಛತ್ರಿ ಹಿಡಿದುಕೊಂಡಿರುವ ಗ್ರಾಮಸ್ಥ/ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನೆ
ಬೆಂಗಳೂರು/ ಮೈಸೂರು(ಅ. 20) ಇದೊಂದು ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ಏನೋ ಕೆಲಸ ನಡೆಯುತ್ತಿದ್ದು ವ್ಯಕ್ತಿಯೊಬ್ಬ ಮಹಿಳೆಗೆ ಛತ್ರಿ ಹಿಡಿದು ನಿಂತಿದ್ದಾನೆ.. ಇಷ್ಟು ಮೇಲು ನೋಟಕ್ಕೆ ಕಾಣುವ ಸತ್ಯ.
ಆದರೆ ಇಲ್ಲಿ ಅಸಲಿ ಕತೆ ಬೇರೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಪೋಸ್ಟ್ ಮಾಡಿದವರು ಅದನ್ನು ವಿವರಿಸಿದ್ದಾರೆ. ಮೈಸೂರು ಜಿಲ್ಲಾ ಪಂಚಾಯಿತಿ ಹೊಸ ಅಗ್ರಹಾರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕತೆ.
undefined
ಬಾಲಕನ ಮೇಲೆ ಪೊಲೀಸಪ್ಪನ ದರ್ಪ, ಥಳಿಸಿದ್ದಕ್ಕೆ ಈಗ ನಡುಕ
ಮಾನ್ಯ ನರೇಂದ್ರ ಮೋದಿಯವರೆ ನೀವು ಇದನ್ನು ನಂಬಲಿಕ್ಕೂ ಸಾಧ್ಯವಿಲ್ಲ. ನೀವು ದೇಶದ ಸೇವಕ ಎಂದು ಹೇಳಿದ್ದೀರಿ.. ಆದರೆ ನಾವು ಕೆಲವು ಪಿಡಿಒಗಳ ಚಿತ್ರ ನಿಮ್ಮ ಮುಂದೆ ಇಡುತ್ತಿದ್ದೇವೆ. ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷ್ ಅಧಿಕಾರಿಗಳು ನಡೆದುಕೊಳ್ಳುವಂತೆ ವರ್ತಿಸುತ್ತಿದ್ದಾರೆ ಎಂದು ಪೋಟೋ ಅಪ್ ಲೋಡ್ ಮಾಡಿ ವಿವರ ಬರೆಯಲಾಗಿದೆ. ಇಂಥವರಿಗೆಲ್ಲ ಬುದ್ಧಿ ಕಲಿಸುವವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸರಣಿ ಪ್ರತಿಕ್ರಿಯೆಗಳು ಬಂದಿದ್ದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಟ್ಯಾಗ್ ಮಾಡಿ ಪ್ರಶ್ನೆ ಕೇಳಲಾಗಿದೆ.
This is Panchayat Development Officer of HosaAgrahara GP Mysore.
Even Bhai will not behave like this. He considers himself a sevak. Here we have PDOs who behave like pre independence era British officers
Who will rein them in?
cc
will there be any action pic.twitter.com/WG6MR4Tv4N