ಮೈಸೂರು ಸಿಂಹಾಸನ ಸಾರ್ವಜನಿಕರ ವೀಕ್ಷಣೆಗೆ ಲಭ್ಯ

Kannadaprabha News   | Asianet News
Published : Sep 25, 2020, 07:21 AM IST
ಮೈಸೂರು ಸಿಂಹಾಸನ ಸಾರ್ವಜನಿಕರ ವೀಕ್ಷಣೆಗೆ ಲಭ್ಯ

ಸಾರಾಂಶ

ಮೈಸೂರು ರಾಜಮನೆತನದ ಸಿಂಹಾಸನವೂ ಇದೀಗ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಇನ್ಮುಂದೆ  ಸಿಂಹಾಸನವನ್ನು ನೋಡಬಹುದಾಗಿದೆ.

ಮೈಸೂರು (ಸೆ.25): ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಜೋಡಿಸಲಾದ ರತ್ನಖಚಿತ ಸಿಂಹಾಸನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.

50 ರು. ದರ ನಿಗದಿಪಡಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಸಿಂಹಾಸನ ವೀಕ್ಷಿಸಬಹುದು. ಸಾರ್ವಜನಿಕರು ಸಿಂಹಾಸನದ ಹತ್ತಿರ ಹೋಗದಂತೆ ಪರದೆ ಬಿಟ್ಟಿದ್ದು, ಬ್ಯಾರಿಕೇಡ್‌ ಕೂಡ ಅಳವಡಿಸಲಾಗಿದೆ. ಅ.17ರಿಂದ ನವರಾತ್ರಿ ಕಾರ್ಯಕ್ರಮಗಳು ಆರಂಭವಾಗುವ ಹಿನ್ನೆಲೆಯಲ್ಲಿ ಶುಭಲಗ್ನ ಮತ್ತು ನಕ್ಷತ್ರದಲ್ಲಿ ಸಿಂಹಾಸನ ಜೋಡಿಸಲಾಗಿದೆ.

ಈ ಬಾರಿ ದಸರಾ ಚಾಲನೆ ಮಾಡೋರು ಇವರೇ ! ...

ಅರಮನೆಯ ರಾಜಮನೆತನದವರು ಇದಕ್ಕೆ ಪ್ರತ್ಯೇಕವಾಗಿ ವಯಸ್ಕರಿಗೆ ಮತ್ತು ಮಕ್ಕಳಿಗೆ 50 ರು. ದರ ನಿಗದಿಪಡಿಸಿದ್ದಾರೆ. ಅರಮನೆ ಪ್ರವೇಶಕ್ಕೆ ಅರಮನೆ ಮಂಡಳಿಯಿಂದ ವಯಸ್ಕರಿಗೆ 70 ಮತ್ತು ಮಕ್ಕಳಿಗೆ 35 ರು. ದರ ನಿಗದಿಪಡಿಸಲಾಗಿದೆ. ಸಿಂಹಾಸನ ವೀಕ್ಷಣೆಗೆ ಟಿಕೆಟ್‌ ಪಡೆದವರಿಗೆ ಹಳದಿ ಬಣ್ಣದ ಬ್ಯಾಂಡ್‌ ಧರಿಸಲಾಗುತ್ತದೆ. ಸಿಂಹಾಸನದ ಛಾಯಾಚಿತ್ರ ಸೆರೆಹಿಡಿಯಲು ಅವಕಾಶವಿಲ್ಲ.

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ